C M Siddaramiah : ಸಿದ್ದರಾಮಯ್ಯ ದೇಶದ 3ನೇ ಶ್ರೀಮಂತ ಮುಖ್ಯಮಂತ್ರಿ!! ಸಿದ್ದು ಬಳಿ ಇರೋ ಒಟ್ಟು ಆಸ್ತಿ ಎಷ್ಟು?
C M Siddaramiah : ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನ್ನದೇ ಆದಂತಹ ವರ್ಚಸ್ಸು ಹೊಂದಿದವರು. ಯಾರಿಗೂ ಹೆದರದೆ ನೇರ ನಡೆ-ನುಡಿಯ ವ್ಯಕ್ತಿತ್ವದ ಈ ನಾಯಕ ಎರಡು ಬಾರಿ ಸಿಎಂ ಆಗಿ ತಮ್ಮ ಉತ್ತಮ ಆಡಳಿತದ ಮೂಲಕ ಜನಮನ ಗೆದ್ದಿದ್ದಾರೆ. ಸಮಾಜವಾದಿ ನಾಯಕ ಆಗಿಯೂ ಗುರುತಿಸಿಕೊಂಡಿದ್ದಾರೆ. ಅಹಿಂದ ನಾಯಕ ಎಂದು ರಾಜ್ಯದ ಜನಮಾನಸದಲ್ಲಿ ಹೆಸರು ವಾಸಿಯಾಗಿದ್ದಾರೆ. ಈ ನಡುವೆ ಇದೀಗ ಸಿದ್ದರಾಮಯ್ಯ(C M Siddaramiah ) ದೇಶದ 3ನೇ ಶ್ರೀಮಂತ ಮುಖ್ಯಮಂತ್ರಿ ಎಂಬ ಮಾಹಿತಿ ಬಹಿರಂಗವಾಗಿದೆ.
ಹೌದು, ಅಸೋಸಿಯೇಷನ್ ಫಾರ್‌ಡೆಮಾಕ್ರಟಿಕ್ ರಿಫಾರ್ಮ (ಎಡಿಆರ್) ಸ್ವಯಂಸೇವಾ ಸಂಸ್ಥೆ ದೇಶದ ಮುಖ್ಯಮಂತ್ರಿಗಳ ಆಸ್ತಿ ವಿವರವನ್ನು ಬಿಡುಗಡೆ ಮಾಡಿದ್ದು, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 51 ಕೋಟಿ ರು. ಮೌಲ್ಯದ ಆಸ್ತಿಯೊಂದಿಗೆ ಶ್ರೀಮಂತ ಸಿಎಂಗಳ ಪೈಕಿ 3ನೇ ಸ್ಥಾನ ಪಡೆದಿದ್ದಾರೆ.
ಮೊದಲು ಹಾಗೂ ಎರಡನೇ ಸ್ಥಾನ ಯಾರಿಗೆ?
ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು 931 ಕೋಟಿ ರು. ಮೌಲ್ಯದ ಆಸ್ತಿಯೊಂದಿಗೆ ಭಾರತದ ನಂ.1 ಧನಿಕ ಸಿಎಂ ಎನ್ನಿಸಿಕೊಂಡಿದ್ದಾರೆ. ಅರುಣಾಚಲ ಪ್ರದೇಶದ ಪೆಮಾ ಖಂಡು 332 ಕೋಟಿ ರು. ಆಸ್ತಿಯೊಂದಿಗೆ 2ನೇ ಹಾಗೂ 51 ಕೋಟಿ ರು. ಆಸ್ತಿಯೊಂದಿಗೆ ಸಿದ್ದರಾಮಯ್ಯ 3ನೇ ಸ್ಥಾನ ಪಡೆದಿದ್ದಾರೆ. ಅಲ್ಲದೆ ಶ್ರೀಮಂತ ಸಿಎಂ ಪಟ್ಟಿಯ ಕೊನೆ ಸ್ಥಾನದಲ್ಲಿ ಇರೋದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ. ಇವರ ಬಳಿಕ ಕೇವಲ 15 ಲಕ್ಷ ಮೌಲ್ಯದ ಆಸ್ತಿ ಇದೆ. ಈ ಮೂಲಕ ದೇಶದ ಬಡ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ.
ಇನ್ನು ದೇಶದ 31 ಮುಖ್ಯಮಂತ್ರಿಗಳ ಒಟ್ಟು ಆದಾಯ 1,630 ಕೋಟಿ ರೂ.ಗಳಷ್ಟಿದೆ ಎಂದು ವರದಿ ಹೇಳಿದೆ. ಸರಾಸರಿ ಆಸ್ತಿ ಮೌಲ್ಯ 52.59 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಚುನಾವಣಾ ಅಫಿಡವಿಟ್ನ ಅಂಕಿ ಅಂಶದ ಆಧಾರದ ಮೇಲೆ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಹಾಗೂ ನ್ಯಾಷನಲ್ ಎಲೆಕ್ಷನ್ ವಾಚ್ ಸಂಸ್ಥೆಗಳು ಈ ವರದಿಯನ್ನು ಸಿದ್ಧ ಮಾಡಿವೆ.