Madhyapradesh : ಸೊಳ್ಳೆ ಪರದೆ ಹಿಡಿದುಕೊಂಡು ಚಿರತೆ ಹಿಡಿಯಲು ಹೊರಟ ಬಿಜೆಪಿ ನಾಯಕ !! ಮುಂದೇನಾಯ್ತು ನೀವೇ ನೋಡಿ
Madhyapradesh : ಬಿಜೆಪಿ ಮುಖಂಡನೊಬ್ಬ ಸೊಳ್ಳೆ ಪರದೆ ಹಿಡಿದುಕೊಂಡು ಚಿರತೆಯನ್ನು ಹಿಡಿಯಲು ಹೋದಂತಹ ವಿಚಿತ್ರ ಪ್ರಕರಣ ಒಂದು ಬೆಳಕಿಗೆ ಬಂದಿದೆ. ಈಗ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗುತ್ತದೆ.
ಹೌದು, ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಬಿಜೆಪಿ ಮಾಜಿ ಶಾಸಕ ಶ್ಯಾಮಲಾಲ್ ದ್ವಿವೇದಿ ಚಿರತೆಯನ್ನು ಹಿಡಿಯಲು ಸ್ಥಳೀಯರ ಜೊತೆ ತಾವೇ ಖುದ್ದು ಕಾರ್ಯಾಚರಣೆಗೆ ಇಳಿದಿದ್ದಾರೆ. ಇಂತಹ ಸಮಯದಲ್ಲಿ ಎಲ್ಲರೂ ಗಟ್ಟಿಮುಟ್ಟಾದ ಬಲೆಯನ್ನೋ ಅಥವಾ ಬೋನನ್ನೋ ತಂದರೆ ಇಲ್ಲಿ ಮಾತ್ರ ಈ ಬಿಜೆಪಿ ಮುಖಂಡ ಸೊಳ್ಳೆ ಪರದೆ ಬೀಸಿ ಚಿರತೆ ಹಿಡಿಯಲು ಹೊರಟಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಕಳೆದ ಕೆಲವು ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿದ್ದು, ಗೂಳಿ ಹಾಗೂ 5 ಜನರ ಮೇಲೆ ದಾಳಿ ಮಾಡಿದೆ. ಜನರಲ್ಲಿ ಆತಂಕ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಚಿರತೆಯನ್ನು ನಾವೇ ಹಿಡಿಯಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ. ಚಿರತೆ ದಾಳಿ ಮಾಡಿದ ಜಾಗಕ್ಕೆ ದ್ವಿವೇದಿ ಹಾಗೂ ಸ್ಥಳೀಯರು ಸೊಳ್ಳೆ ಪರದೆ ಹಿಡಿದು ಹೊರಟ ವೀಡಿಯೋಗಳನ್ನು ಸೆರೆ ಹಿಡಿಯಲಾಗಿದ್ದು, ಸೊಳ್ಳೆ ಪರದೆಯಿಂದ ಬಲೆ ಬೀಸಿ ಚಿರತೆ ಹಿಡಿಯಲು ಸಾಧ್ಯವೇ ಎಂಬ ಪ್ರಶ್ನೆ ಕುರಿತು ಚರ್ಚೆಗಳು ನಡೆದಿವೆ.