India as a Muslim Nation:ಈ ವರ್ಷದ ವೇಳೆಗೆ ಮುಸ್ಲಿಂ ರಾಷ್ಟ್ರವಾಗಿ ಹೊರಹೊಮ್ಮಲಿದೆ ಭಾರತ!! ಅಚ್ಚರಿ ವರದಿ ಬಹಿರಂಗ!!
India as a Muslim Nation: ಭಾರತವು ಜಾತ್ಯಾತೀತ ರಾಷ್ಟ್ರ. ಇದರೊಂದಿಗೆ ಹಲವು ಧರ್ಮಗಳಿಗೆ ಭಾರತವು ಆಶ್ರಯ ನೀಡಿದೆ. ಆದರೆ ಈ ವರ್ಷದ ವೇಳೆಗೆ ಭಾರತ ಮುಸ್ಲಿಂ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ವರದಿಯೊಂದು ತಿಳಿಸಿದೆ.
ಹೌದು, 2050 ರ ವೇಳೆಗೆ (311 ಮಿಲಿಯನ್) ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಲಿದೆ ಎನ್ನಲಾಗಿದೆ. ಪ್ಯೂ ರಿಸರ್ಚ್ ಸೆಂಟರ್ ಈ ಕುರಿತು ವರದಿ ನೀಡಿದೆ.
ಪ್ರಸ್ತುತ, ಇಂಡೋನೇಷ್ಯಾ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದ್ದು, ಇಂಡೋನೇಷ್ಯಾವು 2050 ರ ವೇಳೆಗೆ 257 ಮಿಲಿಯನ್ ಮುಸ್ಲಿಮರೊಂದಿಗೆ ಮೂರನೇ ಸ್ಥಾನಕ್ಕೆ ಕುಸಿಯುವ ಸಾಧ್ಯತೆಯಿದೆ. ಆದರೆ 2025ರ ವೇಳೆಗೆ ಭಾರತವು ಇಂಡೋನೇಷ್ಯಾವನ್ನು ಮುಸ್ಲಿಂ ಜನಸಂಖ್ಯೆಯಲ್ಲಿ ಹಿಂದಿಕ್ಕಲಿದ್ದು ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ ಎನ್ನಲಾಗಿದೆ. ಪಾಕಿಸ್ತಾನವು ಎರಡನೇ ಅತಿ ಹೆಚ್ಚು ಮುಸ್ಲಿಮರನ್ನು (273 ಮಿಲಿಯನ್) ಹೊಂದುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ.
ಅಲ್ಲದೆ ಅದರೊಂದಿಗೆ ಹಿಂದೂ ಧರ್ಮವು 2050 ರ ವೇಳೆಗೆ ವಿಶ್ವದ ಮೂರನೇ ಅತಿದೊಡ್ಡ ಧರ್ಮವಾಗಲಿದೆ. ಭಾರತವನ್ನು ಹೊರತುಪಡಿಸಿ ಉಳಿದೆಲ್ಲ ದೇಶಗಳಲ್ಲಿ ಹಿಂದೂ ಜನಸಂಖ್ಯೆ ಕಡಿಮೆಯಾಗಲಿದೆ ಎನ್ನುವುದು ಅಧ್ಯಯನದಿಂದ ತಿಳಿದು ಬಂದಿದೆ.