Central Government : ಕೇಂದ್ರದಿಂದ ದೇಶದ ರೈತರಿಗೆ ಹೊಸ ವರ್ಷದ ಬಂಪರ್ ಗಿಫ್ಟ್ – ‘ಡಿಎಪಿ’ ಗೊಬ್ಬರ ವಿಚಾರವಾಗಿ ಮಹತ್ವದ ನಿರ್ಧಾರ !!

Share the Article

Central Government : ಹೊಸ ವರ್ಷದ ಆದಿಯಲ್ಲಿ ಕೇಂದ್ರ ಸರ್ಕಾರವು(Central Government)ದೇಶದ ರೈತರಿಗೆ ಬಂಪರ್ ಗಿಫ್ಟ್ ನೀಡಿದ್ದು, ಡಿಎಪಿ ವಿಚಾರವಾಗಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಇದಕ್ಕೆ ಕೇಂದ್ರ ಸಂಪುಟವು ಅಸ್ತು ಎಂದಿದ್ದು, ಈ ಮೂಲಕ ಸಂಪುಟ ಸಭೆಯು ಡಿಎಪಿ ಮೇಲಿನ ವಿಶೇಷ ಸಬ್ಸಿಡಿ ಸೌಲಭ್ಯವನ್ನು ವಿಸ್ತರಿಸಿದೆ.

ಹೌದು, ಸಬ್ಸಿಡಿ ದರದಲ್ಲಿ ಡಿಎಪಿ(DAP) ಗೊಬ್ಬರ ವಿತರಿಸುವ ಯೋಜನೆಯನ್ನು ಇನ್ನೂ ಒಂದು ವರ್ಷ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೀಗಾಗಿ ರೈತರು ಪ್ರತಿ ಚೀಲವನ್ನು 1350 ರೂ ಚಿಲ್ಲರೆ ದರದಲ್ಲಿ ಖರೀದಿ ಮಾಡಲು ಅನುಕೂಲವಾಗಲಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 3850 ಕೋಟಿ ಹೊರೆಯಾಗಲಿದೆ. ಈ ಸಬ್ಸಿಡಿಯು ಇಂದಿನಿಂದಲೇ ಜಾರಿಗೆ ಬರಲಿದ್ದು, ಮುಂದಿನ ಆದೇಶದವರೆಗೆ ಜಾರಿಯಲ್ಲಿ ಇರಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಅಂದಹಾಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ಇಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸಂಪುಟ ಸಭೆಯ ಬೆನ್ನಲ್ಲೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ‘ಸರ್ಕಾರದ ಹೊಸ ವರ್ಷದ ಮೊದಲ ನಿರ್ಣಯವು ದೇಶದ ಕೋಟಿ ಕೋಟಿ ರೈತ ಸಹೋದರ ಸಹೋದರಿಯರಿಗೆ ಸಮರ್ಪಣೆ’ ಎಂದಿದ್ದಾರೆ.

Leave A Reply