Kunkuma: ಅಂಗಡಿಯಲ್ಲಿ ಸಿಗುವ ಕುಂಕುಮದಲ್ಲಿ ಅಸಲಿ, ನಕಲಿ ಯಾವುದೆಂದು ಪತ್ತೆ ಹಚ್ಚೋದು ಹೇಗೆ? ಇಲ್ಲಿದೆ ಸಿಂಪಲ್ ಟ್ರಿಕ್ಸ್
Kunkuma: ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಾಗೂ ಸಂಪ್ರದಾಯದಲ್ಲಿ ಅರಿಶಿನ ಹಾಗೂ ಕುಂಕುಮಕ್ಕೆ ಮಹತ್ವ ಜಾಸ್ತಿ. ಯಾವುದೇ ಶುಭ ಸಂದರ್ಭ ಕೂಡ ಅರಿಶಿನ ಹಾಗು ಕುಂಕುಮ(Kunkuma) ಇಲ್ಲದೆ ನಡೆಯುವುದೇ ಇಲ್ಲ. ಇವುಗಳಿಗೆ ಡಿಮ್ಯಾಂಡ್ ಹೆಚ್ಚಾದಂತೆ ನಕಲಿ ಅರಿಶಿನ ಕುಂಕುಮ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ. ಒರಿಜಿನಲ್ ಅರಿಶಿನ ಕುಂಕುಮವೆಂದು ಮನೆಗೆ ತಂದು ಮುಟ್ಟಿದರೆ ಸಾಕು ಎರಡು ದಿನವಾದರೂ ಕೈಯಲ್ಲಿನ ಬಣ್ಣ ಹೋಗುವುದಿಲ್ಲ. ಇದು ದೊಡ್ಡ ರಗಳೆಯಾಗಿ ಪರಿಣಮಿಸಿದೆ. ಹಾಗಿದ್ರೆ ಅರಿಶಿಣ ಕುಂಕುಮದಲ್ಲಿ ನಕಲಿ ಯಾವುದು, ಅಸಲಿ ಯಾವುದು ಎಂದು ಕಂಡುಹಿಡಿಯುವುದು ಹೇಗೆ? ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್
ನೀವು ಅಂಗಡಿಯಲ್ಲಿ ಕುಂಕುಮವನ್ನು ತೆಗೆದುಕೊಂಡಾಗ ಅದರ ನೈಜತ್ವವನ್ನು ಪರೀಕ್ಷೆ ಮಾಡಲು, ಒಂದೆರಡು ಚಿಟಿಕೆ ಕುಂಕುಮವನ್ನು ಒಂದು ಪೇಪರ್ ಮೇಲೆ ಹಾಕಿಕೊಂಡು ಅದನ್ನು ಪೇಪರ್ ಅಂಚಿನಲ್ಲಿ ಚೆನ್ನಾಗಿ ಉಜ್ಜಬೇಕು. ಹೀಗೆ ಮಾಡಿದಾಗ ಅದರಲ್ಲಿ ಯಾವುದೇ ಬಣ್ಣಗಳು ಬಳಕೆ ಆಗದಿದ್ದರೆ ಪೇಪರ್ ಭಾಗದಲ್ಲಿ ಹಳದಿ ಬಣ್ಣ ಕಂಡು ಬರಲು ಪ್ರಾರಂಭವಾಗುತ್ತದೆ. ಆಗ ನೀವು ತೆಗೆದುಕೊಂಡಿರುವ ಕುಂಕುಮ ಅಪ್ಪಟ ಎಂದು ಹೇಳಬಹುದು.