Kumba Mela: ‘ಮಹಾಕುಂಭ ಮೇಳವನ್ನು ಯುದ್ದಭೂಮಿಯನ್ನಾಗಿಸುವೆ’- ಖಲಿಸ್ತಾನಿ ಉಗ್ರ ಪನ್ನುನ್ ಬೆದರಿಕೆ.!

Share the Article

Kumba Mela: ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಉತ್ಸವ ಎನಿಸಿರುವ ಕುಂಭ ಮೇಳ(Kumbh Mela) ನೆರವೇರಲಿದೆ. ಈ ಹಿನ್ನಲೆಯಲ್ಲಿ ಮದುವಣಗಿತ್ತಿಯಂತೆ ಇಡೀ ರಾಜ್ಯ ಸಿಂಗಾರಗೊಂಡಿದೆ. ಈ ಉತ್ಸವವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು, ಯಾತ್ರಿಕರು ಆಗಮಿಸುತ್ತಿದ್ದಾರೆ. ಸಾಧು-ಸಂತರು ಕುಂಭ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಹಾಕುಂಭಮೇಳಕ್ಕೆ ಅಡ್ಡಿಪಡಿಸುವುದಾಗಿ ನಿಷೇಧಿತ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್ ನಾಯಕ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಹೊಸ ಬೆದರಿಕೆ ಹಾಕಿದ್ದಾನೆ.

ಹೌದು, ನಿಷೇಧಿತ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್ ನಾಯಕ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ “ಮಹಾಕುಂಭ ಪ್ರಯಾಗ್’ರಾಜ್ 2025 ಯುದ್ಧಭೂಮಿಯಾಗಲಿದೆ” ಎಂದು ಘೋಷಿಸಿದ್ದಾನೆ. ಹತ್ತು ದಿನಗಳಲ್ಲಿ ಮಹಾಕುಂಭವನ್ನು ಗುರಿಯಾಗಿಸಿಕೊಂಡು ಪನ್ನುನ್ ಅವರ ಎರಡನೇ ಬೆದರಿಕೆ ಇದಾಗಿದೆ.

ಇನ್ನು ಆತ ಲಕ್ನೋ ಮತ್ತು ಪ್ರಯಾಗ್ರಾಜ್ ವಿಮಾನ ನಿಲ್ದಾಣಗಳಲ್ಲಿ ಖಲಿಸ್ತಾನಿ ಮತ್ತು ಕಾಶ್ಮೀರಿ ಧ್ವಜಗಳನ್ನು ಹಾರಿಸುವಂತೆ ತಮ್ಮ ಬೆಂಬಲಿಗರನ್ನು ಒತ್ತಾಯಿಸಿದ್ದಾನೆ.

Comments are closed.