Minister Veerendra Kumar: ನನ್ನ ಪಾದ ಮುಟ್ಟಿ ನಮಸ್ಕರಿಸುವವರ ಕೆಲಸವನ್ನು ಮಾಡಿಕೊಡಲಾರೆ – ಕೇಂದ್ರ ಸಚಿವ ವೀರೇಂದ್ರ ಕುಮಾರ್ ಘೋಷಣೆ

Minister Veerendra Kumar: ಇನ್ನು ಮುಂದೆ ಯಾರು ನನ್ನ ಪಾದ ಮುಟ್ಟಿ ನಮಸ್ಕರಿಸುತ್ತಾರೋ ನಾನು ಅವರ ಕೆಲಸಗಳನ್ನು ಯಾವುದೇ ಕಾರಣಕ್ಕೂ ಮಾಡಿಕೊಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದ ಸಚಿವ ವೀರೇಂದ್ರ ಕುಮಾರ್ ಅವರು ಪೋಷಿಸಿದ್ದಾರೆ. ಈ ಮೂಲಕ ಅವರು ತಮ್ಮ ಪಾದ ಮುಟ್ಟುವುದನ್ನು ನಿಷೇಧಿಸಿದ್ದಾರೆ.

 

ಹೌದು, ಕ್ಯಾಬಿನೆಟ್ ಸಚಿವ ವೀರೇಂದ್ರ ಕುಮಾರ್(Minister Veerendra Kumar) ಅವರು ಈ ರೀತಿಯ ಒಂದು ಹೊಸ ನಿರ್ಧಾರವನ್ನು ಕೈಗೊಂಡಿದ್ದು ತಮ್ಮ ಕಚೇರಿಯದುರಲ್ಲಿ ಈ ಕುರಿತಾದ ಫಲಕವನ್ನು ಕೂಡ ಅವರು ಅಳವಡಿಸಿದ್ದಾರೆ. ವೀರೇಂದ್ರ ಕುಮಾರ್ ಅವರ ಕಚೇರಿಯಲ್ಲಿ ಅಳವಡಿಸಲಾಗಿರುವ ಫಲಕದಲ್ಲಿ,
ತಮ್ಮ ಪಾದಗಳನ್ನು ಮುಟ್ಟುವ ಕೆಲಸಕ್ಕೆ ಯಾವುದೇ ರೀತಿಯಲ್ಲೂ ಪ್ರೋತ್ಸಾಹ ನೀಡುವುದಿಲ್ಲ ಎಂದು ಖಡಕ್ಕಾಗಿ ವಾರ್ನಿಂಗ್‌ ನೀಡಿದ್ದಾರೆ. ಸಚಿವರ ಈ ಎಚ್ಚರಿಕೆಯ ಫಲಕವು ಕಚೇರಿಗೆ ಬರುವ ಜನರಲ್ಲಿ ಅಚ್ಚರಿ ಮೂಡಿಸಿದೆ.

Leave A Reply

Your email address will not be published.