Bengaluru : ಹೊಸ ವರ್ಷಕ್ಕೆ ಮಧ್ಯಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ – 3 ಬಾಟಲ್ ಮದ್ಯ ಕೊಂಡರೆ ಒಂದು ಬಾಟಲ್ ಮದ್ಯ ಫ್ರೀ !!
Bengaluru : ರಾಜ್ಯದ ಮಧ್ಯಪ್ರಿಯರಿಗೆ ಹೊಸ ವರ್ಷಕ್ಕೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಮೂರು ಬಾಟಲ್ ಮದ್ಯ ಖರೀದಿಸಿದರೆ ಒಂದು ಉಚಿತವಾಗಿ ನೀಡುವ ಘೋಷಣೆ ಮಾಡಲಾಗಿದೆ.
ಹೌದು, ಹೊಸ ವರ್ಷವನ್ನು ಸ್ವಾಗತಿಸಲು ನಾಡಿನ ಜನರು ಕಾತರರಾಗಿ ಕೂತಿದ್ದಾರೆ. ಎಲ್ಲೆಡೆ ಪಾರ್ಟಿ ಜೋರಾಗಿ ನಡೆಯಲಿದೆ. ಈ ಬೆನ್ನಲ್ಲೇ ಬೆಂಗಳೂರಿನ ಬಾರ್ ಅಂಡ್ ರೆಸ್ಟೋರೆಂಟ್ ಗಳು, ಪಬ್, ವೈನ್ ಸ್ಟೋರ್ ಗಳಲ್ಲಿ ಮದ್ಯಪ್ರಿಯರಿಗೆ ಆಫರ್ ನೀಡುತ್ತಿದ್ದಾರೆ.
ಯಸ್, ಡಿಸೆಂಬರ್ 31 ರಂದು ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟವಾಗುತ್ತದೆ. ಹೀಗಾಗಿ ವ್ಯಾಪಾರ, ಗ್ರಾಹಕರ ಹೆಚ್ಚಳದ ಜೊತೆಗೆ ಗ್ರಾಹಕರನ್ನು ಸಂಪಾದಿಸಲು ದುಬಾರಿ ಬೆಲೆಯ ಮದ್ಯಗಳಲ್ಲಿ ರಿಯಾಯಿತಿ ಹೆಚ್ಚಿನ ಖರೀದಿಗೆ ಒಂದು ಬಾಟಲ್ ಉಚಿತ ನೀಡುವುದಾಗಿ ಕೆಲವು ಮದ್ಯ ಮಾರಾಟಗಾರರು ಪ್ರಕಟಿಸಿದ್ದಾರೆ. ಅಲ್ಲದೆ ಕೆಲವು ಬ್ರಾಂಡ್ ನವರು ಮಾರಾಟ ಹೆಚ್ಚಳಕ್ಕೆ ಮದ್ಯದ ಅಂಗಡಿಯವರಿಗೆ ದುಬಾರಿ ಬೆಲೆಯ 750 ಎಂಎಲ್ ನ ಫುಲ್ ಬಾಟಲ್ ಮೇಲೆ 100-ರಿಂದ 200 ರೂಪಾಯಿವರೆಗೂ ಕಂಪನಿಗಳು ತಮಗೆ ನೀಡಿದ ದರ ರಿಯಾಯಿತಿ ಕೊಡುಗೆಯನ್ನು ಗ್ರಾಹಕರಿಗೆ ನೀಡಿ ವ್ಯಾಪಾರ ಹೆಚ್ಚಿಸಿಕೊಳ್ಳಲು ಮದ್ಯ ಮಾರಾಟಗಾರರು ಮುಂದಾಗಿದ್ದು, ಮೂರು ಬಾಟಲ್ ಖರೀದಿಸಿದರೆ ಒಂದು ಬಾಟಲ್ ಉಚಿತವಾಗಿ ನೀಡುವುದಾಗಿ ಕೆಲವು ಬಾರ್ & ರೆಸ್ಟೋರೆಂಟ್ ಗಳು ಘೋಷಿಸಿದೆ.