Guarantee’s Ban: ಉಚಿತ ಯೋಜನೆಗಳಿಂದ ಆರ್ಥಿಕ ಸಂಕಷ್ಟ – ‘ಗ್ಯಾರಂಟಿ’ ಗಳನ್ನು ವಾಪಸ್ ಪಡೆಯಲು ರಾಜ್ಯ ಸರ್ಕಾರ ನಿರ್ಧಾರ !!
Guarantee’s Ban: ವಿಧಾನಸಭೆ ಚುನಾವಣೆ ವೇಳೆ ನೀಡಿದ್ದ ಉಚಿತ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ಬಳಿಕ ಸಾಲದ ಹೊರೆಯಲ್ಲಿ ನರಳುತ್ತಿರುವ ರಾಜ್ಯ ಸರ್ಕಾರ ಇದೀಗ ಗ್ಯಾರೆಂಟಿಗಳನ್ನು ವಾಪಸ್ ಪಡೆಯಲು ಮುಂದಾಗಿದೆ. ಹಾಗಂತ ಇದು ನಮ್ಮ ಕರ್ನಾಟಕದಲ್ಲಿ ಆದ ಬೆಳವಣಿಗೆ ಅಲ್ಲ. ಬದಲಿಗೆ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿರುವ ಮಹತ್ವದ ನಿರ್ಧಾರ.
ಹೌದು, ಜನರಿಗೆ ಉಚಿತ ಯೋಜನೆ ನೀಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಿಮಾಚಲ ಪ್ರದೇಶ(Himachala Pradrsh)ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ವಾಪಸ್ ಅಭಿಯಾನ ಆರಂಭಿಸಿದೆ. ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದಲ್ಲಿ ಹಣ ಉಳಿಸಲು ಕ್ರಮ ಕೈಗೊಳ್ಳಲಾಗಿದ್ದು, ವಿದ್ಯುತ್ ಸಬ್ಸಿಡಿ ಕೈಬಿಡಲಾಗಿದೆ. ಇಷ್ಟೇ ಅಲ್ಲದೆ ಜನರಿಗೂ ಯೋಜನೆಗಳನ್ನು ತ್ಯಜಿಸಲು ಸರ್ಕಾರವು ಮನವಿ ಮಾಡಿದೆ.
ಸರ್ಕಾರ ವಿದ್ಯುತ್ ಸಬ್ಸಿಡಿಗೆ ವಾರ್ಷಿಕ 2200 ಕೋಟಿ ರೂ. ಖರ್ಚು ಮಾಡುತ್ತಿದೆ. ಇಂಧನ ಇಲಾಖೆ ನೌಕರರ ವೇತನ, ಪಿಂಚಣಿಗೆ ತಿಂಗಳಿಗೆ 200 ಕೋಟಿ ರೂ. ವೆಚ್ಚವಾಗುತ್ತದೆ. ಉಳ್ಳವರು ಸಬ್ಸಿಡಿ ವಾಪಸ್ ನೀಡಬೇಕು ಎಂದು ಸುಖು ಮನವಿ ಮಾಡಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಹಿಮಾಚಲ ಪ್ರದೇಶ ಸರ್ಕಾರ ಪರಿಸ್ಥಿತಿ ನಿಭಾಯಿಸಲು ಹೆಣಗಾಡುತ್ತಿದ್ದು, ಅನೇಕ ವೆಚ್ಚಗಳಿಗೆ ಕಡಿವಾಣ ಹಾಕಿದೆ.
ಅಂದಹಾಗೆ ಹಿಮಾಚಲ ಸರ್ಕಾರ ಹಾಲಿ 96000 ಕೋಟಿ ರು. ಸಾಲದಲ್ಲಿದೆ. ಹಣಕಾಸಿನ ಕೊರತೆಯ ಕಾರಣ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಇತ್ತೀಚೆಗೆ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿ ಪಾವತಿ ವಿಳಂಬವಾಗಿತ್ತು. ಸಚಿವರ ವೇತನ ಪಾವತಿಯನ್ನೂ ಎರಡು ತಿಂಗಳುಮುಂದೂಡಲಾಗಿತ್ತು.