Manmohan Singh: ತಮ್ಮ ಆಡಳಿತದಲ್ಲಿ ಸಿಂಗ್ ಜಾರಿಗೆ ತಂದ ಅತ್ಯಂತ ಜನಪ್ರಿಯ ಯೋಜನೆಗಳಿವು

Manmohan Singh: ಅರ್ಥಶಾಸ್ತ್ರ ಪ್ರಾಧ್ಯಾಪಕನಾಗಿ, ಹಣಕಾಸು ಸಚಿವರಾಗಿ, ಪ್ರಧಾನಿಯಾಗಿ ಇಡೀ ದೇಶದ ಆರ್ಥಿಕ ಸ್ಥಿತಿ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮನಮೋಹನ್ ಸಿಂಗ್ 92ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ದಶಕಗಳ ಕಾಲ ದೇಶದ ಪ್ರಧಾನಿಯಾಗಿ ಕರ್ತವ್ಯ ನಿರ್ವಹಿಸಿದ ಅವರು ಭಾರತದ ಅಭಿವೃದ್ಧಿಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಅದರೊಂದಿಗೆ ಅವರು ಅನೇಕ ಜನ ಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಹಾಗಿದ್ದರೆ ಅವರು ತಂದ ಯೋಜನೆಗಳ ಕುರಿತು ಒಂದು ಚಿಕ್ಕ ಚಿತ್ರಣ ಇಲ್ಲಿದೆ ನೋಡಿ.

 

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (NREGA):
2005ರಲ್ಲಿ ಈ ಯೋಜನೆ ಜಾರಿಗೆ ತಂದಿದ್ದು ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ. ಈ ಯೋಜನೆ ಪ್ರತಿ ಗ್ರಾಮೀಣ ಕುಟುಂಬಕ್ಕೆ 100 ದಿನಗಳ ಕೂಲಿ ಉದ್ಯೋಗವನ್ನು ನೀಡಿತು. ಜನರ ಜೀವನೋಪಾಯವನ್ನು ಸುಧಾರಿಸುವ ಮತ್ತು ಗ್ರಾಮೀಣ ಮೂಲಸೌಕರ್ಯವನ್ನು ಹೆಚ್ಚಿಸುವುದೇ ಈ ಯೋಜನೆಯ ಉದ್ದೇಶವಾಗಿದೆ

ಮಾಹಿತಿ ಹಕ್ಕು ಕಾಯಿದೆ (RTI):
2005 ರಲ್ಲಿ ಅಂಗೀಕರಿಸಲ್ಪಟ್ಟ RTI ನಾಗರಿಕರಿಗೆ ಸಾರ್ವಜನಿಕ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯುವ ಹಕ್ಕನ್ನು ನೀಡುತ್ತದೆ, ಇದರಿಂದಾಗಿ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಉತ್ತೇಜಿಸಿತ್ತು.

ಆಧಾರ್ ಸೌಲಭ್ಯ:
ನಿವಾಸಿಗಳಿಗೆ ವಿಶಿಷ್ಟ ಗುರುತನ್ನು ಒದಗಿಸಲು, ವಿವಿಧ ಸೇವೆಗಳಿಗೆ ಪ್ರವೇಶವನ್ನು ಒದಗಿಸಲು ಆಧಾರ್ ಯೋಜನೆಯನ್ನು ಇವರ ಅವಧಿಯಲ್ಲಿಯೇ ಆರಂಭಿಸಲಾಗಿತ್ತು. ಪ್ರಸ್ತುತ ಈಗ ಆಧಾರ್ ಕಾರ್ಡ್​ ಪ್ರತಿಯೊಂದಕ್ಕೆ ಅನಿವಾರ್ಯವಾಗಿದೆ.

ನೇರ ಲಾಭ ವರ್ಗಾವಣೆ:
ಡಾ. ಮನಮೋಹನ್ ಸಿಂಗ್ ಅವರ ಸರ್ಕಾರವು ನೇರ ಲಾಭ ವರ್ಗಾವಣೆ ವ್ಯವಸ್ಥೆಯನ್ನು ಜಾರಿಗೆ ತಂದಿತು, ಇದು ಕಲ್ಯಾಣ ನಿಧಿ ವಿತರಣೆಯನ್ನು ಸರಳೀಕರಿಸಿತು ಮತ್ತು ಅನೇಕ ಲೋಪದೋಷಗಳನ್ನು ತೆಗೆದುಹಾಕಿತು.

ಕೃಷಿ ಸಾಲ ಮನ್ನಾ (2008): ಕೃಷಿ ಬಿಕ್ಕಟ್ಟು ನೀಗಿಸಲು, ರೈತರನ್ನು ಸಾಲದ ಸುಳಿಯಿಂದ ಹೊರತರಲು ಡಾ ಮನಹೋಹನ್ ಸಿಂಗ್ ಅವರು ಕೃಷಿ ಸಾಲ ಮನ್ನಾ ಮಾಡಿದ್ದರು. ಸುಮಾರು 60,000 ಕೋಟಿ ರೂ.ಗಳ ಸಾಲ ಮನ್ನಾ ಮೂಲಕ ರೈತರಿಗೆ ಪರಿಹಾರ ಒದಗಿಸುವ ಕಾರ್ಯ ಮನಮೋಹನ್‌ ಸಿಂಗ್‌ ಸರ್ಕಾರ ಅಧಿಕಾರದಲ್ಲಿದ್ದಾಗಿತ್ತು,

Leave A Reply

Your email address will not be published.