Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊಲೆ; 10 ಮಂದಿಗೆ ಅವಳಿ ಜೀವಾವಧಿ ಶಿಕ್ಷೆ

Kasaragod: ಪೆರಿಯ ಕಲ್ಯೋಟ್‌ನಲ್ಲಿ ನಡೆದಿದ್ದ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 10 ಮಂದಿಗೆ ಅವಳಿ ಜೀವಾವಧಿ ಸಜೆ ಹಾಗೂ ತಲಾ 2 ಲಕ್ಷ ರೂ. ದಂಡ ವಿಧಿಸಿ ಕೊಚ್ಚಿಯ ಪ್ರತ್ಯೇಕ ಸಿಬಿಐ ನ್ಯಾಯಾಲಯವು ತೀರ್ಪನ್ನು ನೀಡಿದೆ. ಹಾಗೂ ಉಳಿದ ನಾಲ್ವರಿಗೆ ಐದು ವರ್ಷ ಸಜೆ, ತಲಾ 10 ಸಾವಿರ ರೂ. ದಂಡವನ್ನು ವಿಧಿಸಿದೆ.

 

ಘಟನೆ ವಿವರ: ಫೆ.17,2019 ರಂದು ರಾತ್ರಿ 7.30ಕ್ಕೆ ಪೆರಿಯ ಬಳಿಯ ಕಲ್ಯೋಟ್‌ ಕುರಂಗರ ರಸ್ತೆಯಲ್ಲಿ ಬೈಕ್‌ನಲ್ಲಿ ಸಂಚಾರ ಮಾಡುತ್ತಿದ್ದ ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಾದ ಶರತ್‌ಲಾಲ್‌ ಮತ್ತು ಕೃಪೇಶ್‌ ಅವರನ್ನು ತಡೆದು ಕೊಲೆ ಮಾಡಲಾಗಿತ್ತು. ಇದನ್ನು ಬೇಕಲ ಪೊಲೀಸರು ಆರಂಭದಲ್ಲಿ ತನಿಖೆ ಮಾಡಿದ್ದರು. ನಂತರ ಕ್ರೈಂಬ್ರಾಂಚ್‌ಗೆ ವಹಿಸಲಾಗಿದ್ದರೂ ತನಿಖೆ ಆಗುತ್ತಿಲ್ಲ ಎಂದು ಕುಟುಂಬದ ಸದಸ್ಯರು ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ನಂತರ ಹೈಕೋರ್ಟ್‌ ಆದೇಶದಂತೆ ಸಿನಿಐ ತನಿಖೆಗೆ ಆದೇಶ ನೀಡಿತ್ತು. ನಂತರ ತನಿಖೆ ನಡೆಸಿದ ತಂಡ 2021 ಡಿ.3 ರಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಕೆ ಮಾಡಿತ್ತು.

ಫೆ.2,2023 ರಂದು ಕೊಚ್ಚಿಯ ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆ ಆರಂಭಗೊಂಡಿತ್ತು. 292 ಮಂದಿ ಸಾಕ್ಷಿಗಳ ಪೈಕಿ 154 ಮಂದಿಯ ವಿಚಾರಣೆ ನಡೆದಿದ್ದು 20 ತಿಂಗಳ ನಂತರ ತೀರ್ಪು ಬಂದಿದೆ.

Comments are closed, but trackbacks and pingbacks are open.