Drone Pratap: ಮತ್ತೊಮ್ಮೆ ಬಂಧನ ಭೀತಿಯಲ್ಲಿ ಮಾಜಿ ಬಿಗ್‌ಬಾಸ್‌ ಸ್ಪರ್ಧಿ; ಡ್ರೋಣ್‌ ಪ್ರತಾಪ್‌ ಮೇಲೆ ದೂರು ದಾಖಲು

Drone Pratap: ಕೃಷಿ ಹೊಂಡದಲ್ಲಿ ಸೋಡಿಯಂ ಮೆಟಲ್‌ ಬಳಸಿದ ಆರೋಪದ ನಂತರ ಜೈಲು ಸೇರಿದ ಡ್ರೋಣ್‌ ಪ್ರತಾಪ್‌ ಜಾಮೀನಿನ ಮೇಲೆ ಹೊರ ಬಂದಿದ್ದು, ಇದೀಗ ಮತ್ತೆ ಬಂಧನ ಭೀತಿ ಎದುರಾಗಿರುವ ಘಟನೆಯೊಂದು ನಡೆದಿದೆ.

ಪಶು ವೈದ್ಯರಾಗಿರುವ ಪ್ರಯಾಗ್‌ ಅವರು, ಪ್ರತಾಪ್‌ ವಿರುದ್ದ ಎಡಿಜಿಪಿ ಹಿತೇಂದ್ರ ಕುಮಾರ್‌ಗೆ ದೂರು ನೀಡಿದ್ದಾರೆ. ಪ್ರತಾಪ್‌ ಅವರು ಲೈಸೆನ್ಸ್‌ ಇಲ್ಲದೆ ಬೇರೆಯವರಿಗೆ ಡ್ರೋಣ್‌ ಹಾರಿಸಲು ಪ್ರಚೋದನೆ ನೀಡಿರುವ ಕುರಿತು ವರದಿಯಾಗಿದೆ. ಡ್ರೋಣ್‌ ಹಾರಿಸುವ ಮೂಲಕ ಇದೊಂದು ಸಂಶೋಧನೆ ಎಂದು ಸುಳ್ಳು ಹೇಳಿದ್ದಾರೆ, ಕೃಷಿ ಮಾಡುವ ರೈತರಿಗೆ ಡ್ರೋಣ್‌ ಹೆಸರಲ್ಲಿ ಔಷಧಿ ಸಿಂಪಡಿಕೆ ಮಾಡುವ ರೀತಿಯಲ್ಲಿ ಮೋಸ ಮಾಡಿದ್ದಾರೆ ಎಂಬ ಆರೋಪವನ್ನು ಹೊರಿಸಿದ್ದಾರೆ.

ಡ್ರೋಣ್‌ ಪ್ರತಾಪ್‌ 9 ದಿನ ಜೈಲುವಾಸ ಅನುಭವಿಸಿದದ ಪ್ರತಾಪ್‌ ಇನ್ನು ಮತ್ತೊಮ್ಮೆ ಜೈಲು ಪಾಲಾಗುವ ಆತಂಕ ಉಂಟಾಗಿದೆ ಎನ್ನಬಹುದು. ಪ್ರಯಾಗ್‌ ಅವರು ಪ್ರತಾಪ್‌ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ದೂರು ನೀಡಿದ್ದಾರೆ.

Leave A Reply

Your email address will not be published.