Lucknow: ವಿವಾಹದ ಮಧ್ಯೆ ಬಾತ್‌ರೂಂಗೆ ಹೋದ ವಧು; ಚಿನ್ನ, ನಗದು ಜೊತೆ ಎಸ್ಕೇಪ್‌

Lucknow: ವಧುವೊಬ್ಬಳು ಮದುವೆ ಸಂದರ್ಭದಲ್ಲಿ ಮಂಟಪದಿಂದ ಪರಾರಿಯಾಗಿರುವ ಘಟನೆಯೊಂದು ಉತ್ತರ ಪ್ರದೇಶದ ಗೋರಖ್‌ಪುರ್‌ನಲ್ಲಿ ನಡೆದಿದೆ.

ಸೀತಾಪುರದ ಗೋವಿಂದಾಪುರ ಗ್ರಾಮದ ರೈತ ಕಮಲೇಶ್‌ ಎನ್ನುವವರು ಮೊದಲಿಗೆ ಮದುವೆಯಾಗಿದ್ದು, ಪತ್ನಿ ಕಳೆದುಕೊಂಡಿದ್ದರು. ಇತ್ತೀಚೆಗೆ ಎರಡನೇ ಮದುವೆ ಆಗಲು ರೆಡಿಯಾಗಿದ್ದು, ಕೆಲ ಸಂಬಂಧಗಳನ್ನು ನೋಡಿದ ನಂತರ ದಲ್ಲಾಳಿ ತೋರಿಸಿದ ಓರ್ವ ಹೆಣ್ಣನ್ನು ಮದುವೆ ಆಗುವುದಾಗಿ 30ಸಾವಿರ ಹಣವನ್ನು ದಲ್ಲಾಳಿಗೆ ಕೊಟ್ಟು ಮದುವೆಗೆ ಸಿದ್ಧರಾಗಿದ್ದರು.

 

ಕಮಲೇಶ್‌ (40) ಜೊತೆ ವಧು ಮದುವೆಗೆ ತಮ್ಮ ತಾಯಿ ಜೊತೆ ಭರೋಹಿಯಾದ ಶಿವ ದೇವಾಲಯಕ್ಕೆ ಬಂದಿದ್ದು, ಇನ್ನೇನು ಕೆಲವೇ ನಿಮಿಷದಲ್ಲಿ ತಾಳಿ ಕಟ್ಟಿ ಮದುವೆ ಮುಗಿಯುವ ಹೊತ್ತಿನಲ್ಲಿ ವಧು ಬಾತ್‌ರೂಮ್‌ಗೆ ಹೋಗುವುದಾಗಿ ಹೇಳಿದ್ದಾಳೆ. ಅಲ್ಲಿಂದಲೇ ಆಕೆ ಚಿನ್ನ, ನಗದು ತೆಗೆದುಕೊಂಡು ಓಡಿ ಹೋಗಿ ಪರಾರಿಯಾಗಿದ್ದಾಳೆ. ನಂತರ ವಧುವಿನ ತಾಯಿ ಕೂಡಾ ಪರಾರಿಯಾಗಿದ್ದಾಳೆ.

ಸೀರೆ, ಬ್ಯೂಟಿ ಪ್ರಾಡೆಕ್ಸ್ಟ್‌, ಆಭರಣಗಳನ್ನು ವಧುವಿಗೆ ನೀಡಿದ್ದೆ. ಮದುವೆ ಖರ್ಚು ಕೂಡಾ ಭರಿಸಿದ್ದೆ. ಈಗ ಎಲ್ಲಾ ಕಳೆದುಕೊಂಡೆ ಎಂದು ಕಮಲೇಶ್‌ ಮಾಧ್ಯಮದ ಮುಂದೆ ಹೇಳಿದ್ದಾರೆ.

ಈ ಮದುವೆ ಕುರಿತು ದೂರು ದಾಖಲಾಗಿಲ್ಲ. ದೂರು ದಾಖಲಾದರೆ ತನಿಖೆ ಮಾಡಲಾಗುವುದು ಎಂದು ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

Comments are closed, but trackbacks and pingbacks are open.