Hosakote: ಹೊಸಕೋಟೆಗೆ ಮೆಟ್ರೊ ಸಂಪರ್ಕ: ಸರ್ಕಾರದ ಸಕ್ರಿಯ ಪರಿಶೀಲನೆಯಲ್ಲಿ ಉಪಮುಖ್ಯಮಂತ್ರಿ ಭರವಸೆ

Hosakote: ಬೆಂಗಳೂರಿನ ಐಟಿಐ ಕಾರ್ಖಾನೆಯಿಂದ ಕೃಷ್ಣರಾಜಪುರ ಮತ್ತು ಹೊಸಕೋಟೆ ವರೆಗಿನ ವಾಹನ ದಟ್ಟಣೆ ಅಧಿಕವಾಗಿರುವುದರಿಂದ ಮೆಟ್ರೊ ಮತ್ತು ಮೇಲು ಸೇತುವೆ ನಿರ್ಮಿಸಬೇಕು ಎಂದು ಇಲ್ಲಿನ ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡರು ಬೆಳಗಾವಿಯ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರಕ್ಕೆ ಆಗ್ರಹಿಸಿದರು.

ಪ್ರಶೋತ್ತರ ಅವಧಿಯಲ್ಲಿ ಅವರು ಈ ಕುರಿತು ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿಶೇಷ ಗಮನ ಸೆಳೆದರು. ಅಲ್ಲದೇ ‘ಈ ಕುರಿತು ಶರತ್ ಬಚ್ಚೇಗೌಡರು ಬಹು ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ’ ಎಂದು ಪ್ರಶಂಸೆ ಮಾಡಿದ ಶಿವಕುಮಾರ್ ಅವರು ಕೋಲಾರ ಕಡೆಯಿಂದ ಬರುವ ರೈಲುಗಳಲ್ಲಿ ದಿನವೂ 10,000 ಜನರು ಹೊಸಕೋಟೆ (Hosakote) ಕಡೆಯಿಂದ ಬೆಂಗಳೂರಿಗೆ ಕೆಲಸಕ್ಕೆ ಬರುತ್ತಿದ್ದಾರೆ. ಇದು ಆ ರಸ್ತೆಯಲ್ಲಿ ಇರುವ ಜನ ಸಂಚಾರದ ಪ್ರಮಾಣವನ್ನು ತೋರಿಸುತ್ತದೆ’ ಎಂದು ಹೇಳಿದರು.

ಇದಕ್ಕೆ ಪೂರಕವಾಗಿ ಐ.ಟಿ, ಕಾರಿಡಾರ್ ಕೂಡ ಹೊಸಕೋಟೆ ಜತೆಗೆ ಸಂಪರ್ಕವಾದಂತೆ ಆಗಿ ಬಿಟ್ಟಿದೆ. ಹೀಗಾಗಿ ಮತ್ತು ಆ ಭಾಗದಲ್ಲಿ ಜನರ ಸಂಚಾರ ಹೆಚ್ಚಿನ ಪ್ರಮಾಣದಲ್ಲಿ ಇದೆ’ ಎಂದು ಉಪಮುಖ್ಯಮಂತ್ರಿಗಳು ತಿಳಿಸಿದರು.

‘ಪರತ್ ಬಚ್ಚೇಗೌಡರು ಕೇಳಿದ್ದು ಒಪ್ಪುವಂತ ವಿಚಾರ ಈಗಾಗಲೇ ಸರ್ಕಾರ ವಿವರವಾದ ಸಮೀಕ್ಷೆಯನ್ನು ಮಾಡಿ ಯೋಜನೆ ತಯಾರಿಸುವ ದಿಸೆಯಲ್ಲಿ ಕಾರ್ಯ ನಿರತವಾಗಿದೆ. ಈ ಕಡೆ ಹೊಸಕೋಟೇ, ಆ ಕಡೆ ನೆಲಮಂಗಲ ಮತ್ತು ಇನ್ನೊಂದು ಕಡೆ ಬಿಡದಿ ಹೀಗೆ ಮೂರು ಕಡೆಗಳಲ್ಲಿ ಮೆಟ್ರೊ ಸಂಪರ್ಕ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ’ ಎಂದು ಉಪಮುಖ್ಯಮಂತ್ರಿಗಳು ಸದನಕ್ಕೆ ಭರವಸೆ ನೀಡಿದರು.

ತಾವು ಪ್ರಸ್ತಾಪಿಸಿದ ವಿಚಾರವನ್ನು ಸಹಾಮಭೂತಿಯಿಂದ ಪರಿಶೀಲಿಸುವುದಾಗಿ ತಿಳಿಸಿದ ಉಪಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸಿದ ಭರತ್ ಬಚ್ಚೇಗೌಡರು ಕೃಷ್ಣರಾಜಪುರದಿಂದ 15 ಕಿಲೋ ಮೀಟರ್ ದಾಟಲು 40 ನಿಮಿಷ ಬೇಕಾಗುತ್ತದೆ. ಹೈದರಾಬಾದ್, ಮೈಸೂರು ಕಡೆಗಳಿಗೆ ತೆರಳುವ ವಾಹನಗಳಿಗೆ ಮೇಲು ಸೇತುವೆ ಸಂಪರ್ಕ ಇದ್ದು ಚೆನ್ನೈ ರಸ್ತೆ ಕಡೆಯೂ ಮೇಲ್ವೇತುವೆ ರಸ್ತೆ ಸಂಪರ್ಕ ಕಲ್ಪಿಸಿದರೆ ವಾಹನ ಸಂಚಾರಕ್ಕೆ ಅನುಕೂಲ ಆಗುತ್ತದೆ ‘ ಎಂದು ಮನವಿ ಮಾಡಿಕೊಂಡರು.

ಈ ಮೂಲಕ ಹೊಸಕೋಟೆ ಶಾಸಕರಾದ ಶರತ್ ಬಚ್ಚೇಗೌಡರು ತಮ್ಮ ಮತಕ್ಷೇತ್ರವನ್ನು ಬೆಂಗಳೂರಿನ ಸೆಟಲೈಟ್ ನಗರವಾಗಿ ಅಭಿವೃದ್ಧಿಪಡಿಸುವ ತಮ್ಮ ಕನಸನ್ನು ಸದನದ ಮುಂದೆ ಇಟ್ಟರು ಹೊಸಕೋಟಿಗೆ ಮೆಟ್ರೊ ಸಂಪರ್ಕ ಬಂದರೆ ಆ ಕ್ಷೇತ್ರದ ಅಭಿವೃದ್ಧಿ ನಕಾಶೆಯೇ ಬದಲಾಗುತ್ತದೆ ಎಂಬುದು ಅವರ ಇಚ್ಛೆಯಾಗಿದೆ.

Leave A Reply

Your email address will not be published.