Bigg Boss: ಇಂದು ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ಯಾರು? ಗೊತ್ತಾದ್ರೆ ಖಂಡಿತ ನಿಮಗೆ ಬೇಸರ ಆಗುತ್ತೆ!!

Bigg Boss: ಬಿಗ್ ಬಾಸ್ ಕನ್ನಡ ಸೀಸನ್-11 ಮುಕ್ತಾಯದ ಹಂತದಲ್ಲಿದೆ. ಫ್ಯಾಮಿಲಿ ವೀಕ್ ಮುಗಿಸಿ ಬಹಳ ಸಂತೋಷದಿಂದಿದ್ದ ಸ್ಪರ್ಧಿಗಳಿಗೆ ನಿನ್ನೆ ನಡೆದ ವಾರಾಂತ್ಯದ ಕಿಚ್ಚನ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರು ಮನೆ ಮಂದಿಗೆಲ್ಲ ಕ್ಲಾಸ್ ತೆಗೆದುಕೊಂಡಿದ್ದಾರೆ. ಇನ್ನು ಇಂದಿನ ಎಪಿಸೋಡ್ ನಲ್ಲಿ ಮನೆ ಮಂದಿಯನ್ನೆಲ್ಲ ಕಿಚ್ಚ ಸುದೀಪ್ ಅವರು ನಕ್ಕು. ಈ ಕುರಿತು ಪ್ರೊಮೋ ಅನ್ನು ಕಲರ್ಸ್ ಹಂಚಿಕೊಂಡಿದೆ. ಈ ಬೆನ್ನಲ್ಲೇ ಈ ವಾರ ಮನೆಯಿಂದ ಹೊರ ಹೋಗುವ ಸ್ಪರ್ದಿ ಯಾರೆಂಬುದು ಕುತೂಹಲ.

 

 

ಹೌದು, ಬಿಗ್ ಬಾಸ್ ವೀಕ್ಷಕರಿಗೆ ಈ ವಾರ ಮನೆಯಿಂದ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದು ತೀವ್ರ ಕುತೂಹಲವಾಗಿದೆ. ಪ್ರಬಲ ಕಂಟೆಸ್ಟೆಂಟ್ಗಳ ನಡುವೆ ಯಾರು ಎಲಿಮಿನೇಟ್ ಆಗಿ ದೊಡ್ಮನೆಯಿಂದ ಔಟ್ಆ ಗುತ್ತಾರೆ ಎಂದು ನೋಡಲು ಜನ ಕಾತರರಾಗಿದ್ದಾರೆ. ಆದರೆ ಎಲಿಮಿನೇಷನ್ ವಿಚಾರಕ್ಕೆ ಬಂದರೆ ಈ ವಾರ ಯಾರೂ ಕೂಡ ಮನೆಯಿಂದ ಹೊರ ಬಂದಿಲ್ಲ. 3 ದಿನಗಳ ಹಿಂದೆಯೇ ಈ ಬಗ್ಗೆ ವೀಕ್ಷಕರಿಗೆ ಸುಳಿವು ಸಿಕ್ಕಿತ್ತು. ಕಾರಣ ವೋಟಿಂಗ್ ಲೈನ್ ಓಪನ್ ಆಗಿರಲಿಲ್ಲ. ಎಲಿಮಿನೇಷನ್ ನಡೆಯದ ವಾರಗಳಲ್ಲಿ ಈ ರೀತಿ ಆಗುತ್ತದೆ. ಈ ವಾರವೂ ಅದೇ ಜರುಗುತ್ತದೆ.

 

ಸದ್ಯ ಇಬ್ಬರು ವೈಲ್ಡ್‌ಕಾರ್ಡ್ ಎಂಟ್ರಿ ಸೇರಿ 9 ಜನ ಸ್ಪರ್ಧಿಗಳು ಬಿಗ್‌ಬಾಸ್ ಮನೆಯೊಳಗೆ ಇದ್ದಾರೆ. ಶೀಘ್ರದಲ್ಲೇ ಫಿನಾನೆ ಇರುವುದರಿಂದ ಮುಂದಿನ ವಾರದ ನಡುವೆಯೇ ಬಿಗ್‌ಬಾಸ್ ಮನೆಯಿಂದ ಯಾರಾದರೂ ಎಲಿಮಿನೇಟ್ ಆಗುವ ಸಾಧ್ಯತೆ ದಟ್ಟವಾಗಿದೆ. ಇಬ್ಬರು ಮನೆಯಿಂದ ಹೊರ ಬಂದರೂ ಅಚ್ಚರಿಪಡಬೇಕಿಲ್ಲ.

 

ಅದ್ಯಾಕೋ ಪದೇ ಪದೆ ಎಲಿಮಿನೇಷನ್‌ ಪ್ರಕ್ರಿಯೆ ಮುಂದೂಡಲಾಗುತ್ತಿದೆ. ಈ ಸೀಸನ್‌ನಲ್ಲಿ ನೋ ಎಲಿಮಿನೇಷನ್ ವಾರಗಳೇ ಜಾಸ್ತಿಯಿದೆ. ಆದರೆ ಹಿಂದಿನ ಸೀಸನ್‌ಗಳಲ್ಲಿ ಈ ರೀತಿ ಆಗುತ್ತಿರಲಿಲ್ಲ. ಈ ಬಗ್ಗೆ ವೀಕ್ಷಕರು ಬೇಸರ ಹೊರ ಹಾಕುತ್ತಿದ್ದಾರೆ. 100 ದಿನಗಳು ಮುಗಿಯುತ್ತಾ ಬಂದರೂ ಮನೆಯೊಳಗೆ 9 ಮಂದಿ ಸ್ಪರ್ಧಿಗಳು ಉಳಿದಿರುವುದು ವಿಶೇಷ ಎನಿಸಿದೆ.

Comments are closed, but trackbacks and pingbacks are open.