Pratap Simha ಕಾಂಗ್ರೆಸ್ ಸೇರ್ಪಡೆ? ಮಹತ್ವದ ಅಪ್ಡೇಟ್ ಕೊಟ್ಟ ಮಾಜಿ ಸಂಸದ !!

Prathap Simha: ಕೆಲವು ದಿನಗಳಿಂದ ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಿದ್ದರಾಮಯ್ಯ ಅವರ ಪರ ಬ್ಯಾಟ್ ಬೀಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಸದ್ಯ ಈ ಕುರಿತು ಪ್ರತಾಪ್ ಸಿಂಹ ಅವರೇ ಸ್ಪಷ್ಟೀಕರಣ ನೀಡಿದ್ದಾರೆ.

 

ಹೌದು, ನಗರದ ಪ್ರಮುಖ ರಸ್ತೆಗೆ ಸಿದ್ದರಾಮಯ್ಯ (Siddaramaiah) ಅವರ ಹೆಸರಿಡುವ ವಿಚಾರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಈ ನಡುವೆ ಬಿಜೆಪಿಯಲ್ಲೇ ಇದಕ್ಕೆ ಭಿನ್ನರಾಗ ಕೇಳಿಬಂದಿದೆ. ಹಲವು ಬಿಜೆಪಿ (BJP) ನಾಯಕರು ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರಿಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಮಾತ್ರ ಸಿದ್ದರಾಮಯ್ಯ ಅವರ ಹೆಸರಿಟ್ಟರೆ ತಪ್ಪೇನಿದೆ ಎಂದು ಪ್ರಶ್ನಿಸುವ ಮೂಲಕ ಸಿಎಂ ಪರ ಬ್ಯಾಟ್ ಬೀಸಿದ್ದರು. ಇದಕ್ಕೆ ಪ್ರತಾಪ್ ಸಿಂಹ ವಿರುದ್ಧ ಸಂಸದ ಯದುವೀರ್ ಸೇರಿ ಹಲವರು ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೆ ಈ ಬೆನ್ನಲ್ಲೇ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ಬನಂತಿ ಸಾಕಷ್ಟು ಸದ್ದು ಮಾಡುತ್ತಿದೆ.

ಈ ಕುರಿತು ಮಾತನಾಡಿರುವ ಪ್ರತಾಪ್ ಸಿಂಹ ಅವರು ಪ್ರತಾಪ್ ಸಿಂಹಗೆ ಬಿಜೆಪಿ ಬಿಟ್ಟು ಕಾಂಗ್ರೆಸ್​ಗೆ ಹೋಗುವ ಅನಿವಾರ್ಯತೆ ಇಲ್ಲ. ನನ್ನ ತಂದೆ ಕೂಡ ಜನಸಂಘದಿಂದ ಬಂದಿರೋರು. ನಾನು ಕಾಂಗ್ರೆಸ್​ಗೆ ಹೋಗಬೇಕು ಅಂತಿದ್ದರೆ ಚುನಾವಣೆ ಸಮಯದಲ್ಲೇ ಹೋಡುತ್ತಿದ್ದೆ. ಟಿಕೆಟ್ ಕೊಡ್ತೀವಿ ಬನ್ನಿ ಅಂತ ಸಾಕಷ್ಟು ಜನ ಕರೆದರು. ಅಂತಹ ಸಮಯದಲ್ಲೇ ಹೋಗಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಲ್ಲದೆ ವರುಣದಲ್ಲಿ ಸಿದ್ದರಾಮಯ್ಯ ವಿರುದ್ಧ ಕೆಲಸ ಮಾಡಿದವನು ನಾನು. ನನ್ನ ವಿರುದ್ಧ ಸಾಕಷ್ಟು ಕೇಸ್ ಹಾಕಿಸಿದರು. ಈಗಲೂ ಕೇಸ್ ಗಳು ಇವೆ. ನಾನು ಬದ್ಧತೆ ಇರುವ ವ್ಯಕ್ತಿ. ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ನಮ್ಮ ಪಕ್ಷದ ಕೆಲವರು ಬಕೆಟ್ ಹಿಡಿಯುತ್ತಿದ್ದಾರೆ ಎಂದು ಹೇಳಿದ್ದಾರೆ. ಮಾತು ಸಭ್ಯತೆ ಮೀರಬಾರದು ಎಂದು ಸ್ವಪಕ್ಷ ನಾಯಕರ ವಿರುದ್ಧ ಅವರು ಕಿಡಿಕಾಡಿದ್ದಾರೆ.

ಪ್ರಿನ್ಸೆಸ್ ರಸ್ತೆ ಎನ್ನುವ ದಾಖಲೆ ಇದ್ದರೆ ಬದಲಾವಣೆ ಬೇಡ, ಸಿದ್ದರಾಮಯ್ಯ ಹೆಸರನ್ನು ಬೇರೆ ರಸ್ತೆಗೆ ಇಡಲಿ. ನಾನು ಕಾಂಗ್ರೆಸ್ ಶಾಸಕ ಹರೀಶ್ ಗೌಡ ಅವರಿಗೆ ಮನವಿ ಮಾಡುತ್ತೇನೆ. ಪ್ರಿನ್ಸಿಸ್ ರಸ್ತೆ ಎಂದು ಕರೆಯುವುದಕ್ಕೆ ದಾಖಲೆ ಇದ್ದರೆ ಬದಲಾವಣೆ ಬೇಡವೆಂದು ಹೇಳುತ್ತೇನೆ. ಹೊಸ ಬಡಾವಣೆ ಮಾಡಿ ಸಿದ್ದರಾಮಯ್ಯನವರ ಹೆಸರಿಡಲಿ. ಇದನ್ನು ಇಲ್ಲಿಗೆ ನಿಲ್ಲಿಸೋಣ ಎಂದು ಹೇಳಿದ್ದಾರೆ.

Leave A Reply

Your email address will not be published.