Anchor Jahnavi: ‘ಗಂಡನ ಆಡಿಯೋ ಕೇಳಿ ಕುಸಿದು ಬಿದ್ದೆ’- ತಾನೇಕೆ ಗಂಡನಿಂದ ದೂರಾದೆ ಎಂದು ಬಹಿರಂಗಪಡಿಸಿದ ನಿರೂಪಕಿ ಜಾಹ್ನವಿ !!

Anchor Jahnavi: ಕನ್ನಡ ಕಿರುತೆರೆಯಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಜಾಹ್ನವಿ, ಸದ್ಯ ಕಲರ್ಸ್ ಕನ್ನಡದಲ್ಲಿ ಸವಿರುಚಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಈ ನಡುವೆ ಆಗಾಗ ವೈಯಕ್ತಿಕ ವಿಚಾರಗಳಿಗೂ ಇವರು ಸುದ್ದಿಯಾಗುತ್ತಿರುತ್ತಾರೆ. ಅಂತಿಯೇ ಇದೀಗ ಅವರ ವೈವಾಹಿಕ ಜೀವನ ಹಾಗೂ ವಿಚ್ಛೇದನದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ಸುದ್ದಿಗಳು ವೈರಲಾಗಿದ್ದು ಅದಕ್ಕೆ ಜಾಹ್ನವಿಯವರು ಉತ್ತರ ನೀಡಿದ್ದಾರೆ.
ಹೌದು, ಕಳೆದ ವರ್ಷ ಪತಿ ಜತೆಗೆ ದೂರವಾಗಿದ್ದೇನೆ ಎಂದು ಜಾಹ್ನವಿ ಹೇಳಿಕೊಂಡಿದ್ದರು. ಇದೇ ವಿಚಾರವಾಗಿ ಜಾಲತಾಣಗಳಲ್ಲಿ ಕಟು ಟೀಕೆಗಳನ್ನು ಎದುರಿಸಿದ್ದಾರೆ. ಆ ಬಗ್ಗೆ ಸಾಕಷ್ಟು ಸ್ಪಷ್ಟನೆ ಕೊಟ್ಟರೂ, ಆ ಕೀಳು ಮಟ್ಟದ ಮಾತುಗಳು ಮಾತ್ರ ಈವರೆಗೂ ನಿಂತಿಲ್ಲ. ಇನ್‌ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿದರೂ, ಯಾರೊಂದಿಗಾದರೂ ಕಾಣಿಸಿದರೂ ಕೆಟ್ಟ ಕಾಮೆಂಟ್‌ಗಳೇ ಸಂದಾಯವಾಗ್ತಿವೆ. ಗಂಡ ಬಿಟ್ಟವಳು ಎಂದೂ ಕಟುವಾಗಿ ಕಾಮೆಂಟಿಸುತ್ತಿದ್ದಾರೆ. ಇದೀಗ ಮತ್ತೊಮ್ಮೆ ಈ ಬೇಸರದ ಬಗ್ಗೆ ಜಾಹ್ನವಿ ಮಾತನಾಡಿದ್ದಾರೆ.
ಜಹ್ನವಿ ಹೇಳೆದ್ದೇನು?
‘ಸುಮಾರು 12 ವರ್ಷಗಳಿಂದ ನ್ಯೂಸ್‌ನಲ್ಲಿ ಕೆಲಸ ಮಾಡಿದ್ದೀನಿ ಆಗ ಅದೆಷ್ಟೋ ಸಿನಿಮಾಗಳು ಮತ್ತು ಸೀರಿಯಲ್‌ಗಳಿಗೆ ಆಫರ್ ಬಂತು. ಸ್ಕ್ರೀನ್ ಟೆಸ್ಟ್ ಕೊಟ್ಟು ಆಯ್ಕೆ ಆದ ಮೇಲೆ ಬೇಡ ಅಂದ್ರು ಅಂತ ರಿಜೆಕ್ಟ್ ಮಾಡಿದ್ದೀನಿ, ಇದು ಫ್ಯಾಮಿಲಿಗೆ ನಾನು ಮಾಡಿರುವ ತ್ಯಾಗ. ನಟಿಸಬೇಕು ಅನ್ನೋದು ನನ್ನ ಕನಸು, ನನ್ನ ಅತ್ತೆ ಕೂಡ ನನಗೆ ಸಪೋರ್ಟ್ ಮಾಡುತ್ತಿದ್ದರು ಆದರೆ ಮನೆಯಲ್ಲಿ ಬೇಡ ಎನ್ನುತ್ತಿದ್ದರು. ಎಷ್ಟೇ ಆಫರ್ ಬಂದರು ಬೇಡ ಮನೆಯಲ್ಲಿ ಬಿಡಲ್ಲ ಅಂತ ಫೋನ್‌ನಲ್ಲಿ ಹೇಳುತ್ತಿದ್ದೆ. ನನ್ನಮ್ಮ ಸೂಪರ್ ಸ್ಟಾರ್ ಆಫರ್ ಬಂದಾಗ ಬೇರೆ ಫ್ಯಾಮಿಲಿಗಳು ಬರುತ್ತೆ ಅಲ್ಲದೆ ಮಗ ಜೊತೆಗಿರುತ್ತಾನೆ ಅಂತ ಒಪ್ಪಿಕೊಂಡೆ. ರಾಜಾ ರಾಣಿ ಶೋಗೆ ಕರೆದರು ಆಗ ಬೇಡ ಅಂತ ಬಿಡ್ವಿ. ಗಿಚ್ಚಿ ಗಿಲಿಗಿಲಿ ಶೋ ನಡೆಯಿತ್ತು, ಆ ಒಂದು ಶೋಯಿಂದ ನಾನು ಗಂಡ ಬಿಟ್ಟೆ ಅನ್ನೋದು ಸುಳ್ಳು ಸರ್’ ಎಂದು ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಜಾನವಿ ಮಾತನಾಡಿದ್ದಾರೆ.
‘ಒಂದು ದಿನ ಅಕ್ಷಯ ಸ್ಟುಡಿಯೋದಲ್ಲಿ ನಾನು ಗಣೇಶ ಉತ್ಸವಕ್ಕೆ ಎಂದು ಡ್ಯಾನ್ಸ್ ಅಭ್ಯಾಸ ಮಾಡುತ್ತಿದ್ದೆ ಆಗ ಒಂದು ಫೋನ್ ಕಾಲ್ ಬಂತ್ತು. ಈ ರೀತಿ ಆಡಿಯೋ ಇದೆ ವೈರಲ್ ಆಗುತ್ತಿದೆ ಅಂದ್ರು ನಾನು ಚಾನ್ಸೇ ಇಲ್ಲ ಸುಳ್ಳು ಎಂದು ಹೇಳಿ ಕಟ್ ಮಾಡಿದೆ. ಸ್ವಲ್ಪ ಸಮಯದ ನಂತರ ಮೊಬೈಲ್ ಓಪನ್ ಮಾಡಿ ನೋಡಿದೆ ಫುಲ್ ಶಾಕ್ ಆದೆ, ಕೈ ಕಾಲು ನಡುಗಿತ್ತು. 8 ವರ್ಷಗಳ ಕಾಲ ತುಂಬಾ ಸಹಿಸಿಕೊಂಡಿದ್ದೀನಿ, ಒಮ್ಮೊಮ್ಮೆ ಬಾಗಲು ತೆಗೆಯುತ್ತಿರಲಿಲ್ಲ ಅಲ್ಲೇ ಮಲ್ಕೊಂಡಿದ್ದೀನಿ, ರೂಮ್ ಬಾಗಲು ತೆಗೆಯುತ್ತಿರಲಿಲ್ಲ ಅಲ್ಲೇ ಬಟ್ಟೆ ಇರುತ್ತಿತ್ತು ಆಗ ಸ್ಟುಡಿಯೋಗೆ ಹೋಗೆ ಸರ್ಕಸ್ ಮಾಡಿದ್ದೀನಿ, ಕೆಲವೊಂದು ಸಲ ಸ್ಟುಡಿಯೋದಲ್ಲಿ ಮಲ್ಕೊಂಡಿದ್ದೀನಿ…ಸುಮಾರು ಬೈಗುಳಗಳು ತಿಂದಿದ್ದೀನಿ ಕೆಲವೊಮ್ಮೆ ಹೊಡೆಸಿಕೊಂಡಿದ್ದೀನಿ. ಒಂದು ಸಲ ಮಾತಿಗೆ ಮಾತು ಬೆಳೆಯಿತ್ತು ಆಗ ಜೋರಾಗಿ ನನ್ನ ತಲೆಗೆ ಹೊಡೆದರು, ಹೇಗೆ ಅಂದ್ರೆ ತಲೆ ಮತ್ತು ಕಣ್ಣು ಕೆಳಭಾಗದಲ್ಲಿ ನರ ಕನೆಕ್ಟ್ ಆಗಿರುತ್ತದೆ ಅಲ್ಲಿ ಫುಲ್ ಕಪ್ಪು ಆಗಿತ್ತು ಆಗ ಮೇಕಪ್ ಹಚ್ಚಿಕೊಂಡು ನ್ಯೂಸ್ ಓದಿದ್ದೀನಿ. ಸಹಿಸಿಕೊಳ್ಳಬೇಕು ಅದು ಬಿಟ್ರೆ ಬೇರೆ ಏನೂ ಇಲ್ಲ ಅಂತ. ಎರಡು ವಿಭಿನ್ನ ವ್ಯಕ್ತಿತ್ವದವರು ಒಂದಾಗಿರಲು ಸಾಧ್ಯವಿಲ್ಲ. ನನ್ನ ಹೊಡೆದಿರುವುದೆಲ್ಲಾ ನನ್ನ ಫ್ಯಾಮಿಲಿ ಗೊತ್ತೇ ಇಲ್ಲ ಈಗ ಗೊತ್ತಾಗುತ್ತಿದೆ’ ಎಂದು ಜಾನವಿ ಆರ್ ಹೇಳಿದ್ದಾರೆ.
ಅಲ್ಲದೆ ‘ಗಂಡ ಬಿಟ್ಟವಳು ಎನ್ನುವುದು ತುಂಬ ಸುಲಭ. ಆದರೆ ನಮ್ಮ ಜೀವನದಲ್ಲಿ ಏನೆನೆಲ್ಲ ಆಗಿರುತ್ತೆ ಅನ್ನೋದನ್ನ ಅವರು ಬಂದು ನೋಡಿರ್ತಾರಾ? ನಮ್ಮ ನಡುವೆ ಏನೇನಾಗಿದೆ ಅನ್ನೋದು ನಮಗೆ ಮಾತ್ರ ಗೊತ್ತು. ಅದು ಟಾಪ್ ಸೀಕ್ರೆಟ್. ಅದು ನಮ್ಮ ಫ್ಯಾಮಿಲಿಗೆ ಬಿಟ್ಟರೆ, ಹೊರಗೆಲ್ಲೂ ಗೊತ್ತಿಲ್ಲ. ಸಣ್ಣಪುಟ್ಟದನ್ನು ಹೊರಗಡೆ ಹೇಳಿದ್ದೇನೆ. ಎಲ್ಲವನ್ನೂ ಹೇಳಿಕೊಳ್ಳಬೇಕು ಅಂತೇನಿಲ್ಲ. ಒಮ್ಮೊಮ್ಮೆ ಹೇಳಿದರೂ, ಸಿಂಪತಿ ಸಲುವಾಗಿ ಹೇಳಿಕೊಂಡಿದ್ದಾರೆ ಎಂದೂ ಕಾಮೆಂಟ್ ಮಾಡ್ತಾರೆ. ಕೋಪದಲ್ಲಿ ಒಂದಷ್ಟು ವಿಚಾರ ಹೇಳಿಕೊಂಡಿರಬಹುದು. ಅದಕ್ಕೂ ನನಗೆ ರಿಗ್ರೇಟ್ ಇಲ್ಲ” ಎಂದು ಅವರು ಹೇಳಿದ್ದಾರೆ.
ಮುಂದುವರಿದು ಮುಂದುವರಿದು, “ಇಂಥ ಕಾಮೆಂಟ್ ಮಾಡುವವರ ಒಂದು ವರ್ಗವೇ ಇದೆ. ಬಹುಶಃ ಅವರಿಗೆ ಬೇರೆ ಕೆಲಸ ಇಲ್ಲ. ಇಂಥ ಕಾಮೆಂಟ್ ಮಾಡುವುದೇ ಅವರ ಫುಲ್‌ಟೈಮ್ ಕೆಲಸ ಆಗಿಬಿಟ್ಟಿರುತ್ತೆ. ಸ್ಯಾಡಿಸ್ಟ್ ಮನಸ್ಥಿತಿಗಳು ಇರಬಹುದು. ಮನೆಯಲ್ಲಿ ಅವರಿಗೂ ಹೆತ್ತವರು, ಅಕ್ಕ ತಂಗಿಯರು, ಹೆಂಡತಿ ಎಲ್ಲರೂ ಇರ್ತಾರೆ. ಆದರೂ ಇಂಥ ಕಾಮೆಂಟ್ ಹಾಕ್ತಾರೆ. ಅದ್ಯಾಕೆ ಅನ್ನೋದೇ ಗೊತ್ತಾಗಲ್ಲ. ಹಾಗಾಗಿ ನಾನು ಅಂಥವುಗಳಿಗೆ ತಲೆನೇ ಕೆಡಿಸಿಕೊಳ್ಳಲ್ಲ” ಎಂದಿದ್ದಾರೆ.
F*ckin’ remarkable things here. I am very glad to see your post. Thanks a lot and i am looking forward to contact you. Will you please drop me a mail?
This site is my breathing in, rattling superb design and style and perfect content material.