GST ವ್ಯಾಪ್ತಿಗೆ ಪೆಟ್ರೋಲ್- ಡೀಸೆಲ್ ?! ಕೇಂದ್ರ ಪೆಟ್ರೋಲಿಯಂ ಸಚಿವರಿಂದ ಮಹತ್ವದ ನಿರ್ಧಾರ !!

GST: ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿ ಎಸ್ ಟಿ ವ್ಯಾಪ್ತಿಗೆ ತರುವ ಕುರಿತು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ ಅವರು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.

 

ಹೌದು, ದೇಶದಲ್ಲಿ ಬಹು ಬೇಡಿಕೆ ಇರುವ ಪೆಟ್ರೋಲ್ ಮತ್ತು ಡೀಸೆಲ್( petrol and diesel) ಅನ್ನು ಜಿಎಸ್‌ಟಿ(GST) ವ್ಯಾಪ್ತಿಗೆ ಸೇರಿಸಬೇಕೆಂಬುದು ದೇಶದ ಜನರ ಬಹುದೊಡ್ಡ ಆಸೆ ಹಾಗೂ ಕೋರಿಕೆ. ಆಗಾಗ ಈ ವಿಚಾರ ಮುನ್ನಲೆಗೆ ಬರುತ್ತದೆ. ಅಂತೆಯೇ ಇದೀಗ ಈ ಕುರಿತು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ( Hardeep Singh Puri) ಅವರು ಮಾತನಾಡಿದ್ದು ಪೆಟ್ರೋಲ್‌ನನ್ನು ಜಿಎಸ್‌ಟಿ ಅಡಿಯಲ್ಲಿ ತರಲು ಯಾವುದೇ ಚರ್ಚೆ ನಡೆದಿಲ್ಲ. ಜೊತೆಗೆ ಯೋಜನೆಯೂ ಇಲ್ಲ ಇಂದು ಸ್ಪಷ್ಟೀಕರಣ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪೆಟ್ರೋಲ್‌ ರಾಜ್ಯಗಳಿಗೆ ಪ್ರಮುಖ ಆದಾಯದ ಮೂಲವಾಗಿದೆ. ಪೆಟ್ರೋಲ್‌ ಅನ್ನು ಜಿಎಸ್‌ಟಿಯಡಿಯಲ್ಲಿ ತರುವುದರಿಂದ ರಾಜ್ಯಗಳ ಆದಾಯದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಇದು ಸೂಕ್ತ ಸಮಯವಲ್ಲ ಎಂದು ಹೇಳಿದರು. ಅಲ್ಲದೆ ಭಾರತದಲ್ಲಿ ಇಂಧನದ ಬೆಲೆಗಳು ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಕ್ಕಿಂತ ಕಡಿಮೆಯಿದೆ ಎಂದ್ದಿದ್ದಾರೆ.

Comments are closed, but trackbacks and pingbacks are open.