Shivraj Kumar: ಶಿವಣ್ಣನಿಗೆ ಯಾವ ಭಾಗದಲ್ಲಿ ಕ್ಯಾನ್ಸರ್ ಆಗಿತ್ತು? ಈ ಕುರಿತು ವೈದ್ಯರು ಹೇಳಿದ್ದೇನು?
Shivraj Kumar: ಅನಾರೋಗ್ಯಕ್ಕೆ ಒಳಗಾಗಿದ್ದ ಶಿವರಾಜ್‌ಕುಮಾರ್ ಅವರಿಗೆ ಅಮೆರಿಕಾದಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮುಗಿದಿದೆ. ಈ ಮೂಲಕ ಕನ್ನಡಿಗ ಅಭಿಮಾನಿಗಳ ಪ್ರಾರ್ಥನೆ ಈಡೇರಿದಂತಾಗಿದೆ. ಮೊದಲಿಗೆ ಕೇವಲ ಅನಾರೋಗ್ಯ ಎಂದಷ್ಟೇ ಹೇಳಿಕೊಂಡಿದ್ದ ಶಿವಣ್ಣ ಶಸ್ತ್ರಚಿಕಿತ್ಸೆಗೂ ಒಳಗಾಗುವ ಮುನ್ನ ತಮಗೆ ಕ್ಯಾನ್ಸರ್ ಇರುವುದನ್ನು ರಿವೀಲ್ ಮಾಡಿದ್ದರು. ಆದರೆ ಯಾವ ರೀತಿಯ ಕ್ಯಾನ್ಸರ್ ಎಂಬುದಾಗಿ ಅವರು ತಿಳಿಸಿರಲಿಲ್ಲ. ಇದೀಗ ಅವರ ಶಸ್ತ್ರಚಿಕಿತ್ಸೆ ಮುಗಿದ ಬಳಿಕ ವೈದ್ಯರು ಈ ಕುರಿತು ಬಹಿರಂಗಪಡಿಸಿದ್ದಾರೆ.
ಹೌದು, ನಟ ಶಿವರಾಜ್‌ಕುಮಾರ್(Shivraj Kumar) ಅವರಿಗೆ ಡಿಸೆಂಬರ್ 24ರಂದು ಯುಎಸ್‌ನ ಮಿಯಾಮಿಯಲ್ಲಿರುವ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನಲ್ಲಿ ಯಶಸ್ವಿಯಾಗಿ ಸರ್ಜರಿ ಆಗಿದೆ. ಶಿವರಾಜ್‌ಕುಮಾರ್ ಅವರು ಅಮೆರಿಕಾಕ್ಕೆ ಹೋಗುವ ಮುನ್ನ ತಮಗೆ ಸರ್ಜರಿ ಆಗಬೇಕಿದೆ ಎಂದಷ್ಟೇ ಹೇಳಿದ್ದರು ಹೊರತು ಏನು ಸರ್ಜರಿ ಎಂದು ಸರಿಯಾಗಿ ಹೇಳಿರಲಿಲ್ಲ. ಒಟ್ಟಿನಲ್ಲಿ ಅವರು ಅಮೆರಿಕಕ್ಕೆ ಹೋಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಬಳಿಕ ಶಿವಣ್ಣ ಅವರಿಗೆ ಯಾವ ಭಾಗದಲ್ಲಿ ಕ್ಯಾನ್ಸರ್ ಆಗಿದೆ ಎಂಬುದು ಬಹಿರಂಗವಾಗಿದೆ.
ಶಿವಣ್ಣ ಅವರಿಗೆ ಮೂತ್ರಪಿಂಡ ಕ್ಯಾನ್ಸರ್ ಇತ್ತು, ಕ್ಯಾನ್ಸರ್ ತಗುಲಿದ್ದ ಮೂತ್ರಪಿಂಡವನ್ನು ತೆಗೆದುಹಾಕಲಾಗಿದೆ. ಶಸ್ತ್ರಚಿಕಿತ್ಸೆ ನಂತರ ಕರುಳನ್ನು ಬಳಸಿ ಕೃತಕ ಮೂತ್ರಪಿಂಡವನ್ನು ಅಳವಡಿಸಲಾಗಿದೆ ಎಂದು ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.
ವೈದ್ಯರು ಹೇಳಿದ್ದೇನು?
ಸ್ವತಃ ಡಾ. ಮನೋಹರ್ ಅವರೇ ಮಾಹಿತಿ ನೀಡಿ ʼಶಿವಣ್ಣ ಅವರಿಗೆ ಮಾಡಲಾದ ಸರ್ಜರಿ ಯಶಸ್ವಿಯಾಗಿದೆ. ಕ್ಯಾನ್ಸರ್ ತಗುಲಿದ್ದ ಮೂತ್ರಕೋಶದ ಭಾಗವನ್ನ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಅವರದ್ದೇ ಕರುಳುಬಳ್ಳಿಯನ್ನ ಬಳಸಿ, ಕೃತಕ ಮೂತ್ರಕೋಶವನ್ನ ಅಳವಡಿಸಲಾಗಿದೆ. ಶಿವಣ್ಣ ಅವರು ಮಾನಸಿಕ ಮತ್ತು ದೈಹಿಕವಾಗಿ ಅತ್ಯಂತ ಸ್ಟ್ರಾಂಗ್ ಇದ್ದಾರೆ. ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಮತ್ತು ಶಸ್ತ್ರಚಿಕಿತ್ಸೆ ನಂತರ ಅವರ ಆರೋಗ್ಯ ಸ್ಥಿರವಾಗಿದೆ. ಎಲ್ಲ ರೀತಿಯ ಟೆಸ್ಟ್ ರಿಪೋರ್ಟ್‌ಗಳಲ್ಲೂ ನಾರ್ಮಲ್ ರಿಸಲ್ಟ್ ಬಂದಿದೆ. ಅವರ ಶಕ್ತಿ ಮತ್ತು ಸಂಕಲ್ಪ, ದೇವರ ಕೃಪೆಯಿಂದ ಶಿವಣ್ಣ ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆ. ಕೆಲವೇ ವಾರಗಳಲ್ಲಿ ಅವರು ಮತ್ತೆ ಮೊದಲಿನಂತೆ ಆಗುತ್ತಾರೆʼ ಎಂದು ಹೇಳಿದ್ದಾರೆ.