Kadaba: ಮೇಯಲೆಂದು ಬಿಟ್ಟಿದ್ದ ದನದ ಕಾಲನ್ನು ಕಡಿದ ಅಬ್ಬಾಸ್‌

Share the Article

Kadaba: ಮೇಯಲು ಬಿಟ್ಟಿದ್ದ ದನದ ಕಾಲಿಗೆ ಪಕ್ಕದ ಮನೆಯ ವ್ಯಕ್ತಿಯೊಬ್ಬರು ಕತ್ತಿಯಿಂದ ಕಡಿದು ಗಂಭೀರ ಗಾಯಗೊಳಿಸಿದ ಘಟನೆಯೊಂದು ರಾಮಕುಂಜ ಗ್ರಾಮದ ಕೊಂಡ್ಯಾಡಿಯಲ್ಲಿ ನಡೆದಿರುವ ಕುರಿತು ವರದಿಯಾಗಿದೆ.

ಕೊಂಡ್ಯಾಡಿ ನಿವಾಸಿ ಕೃಷಿಕೆ ರಾಜೀವಿ ಎಂಬುವವರು ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ. ಡಿ.22 ರ ಮಧ್ಯಾಹ್ನ ಎರಡು ಗಂಟೆಗೆ ಕೊಟ್ಟಿಗೆಯಿಂದ ದನವನ್ನು ತೋಟದಲ್ಲಿ ಮೇಯಲು ಬಿಟ್ಟಿದ್ದು, ದನ ಸಂಜೆಯಾದರೂ ಮರಳಿ ಮನೆಗೆ ಬಾರದೇ ಇದ್ದುದ್ದನ್ನು ಕಂಡು ಹುಡುಕಾಟ ಮಾಡಿದಾಗ ಪಕ್ಕದ ಮನೆ ಅಬ್ಬಾಸ್‌ ಎಂಬುವವರ ತೋಟದಲ್ಲಿ ಕಾಲಿಗೆ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ದನ ಬಿದ್ದಿತ್ತು.

ಈ ಕುರಿತು ವಿಚಾರಣೆ ಮಾಡಿದಾಗ, ʼನಾನೇ ಕತ್ತಿಯಲ್ಲಿ ಕಡಿದದ್ದು, ಏನೀವಾಗ? ನಿನಗೆ ಏನು ಮಾಡಲಿಕ್ಕೆ ಆಗುತ್ತೆ ನನಗೆ? ನೀನು ಸ್ವಲ್ಪ ಬೇಗ ಬಂದಿದ್ದರಲ್ಲಿ ಆಯಿತು, ಇಲ್ಲದಿದ್ದರೆ ಇವತ್ತು ಮಾಂಸ ಮಾಡಿ ಬಿಡುತ್ತಿದ್ದೆʼ ಎಂದು ತುಳುವಿನಲ್ಲಿ ಬೈದಿದ್ದಾರೆ. ಹೇಗಿದ್ದರೂ ದನ ಸಾಯುತ್ತೆ ಅಲ್ವ. ಅದರ ನಂತರ ನಾನೇ ತಗೊಂಡು ಹೋಗುತ್ತೇನೆ. ಪದಾರ್ಥಕ್ಕಾದರೂ ಆಗುತ್ತದೆ ಎಂದು ಹೇಳಿದ್ದಾರೆ.

ನನ್ನ ಆದಾಯದ ಮೂಲಕ್ಕೆ ತೊಂದರೆಯಾಗಿದೆ. ದನದ ಕಾಲಿಗೆ ಕಡಿದಿರುವ ಆರೋಪಿ ಅಬ್ಬಾಸ್‌ ಮೇಲೆ ಪ್ರಕರಣ ದಾಖಲು ಮಾಡಿ ಕಾನೂನು ಕ್ರಮ ಜರುಗಿಸಲು ದೂರಿನಲ್ಲಿ ಹೇಳಲಾಗಿದೆ.

ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Leave A Reply