Dhanashree Verma Yuzvendra Chahal: ಕ್ರಿಕೆಟರ್ ಯುಜುವೇಂದ್ರ ಚಹಾಲ್ ದಾಂಪತ್ಯ ಜೀವನದಲ್ಲಿ ಬಿರುಕು? ವರ್ಷದ ಆರಂಭದಲ್ಲೇ‌ ಪತ್ನಿ ಧನಶ್ರೀಗೆ ವಿಚ್ಛೇದನ!

Dhanashree Verma Yuzvendra Chahal: ಟೀಂ ಇಂಡಿಯಾದ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಬಗ್ಗೆ ಅಚ್ಚರಿಯ ಸುದ್ದಿಯೊಂದು ಹೊರ ಬಿದ್ದಿದ್ದು, ವರದಿಯ ಪ್ರಕಾರ ಇಬ್ಬರೂ ವಿಚ್ಛೇದನ ಪಡೆಯುವ ಹಂತಕ್ಕೆ ಹೋಗಿದ್ದಾರೆ ಎನ್ನಲಾಗಿದೆ. ಧನಶ್ರೀ ಮತ್ತು ಚಹಾಲ್ ನಡುವಿನ ಸಂಬಂಧ ಬಹಳ ದಿನಗಳಿಂದ ಸರಿ ಇರಲಿಲ್ಲ ಎಂದು ಹೇಳಲಾಗುತ್ತಿದೆ.

 

ಚಾಹಲ್ ಧನಶ್ರೀ ಜೊತೆಗಿನ ಎಲ್ಲಾ ಚಿತ್ರಗಳನ್ನು Instagram ನಿಂದ ಡಿಲೀಟ್‌ ಮಾಡಿದ್ದಾರೆ. ಧನಶ್ರೀ ಮತ್ತು ಚಹಾಲ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿಚ್ಚೇದನ ಕುರಿತು ಅನೇಕ ಪೋಸ್ಟ್‌ಗಳು ವೈರಲ್‌ ಆಗುತ್ತಿದೆ. ಇಬ್ಬರೂ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಯುಜ್ವೇಂದ್ರ ಚಾಹಲ್ ಇತ್ತೀಚೆಗೆ ತಮ್ಮ ಅಧಿಕೃತ Instagram ನಿಂದ ಧನಶ್ರೀ ಅವರೊಂದಿಗಿನ ಎಲ್ಲಾ ಚಿತ್ರಗಳನ್ನು ಡಿಲೀಟ್‌ ಮಾಡಿದ್ದಾರೆ. ಇಬ್ಬರೂ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ. ಆದರೆ ಧನಶ್ರೀ ತಮ್ಮ ಅನ್‌ಫೋಲೋ ಮಾಡಿದರೂ, ಫೋಟೋಗಳನ್ನು ಡಿಲೀಟ್‌ ಮಾಡಿಲ್ಲ. ಆದರೆ, ಡಿವೋರ್ಸ್‌ ವಿಷಯಕ್ಕೆ ಸಂಬಂಧಿಸಿದಂತೆ ಇವರಿಬ್ಬರಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

Comments are closed, but trackbacks and pingbacks are open.