Kumba Mela: ಇಡೀ ಕುಂಭ ಮೇಳದ ಕೇಂದ್ರಬಿಂದು ಈ ಸಾಧು – ಆದ್ರೆ 32 ವರ್ಷಗಳಿಂದ ಸ್ನಾನ ಮಾಡಿಲ್ಲಂತೆ ಈ ‘ಛೋಟಾ ಬಾಬಾ’ !!

Kumba Mela: ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಉತ್ಸವ ಎನಿಸಿರುವ ಕುಂಭ ಮೇಳಕ್ಕೆ (Kumbh Mela) ಉತ್ತರ ಪ್ರದೇಶ ಸಜ್ಜಾಗಿದೆ. ಮದುವಣಗಿತ್ತಿಯಂತೆ ಇಡೀ ರಾಜ್ಯ ಸಿಂಗಾರಗೊಂಡಿದೆ. ಈ ಉತ್ಸವವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು, ಯಾತ್ರಿಕರು ಆಗಮಿಸುತ್ತಿದ್ದಾರೆ. ಸಾಧು-ಸಂತರು ಕುಂಭ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ನಡುವೆ ಕುಂಭ ಮೇಳಕ್ಕೆ ಆಗಮಿಸುತ್ತಿರುವ ಛೋಟು ಬಾಬಾ (Chhotu Baba) ಅವರು ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ಹಾಗಿದ್ದರೆ ಯಾರು ಈ ಬಾಬಾ? ಇವರ ವಿಶೇಷತೆ ಏನು? ಇಲ್ಲಿದೆ ನೋಡಿ ಡಿಟೇಲ್ಸ್

 

 

ಛೋಟು ಬಾಬಾ, ಗಂಗಾಪುರಿ ಮಹಾರಾಜ್ ಎಂದು ಖ್ಯಾತರಾಗಿರುವವರು. ತಮ್ಮ ಆಧ್ಯಾತ್ಮಿಕ ಜೀವನವನ್ನು ಅಸ್ಸಾಂನ ಕಾಮಾಖ್ಯ ಪೀಠದಿಂದ ಆರಂಭಿಸಿದ್ದಾರೆ. ಅವರು ತಮ್ಮ ಜೀವನದಲ್ಲಿ ನಿರಂತರ ಶ್ರದ್ಧೆ, ಸಮರ್ಪಣೆ ಮತ್ತು ಪವಿತ್ರತೆಗಾಗಿ ಕಠಿಣ ಮಾರ್ಗವನ್ನು ಅನುಸರಿಸಿದ್ದಾರೆ. 57 ವರ್ಷ ವಯಸ್ಸಿನ ಬಾಬಾ ಅವರು ಮೂರು ಅಡಿ ಎತ್ತರವಿದ್ದಾರೆ. ‘ನಾನು 3 ಅಡಿ 8 ಇಂಚು ಎತ್ತರ ಇದ್ದೇನೆ. ನನಗೆ 57 ವರ್ಷ. ಇಲ್ಲಿಗೆ ಬರಲು ನನಗೆ ತುಂಬಾ ಸಂತೋಷವಾಗಿದೆ. ಅವರೇ ಹೇಳಿದ್ದಾರೆ. ಅಲ್ಲದೆ ವಿಶೇಷ ಹಾಗೂ ವಿಚಿತ್ರ ಏನಂದರೆ ಸುಮಾರು 32 ವರ್ಷಗಳಿಂದ ಈ ಬಾಬಾ ಸ್ನಾನನೇ ಮಾಡಿಲ್ಲ ಅಂತೆ!!

 

ಹೌದು, ನಾನು 32 ವರ್ಷಗಳಿಂದ ಸ್ನಾನ ಮಾಡಿಲ್ಲ, ಎಂದು ಈ ಚೋಟು ಬಾಬಾ ಅವರೇ ಘೋಷಣೆ ಮಾಡಿದ್ದಾರೆ. ತಮ್ಮ ಆಸೆ ಈಡೇರದ ಕಾರಣ 32 ವರ್ಷಗಳಿಂದ ತಾವು ಸ್ನಾನವನ್ನು ಮಾಡಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. 32 ವರ್ಷಗಳಿಂದ ಸ್ನಾನ ಮಾಡದ ಗಂಗಾಪುರಿ ಮಹಾರಾಜರು ಉತ್ತರ ಪ್ರದೇಶದ ಪ್ರಯಾಗರಾಜ್ ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ.

 

ಅಲ್ಲದೆ ಪ್ರತಿ 12 ವರ್ಷಗಳಿಗೊಮ್ಮೆ ಉತ್ತರ ಪ್ರದೇಶದಲ್ಲಿ ನಡೆಯುವ ಈ ಮಹಾಕುಂಭ ಮೇಳವು ಅನೇಕ ಭಕ್ತರು ತಮ್ಮ ಪಾಪಗಳಿಂದ ಮುಕ್ತವಾಗಲು ಮತ್ತು ಶುದ್ಧರಾಗಲು ಗಂಗಾಸ್ನಾನ ಮಾಡುವ ವೇದಿಕೆಯಾಗಿದೆ. ಆದರೆ, ಛೋಟು ಬಾಬಾ, ಈ ಬಾರಿಯೂ ಗಂಗಾಸ್ನಾನವನ್ನು ತಪ್ಪಿಸಿದ್ದಾರೆ.

Comments are closed, but trackbacks and pingbacks are open.