B Y Vijayendra : ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನಡ್ಡಾ ಜೀ ಅರಿಸೋದು ಇವರನ್ನೇ – ಹಾಲಿ ಅಧ್ಯಕ್ಷ ವಿಜಯೇಂದ್ರ ಅಚ್ಚರಿ ಹೇಳಿಕೆ!!

B Y Vijayendra : ಕರ್ನಾಟಕದ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಹಾಲಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಸ್ವಪಕ್ಷದವರೇ ತೊಡೆತಟ್ಟಿದ್ದಾರೆ. ಈ ವಿಚಾರ ದೆಹಲಿಯವರೆಗೂ ತಲುಪಿದ್ದು ಸಮಸ್ಯೆಯ ಸಂಕೋಲೆಯನ್ನು ಬಿಡಿಸಲು ರಾಷ್ಟ್ರೀಯ ಅಧ್ಯಕ್ಷರೇ ಇದೀಗ ರಾಜ್ಯಕ್ಕೆ ಆಗಮಿಸಿದ್ದಾರೆ. ಈ ಬೆನ್ನಲ್ಲೇ ಆರ್ ಎಸ್ ಎಸ್ ಹಿನ್ನಲೆ ಉಳ್ಳ, ಕರಾವಳಿಯ ನಾಯಕನಿಗೆ ಬಿಜೆಪಿ ರಾಜ್ಯಾಧ್ಯಕ್ಷ( BJP state president) ಪಟ್ಟ ದಕ್ಕಲಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈಗ ಈ ಕುರಿತು ವಿಜಯೇಂದ್ರ(B Y Vijayendra ) ಅವರು ಮೌನ ಮುರಿದಿದ್ದು ಯುವಕನಾದ ನನ್ನನ್ನೇ ಬಿಜೆಪಿ ರಾಜ್ಯಾಧ್ಯಕ್ಷನನ್ನಾಗಿ ನಡ್ಡಾಜಿ ಅವರು ಆಯ್ಕೆ ಮಾಡುತ್ತಾರೆ ಎಂದು ಹೇಳಿದ್ದಾರೆ.

 

 

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬಳಿ ನಾನೇನೂ ಚಾಡಿ ಹೇಳಿಲ್ಲ. ಯುವಕನಾದ ನಾನು ರಾಜ್ಯಾಧ್ಯಕ್ಷನಾಗಿ ಒಂದು ವರ್ಷ ಕಳೆದಿದೆ. ಆದರೂ ಯುವಕನಾದ ನನಗೇ ಮತ್ತೊಮ್ಮೆ ರಾಜ್ಯಾಧ್ಯಕ್ಷ ಸ್ಥಾನ ಕೊಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

ಅಲ್ಲದೆ ನಮ್ಮ ವರಿಷ್ಠರು, ಹಿರಿಯರು ಅವಕಾಶ ಕೊಟ್ಟಿದ್ದಾರೆ. ಒಂದು ವರ್ಷದಲ್ಲಿ ಶಕ್ತಿಮೀರಿ ಶ್ರಮ ಹಾಕಿದ್ದೇನೆ. ಭ್ರಷ್ಟಾಚಾರಗಳನ್ನು ಬಯಲಿಗೆ ತಂದು, ಹೋರಾಟ ಮಾಡಿ ರಾಜ್ಯ ಸರಕಾರವನ್ನು ತುದಿಗಾಲಿನಲ್ಲಿ ನಿಲ್ಲಿಸುವ ಕೆಲಸವನ್ನು ಮಾಡಿದ್ದೇವೆ. ಎರಡನೇಯದಾಗಿ ಅನೇಕ ಹಿರಿಯರಿಗೆ ಮನವರಿಕೆ ಮಾಡಿ, ವಿಶ್ವಾಸಕ್ಕೆ ತೆಗೆದುಕೊಳ್ಳುವ ವಿಚಾರ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ. ಆದರೂ ಕೂಡ ನಾನು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಸಂಘಟಿಸುತ್ತೇನೆ ಎಂದು ಹೇಳಿದ್ದಾರೆ.

Comments are closed, but trackbacks and pingbacks are open.