Mumbai: ಪಿಜ್ಜಾ ಆರ್ಡರ್‌ ಮಾಡುವ ಮೊದಲು ಎಚ್ಚರ; ಪಿಜ್ಜಾದೊಳಗಿತ್ತು ಚಾಕುವಿನ ತುಂಡು

ಪಿಜ್ಜಾ ಎಲ್ಲರೂ ಇಷ್ಟ ಪಡುವ ಆಹಾರ. ಬಹುತೇಕ ಮಂದಿ ಆನ್ಲೈನ್‌ನಲ್ಲಿ ಪಿಜ್ಜಾ ಆರ್ಡರ್‌ ಮಾಡಿ ರುಚಿ ಸವಿಯುತ್ತಾರೆ. ಆದರೆ ಇನ್ನು ಮುಂದೆ ಆರ್ಡ್‌ರ್‌ ಮಾಡಿದ ಪಿಜ್ಜಾ ತಿನ್ನುವ ಮೊದಲು ಈ ಸುದ್ದಿ ಓದಿ.!

Mumbai: ಮಹಾರಾಷ್ಟ್ರದ ಪುಣೆಯ ಪಿಜ್ಜಾ ಪ್ರಿಯರ ಪಾಲಿಗೆ ಆಘಾತಕಾರಿ ಘಟನೆಯೊಂದು ನಡೆದಿದೆ. ಇಲ್ಲಿನ ಕುಟುಂಬವೊಂದು ರಾತ್ರಿ ಪಿಜ್ಜಾ ಆರ್ಡರ್ ಮಾಡಿದ್ದು, ಆದರೆ ತಿನ್ನುವಾಗ ನಡೆದ ಘಟನೆಯೊಂದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಪಿಜ್ಜಾದಲ್ಲಿ ಮುರಿದ ಚಾಕು ಇರುವುದು ಕಂಡು ಬಂದಿದೆ. ಇದನ್ನು ನೋಡಿ ಮನೆ ಮಂದಿ ಶಾಕ್‌ಗೆ ಒಳಗಾಗಿದ್ದಾರೆ. ಪಿಜ್ಜಾದಲ್ಲಿ ಚಾಕು ಇದ್ದಿರುವ ಕುರಿತು ದೂರು ನೀಡಿದ ನಂತರ, ಪಿಜ್ಜಾ ಕಂಪನಿ ಹಣವನ್ನು ಹಿಂದಿರುಗಿಸಿದೆ.

 

ಪುಣೆಯ ಪಿಂಪ್ರಿ-ಚಿಂಚ್‌ವಾಡ್ ನಗರದ ಭೋಸಾರಿ ಪ್ರದೇಶದ ಇಂದ್ರಾಯಾನಿ ನಗರದಲ್ಲಿ ಪಿಜ್ಜಾದರಲ್ಲಿ ಚಾಕು ಕಂಡು ಬಂದಿರುವ ಘಟನೆ ಬೆಳಕಿಗೆ ಬಂದಿದೆ. ಅರುಣ್ ತನ್ನ ಹಲ್ಲಿನಲ್ಲಿ ಸಿಕ್ಕಿಹಾಕಿಕೊಂಡ ಏನೆಂದು ನೋಡಿದಾಗ ಚಾಕು ತುಂಡು ನೋಡಿ ಗಾಬರಿಗೊಂಡಿದ್ದಾರೆ.

ಅರುಣ್ ತನ್ನ ಹಲ್ಲಿನಲ್ಲಿ ಯಾವುದೋ ಚೂಪಾದ ವಸ್ತು ಸಿಕ್ಕಿಹಾಕಿಕೊಂಡಿರುವುದನ್ನು ಅರಿತು, ಹೊರತೆಗೆದಾಗ ಅದು ಪಿಜ್ಜಾ ತಿನ್ನುವಾಗ ಬಾಯಿಗೆ ಬಂದ ಚಾಕುವಿನ ತುಂಡಾಗಿತ್ತು. ಇದಾದ ಬಳಿಕ ತಕ್ಷಣವೇ ಪಿಜ್ಜಾ ಕಂಪನಿಯ ಮ್ಯಾನೇಜರ್‌ಗೆ ಕರೆ ಮಾಡಿ ಪಿಜ್ಜಾದಲ್ಲಿ ಚಾಕು ಇರುವುದನ್ನು ತಿಳಿಸಿದ್ದಾರೆ. ಇದಾದ ನಂತರ ಮ್ಯಾನೇಜರ್ ಅರುಣ್‌ಗೆ ಪಿಜ್ಜಾ ಆರ್ಡರ್‌ ಮಾಡಿದ ಹಣ 599 ರೂ. ವನ್ನು ಹಿಂದಿರುಗಿಸಿದ್ದಾರೆ.

ಆದರೆ, ಅರುಣ್ ಪಿಜ್ಜಾ ಕಂಪನಿ ವಿರುದ್ಧ ಪುಣೆ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಗೆ ದೂರು ನೀಡುವ ಬಗ್ಗೆ ಯೋಚನೆ ಮಾಡುತ್ತಿದ್ದು, ಪಿಜ್ಜಾ ಕಂಪನಿ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದಿದ್ದಾರೆ.

Comments are closed, but trackbacks and pingbacks are open.