Kitchen tips: ಮಹಿಳೆಯರೇ ಹುಷಾರ್ – ಪಾತ್ರೆ ತೊಳೆಯೋ ಸ್ಪಾಂಜ್ ನಿಂದಲೇ ಬರುತ್ತೆ ನಿಮ್ಮ ಜೀವಕ್ಕೆ ಕುತ್ತು, ಅಘಾತಕಾರಿ ವರದಿ ಬಹಿರಂಗ!!
Kitchen tips: ಪಾತ್ರೆ ತೊಳೆಯಲು ಇಂದು ವಿವಿಧ ನಮೂನೆಯ ವಸ್ತುಗಳು ಬಂದಿವೆ. ಅದರಲ್ಲಿ ಈ ಸ್ಪಾಂಜ್ ಎಂದರೆ ಮಹಿಳೆಯರಿಗೆ ಬಲು ಇಷ್ಟ. ಪಾತ್ರೆ ಬೇಗ ಕ್ಲೀನ್ ಆಗುತ್ತದೆ, ಬೇಗ ತೊಳೆದು ಮುಗಿಸಬಹುದು, ಹಿಡಿದುಕೊಳ್ಳಲು ಕೈಗೂ ಹಿತ ಎಂದು ಹೆಚ್ಚಿನ ಮಹಿಳೆಯರು ಪಾತ್ರ ತೊಳೆಯಲು ಸ್ಪಾಂಜ್ ಉಪಯೋಗಿಸುತ್ತಾರೆ. ಆದರೆ ಇದೀಗ ಅಚ್ಚರಿ ವರದಿಯೊಂದು ಬಹಿರಂಗವಾಗಿದ್ದು ಪಾತ್ರೆ ತೊಳೆಯುವ ಈ ಸ್ಪಾಂಜ್ ನಿಂದಲೆ ಮಹಿಳೆಯರ ಆರೋಗ್ಯಕ್ಕೆ ಕುತ್ತು ಬರುತ್ತದೆ ಎಂದು ಹೇಳಿದೆ.
ಹೌದು, ಪಾತ್ರೆ ತೊಳೆಯುವ ಸ್ಪಾಂಜ್ ಕುರಿತು ಅಘಾತಕಾರಿ ವರದಿಯೊಂದು ಬಹಿರಂಗವಾಗಿದ್ದು, ಇದು ನಾವು ದಿನನಿತ್ಯ ಅಡುಗೆಮನೆಯಲ್ಲಿ ಬಳಸುವ ಸ್ಪಾಂಜ್ ಟಾಯ್ಲೆಟ್‌ಗಿಂತ ಹೆಚ್ಚು ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತದೆ. ಒಂದು ಸ್ಪಾಂಜ್ ಒಂದು ಘನ ಸೆಂಟಿಮೀಟರ್‌ಗೆ 54 ಬಿಲಿಯನ್ ಬ್ಯಾಕ್ಟೀರಿಯಾಗಳನ್ನು ಹೊಂದಿರಬಹುದು ಎಂದು ಹೇಳಿದೆ. ಇತ್ತೀಚೆಗೆ ಡ್ಯೂಕ್ ವಿಶ್ವವಿದ್ಯಾಲಯದ ಜೈವಿಕ ವೈದ್ಯಕೀಯ ಎಂಜಿನಿಯರ್‌ಗಳು ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ಹೊರಬಿದ್ದಿದೆ.
ಅಧ್ಯಯನ ಹೇಳಿದ್ದೇನು?
ಪಾತ್ರೆ ತೊಳೆಯಲು ಬಳಸುವ ಸ್ಪಾಂಜ್‌ನ ಮೇಲ್ಭಾಗವು 0) ಪಾತ್ರೆ ಕೊಳೆಯಾದಾಗ ಸುಲಭವಾಗಿ ಕೊಳೆ ತೆಗೆಯುವುದಿಲ್ಲ. ಹೀಗಾಗಿ ಸ್ಪಾಂಜ್‌ನಿಂದ ಪಾತ್ರೆಗಳನ್ನು ತೊಳೆದಾಗ ಅವು ಸ್ವಚ್ಛವಾಗುವ ಬದಲು ಕೊಳೆಯಾಗುತ್ತವೆ. ಸ್ಪಾಂಜ್ ಒದ್ದೆಯಾಗಿ ಮತ್ತು ಸೂಕ್ಷ್ಮ ರಂಧ್ರಗಳಿಂದ ಕೂಡಿರುವುದು ರೋಗಾಣುಗಳಿಗೆ ಸೂಕ್ತವಾದ ವಾತಾವರಣವನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದೆ.
ಈ ಸ್ಪಾಂಜ್‌ಗಳಲ್ಲಿರುವ ಬ್ಯಾಕ್ಟೀರಿಯಾಗಳು ಮೊದಲು ಸಾಮಾನ್ಯ ಹೊಟ್ಟೆ ಸಮಸ್ಯೆಗಳಿಂದ ಪ್ರಾರಂಭವಾಗಿ ನ್ಯುಮೋನಿಯಾ, ಮೆನಿಂಜೈಟಿಸ್‌ನಂತಹ ಗಂಭೀರ ಸೋಂಕುಗಳಿಗೆ ಕಾರಣವಾಗಬಹುದು. ಹಾಗಿದ್ದರೆ ಸ್ಪಾಂಜ್ನಲ್ಲಿ ಯಾವ ಯಾವ ಬ್ಯಾಕ್ಟೀರಿಯಗಳು ಉತ್ಪತ್ತಿಯಾಗುತ್ತವೆ? ಈ ಬ್ಯಾಕ್ಟೀರಿಯಾ ಗಳಿಂದ ಯಾವೆಲ್ಲ ರೋಗಗಳು ಬರುತ್ತವೆ? ಎಂದು ತಿಳಿದುಕೊಳ್ಳೋಣ.
ಚರ್ಮದ ಅಲರ್ಜಿ:
ನಿಮ್ಮ ಸ್ಪಾಂಜ್‌ನಲ್ಲಿ ಸ್ಟ್ಯಾಫಿಲೋಕೊಕಸ್ ಬ್ಯಾಕ್ಟೀರಿಯಾ ಇದ್ದರೆ, ಅದು ಚರ್ಮದ ಸೋಂಕನ್ನು ಉಂಟುಮಾಡಬಹುದು. ಇದರಿಂದ ಕೈಗಳಲ್ಲಿ ಅಲರ್ಜಿ ಕೂಡ ಬರಬಹುದು. ಮೊರಾಕ್ಸೆಲ್ಲಾ ಆಸ್ಲೋಯೆನ್ಸಿಸ್ ಎಂಬ ಬ್ಯಾಕ್ಟೀರಿಯಾ ದುರ್ವಾಸನೆಯನ್ನು ಉಂಟುಮಾಡುತ್ತದೆ. ಇದರಿಂದ ಚರ್ಮದ ಸೋಂಕು, ಸಂಧಿವಾತ ಕೂಡ ಬರಬಹುದು.
ಹೊಟ್ಟೆ ನೋವು:
ಸ್ಪಾಂಜ್‌ನಲ್ಲಿರುವ ಕ್ಯಾಂಪಿಲೋಬ್ಯಾಕ್ಟರ್ ಎಂಬ ಬ್ಯಾಕ್ಟೀರಿಯಾ ನಿಮಗೆ ಹೊಟ್ಟೆ ನೋವು, ಭೇದಿ, ಜ್ವರ ಮುಂತಾದವುಗಳನ್ನು ಉಂಟುಮಾಡಬಹುದು. ಈ ಬ್ಯಾಕ್ಟೀರಿಯಾ ಸಾಮಾನ್ಯವಾಗಿ ಕೋಳಿ ಮಾಂಸದಲ್ಲಿ ಕಂಡುಬರುತ್ತದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಎಂಟರೊಬ್ಯಾಕ್ಟರ್ ಕ್ಲೋಕೇ ಎಂಬ ಬ್ಯಾಕ್ಟೀರಿಯಾ ನ್ಯುಮೋನಿಯಾದಂತಹ ಕಾಯಿಲೆಯನ್ನು ಉಂಟುಮಾಡುತ್ತದೆ.
ಹೊಟ್ಟೆ ಸೆಳೆತ ಮತ್ತು ಬೇಧಿ:
ಇ.ಕೋಲಿ ಎಂಬ ಬ್ಯಾಕ್ಟೀರಿಯಾ ತೀವ್ರವಾದ ಹೊಟ್ಟೆ ಸೆಳೆತ, ಭೇದಿ ಮುಂತಾದ ಕಾಯಿಲೆಗಳನ್ನು ಉಂಟುಮಾಡುತ್ತದೆ. ಕೆಲವರಿಗೆ ಮೂತ್ರಪಿಂಡದ ಸಮಸ್ಯೆಯನ್ನು ಉಂಟುಮಾಡಬಹುದು. ಕೋಳಿ ಮೊಟ್ಟೆಯಲ್ಲಿ ಕಂಡುಬರುವ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಕಲುಷಿತ ಆಹಾರ, ನೀರಿನೊಂದಿಗೆ ಸಂಪರ್ಕಕ್ಕೆ ಬರುತ್ತದೆ. ಇದು ಸ್ಪಾಂಜ್‌ನಲ್ಲಿ ಕಂಡುಬಂದರೆ ಭೇದಿ, ಜ್ವರ, ಸ್ನಾಯು ಸೆಳೆತ ಮುಂತಾದ ಸಮಸ್ಯೆಗಳು ಬರುತ್ತವೆ. ಕ್ಲೆಬ್ಸಿಲ್ಲಾ ಎಂಬ ಸೂಕ್ಷ್ಮಜೀವಿ ನ್ಯುಮೋನಿಯಾ, ಮೂತ್ರನಾಳದ ಸೋಂಕನ್ನು ಉಂಟುಮಾಡಬಹುದು.