Temple Culture : ದೇವಾಲಯದಲ್ಲಿ ಪುರುಷರು ಶರ್ಟ್, ಬನಿಯನ್ ತೆಗೆಯುವ ಪದ್ಧತಿ ಈ ಕಾರಣಕ್ಕಾಗಿ ಹುಟ್ಟಿಕೊಂಡಿತೆ? ಗೊತ್ತಾದ್ರೆ ನಿಮಗೂ ಶಾಕ್ ಆಗ್ಬೋದು !!

Temple Culture : ರಾಜ್ಯದ ಹಾಗೂ ದೇಶದ ಹಲವು ದೇವಾಲಯಗಳಲ್ಲಿ ನಾವು ಒಂದೇ ರೀತಿಯ ಒಂದು ಸಂಪ್ರದಾಯವನ್ನು ಕಾಣಬಹುದು. ಅದೇನೆಂದರೆ ದೇವಸ್ಥಾನ ಪ್ರವೇಶಿಸುವಾಗ ಪುರುಷರು ಮೇಲಂಗಿ ತೆಗೆಯುವು. ಇದು ಯಾಕೆ? ಏನು? ಎಂದು ನಾವು ಯಾವತ್ತೂ ಆಲೋಚಿಸದೆ ದೇವಾಲಯಕ್ಕೆ ಹೋದಾಗ ಅಲ್ಲಿನ ಸಿಬ್ಬಂದಿ ಸೂಚಿಸುವಂತೆ ಶರ್ಟ್ ಬನಿಯನ್ ತೆಗೆದು ದೇವಾಲಯ ಪ್ರವೇಶಿಸುತ್ತೇವೆ. ಆದರೆ ಈಗ ಈ ವಿಚಾರ ತಡವಾಗಿಯಾದರೂ ಬೇಗ ಎಂಬಂತೆ ಚರ್ಚೆಗೆ ಬಂದಿದೆ. ಅಚ್ಚರಿ ಏನೆಂದರೆ ‘ದೇವರ ನಾಡು’ ಕೇರಳದಲ್ಲೇ ಈ ವಿಚಾರ ಮುನ್ನಲೆಗೆ ಬಂದಿದೆ.

 

 

ಸಮಾಜ ಸುಧಾರಕ ನಾರಾಯಣ ಗುರು ಸ್ಥಾಪಿಸಿದ ಶಿವಗಿರಿ ಮಠದ ವಾರ್ಷಿಕ ಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಶಿವಗಿರಿ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ಅವರು ದೇವಾಲಯಗಳಲ್ಲಿ ಪುರುಷರು ಮೇಲಂಗಿ ತೆಗೆಯುವ ವಿಚಾರವನ್ನು ಪ್ರಸ್ತಾಪಿಸಿ, ವಿರೋಧಿಸಿ ಇದನ್ನು ರದ್ದು ಮಾಡಬೇಕೆಂದು ಆಗ್ರಹಿಸಿದ್ದರು. ಅಲ್ಲದೆ ಪುರುಷರು ಜನಿವಾರ ಧರಿಸಿದ್ದಾರೆಯೇ, ಇಲ್ಲವೇ? ಎಂಬುದನ್ನು ಪರಿಶೀಲಿಸಲು ಮೇಲಂಗಿ ತೆಗೆಯಲು ಹೇಳಲಾಗುತ್ತಿತ್ತು. ಇದು ಸಾಮಾಜಿಕ ಪಿಡುಗು. ಇನ್ನಾದರೂ ಈ ಪದ್ಧತಿ ಕೊನೆಗೊಳಿಸಬೇಕಿದೆ’ ಎಂದು ಆಗ್ರಹಿಸಿದ್ದರು.

 

ಇದೇ ವೇಳೆ ಕೇರಳ ಸಿಎಂ ಪಿಣರಾಯಿ ವಿಜಯನ್ (Pinarayi Vijayan) ಮಾತನಾಡಿ, ಶ್ರೀಗಳ ಮಾತಿಗೆ ಬೆಂಬಲ ಸೂಚಿಸಿದ್ದರು. ಈ ಬೆನ್ನಲ್ಲೇ ಅವರು ಪುರುಷರು ದೇವಾಲಯದಲ್ಲಿ ಮೇಲಂಗಿ ತೆಗೆಯುವುದನ್ನು ಕಡ್ಡಾಯಗೊಳಿಸುವ ಪದ್ಧತಿಯನ್ನು ರದ್ದುಗೊಳಿಸಲು ಕೇರಳ ದೇವಸ್ವಂ ಮಂಡಳಿ ಚಿಂತನೆ ನಡೆಸಿದೆ ಎಂದು ಹೇಳಿದ್ದಾರೆ. ಒಂದು ವೇಳೆ ಆ ನಿಯಮ ಜಾರಿಯಾದ್ರೆ, 3000 ದೇವಸ್ಥಾನಗಳ ವಸ್ತ್ರ ಸಂಹಿತೆಯೇ ಬದಲಾಗೋ ಸಾಧ್ಯತೆಯೂ ಇದೆ. ಕೇರಳ ಸರ್ಕಾರದ ಈ ನಿರ್ಧಾರ ಭಾರೀ ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಅಲ್ಲದೆ ರಾಷ್ಟ್ರಾದ್ಯಂತ ಇದರ ಕಿಚ್ಚು ಹರಡುವ ಸಂಭವ ಎದ್ದು ಕಾಣುತ್ತಿದೆ.

Comments are closed, but trackbacks and pingbacks are open.