Kiccha Sudeep : ಬಿಗ್ ಬಾಸ್ ಸೀಸನ್ 12ರ ಹೋಸ್ಟರ್ ಯಾರು ? ಕಿಚ್ಚ ಸುದೀಪ್ ನೀಡಿದ್ರು ಗುಡ್ ನ್ಯೂಸ್
Kiccha Sudeep: ಸುಮಾರು 10 ವರ್ಷಗಳ ಕಾಲ ಬಿಗ್ ಬಾಸ್(Bigg Boss Kannada) ಶೋನ ನಿರೂಪಕರಾಗಿ ಅಭಿಮಾನಿಗಳ, ವೀಕ್ಷಕರ ಮನ ಗೆದ್ದಿರುವ ಕಿಚ್ಚ ಸುದೀಪ್(Kiccha Sudeep) ಇದೀಗ ಮುಂದಿನ ಸೀಸನ್ ಮೂಲಕ ಬಿಗ್ ಬಾಸ್ ಗೆ ವಿದಾಯ ಘೋಷಿಸಿದ್ದಾರೆ. ಆದರೆ ಇದರ ಬೆನ್ನಲ್ಲೇ ಕಾಡುವ ಯಕ್ಷ ಪ್ರಶ್ನೆ ಎಂದರೆ ಕಿಚ್ಚನ ಸ್ಥಾನ ತುಂಬವ ವ್ಯಕ್ತಿ ಯಾರು ಎಂಬುದು. ವಿ ಕುರಿತಾಗಿ ಕನ್ನಡದ ಹಲವಾರು ನಟರ ಹೆಸರುಗಳು ಕೇಳಿಬಂದಿದ್ದವು. ಆದರೆ ಇದಾವುದಕ್ಕೂ ಕೂಡ ಉತ್ತರ ಸಿಕ್ಕೇ ಇಲ್ಲ. ಮಾದರಿಗ ಅಚ್ಚರಿ ಎಂಬಂತೆ ಈ ಕುರಿತು ಕಿಚ್ಚ ಸುದೀಪ್ ಅವರೇ ಮಾತನಾಡಿದ್ದಾರೆ.
ಎಸ್ ಕಿಚ್ಚ ಸುದೀಪ್(Kiccha Sudeep)ಅವರ ಮ್ಯಾಕ್ಸ್ ಚಿತ್ರ ಇನ್ನು ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ. ಈ ಹಿನ್ನೆಲೆಯಲ್ಲಿ ಹಲವಾರು ಮಾಧ್ಯಮಗಳು ಕಿಚ್ಚನನ್ನು ಸಂದರ್ಶನ ಮಾಡುತ್ತಿವೆ. ಈ ವೇಳೆ ಸುದೀಪ ಅವರಿಗೆ ಬಿಗ್ ಬಾಸ್ ಸೀಸನ್ 12ರ ಹೋಸ್ಟರ್ ಯಾರಾಗಬಹುದು ಎಂಬುದರ ಬಗ್ಗೆ ಪ್ರಶ್ನೆಗಳು ಎದುರಾಗಿವೆ. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ನಿರ್ಧಾರವನ್ನು ನಾನು ಹೇಳಿದ್ದೇನೆ. ಟ್ವಿಟರ್‌ನಲ್ಲೂ ಬರೆದುಕೊಂಡಿದ್ದೇನೆ. ಬಿಗ್ ಬಾಸ್ ಸಾಕು ಅನಿಸುತ್ತಿದೆ. ಅದಕ್ಕೆ ಮುಂದೆ ಮಾಡುವುದಿಲ್ಲ ಅಂತಲೇ ಹೇಳಿಕೊಂಡಿದ್ದೇನೆ. ಆದರೆ, ಕಲರ್ಸ್ ಕನ್ನಡ ವಾಹಿನಿ ಅದನ್ನು ಇನ್ನೂ ಒಪ್ಪಿಕೊಳ್ಲೂತ್ತಿಲ್ಲ ಬಿಡಿ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ.
ಬಿಗ್ ಬಾಸ್ ಸೀಸನ್ 12 ಇನ್ನೂ ಆರಂಭವಾಗಿಲ್ಲ. ಅದು ಆದಾಗ ನೋಡೋಣ. ಮತ್ತೆ ಮಾಡಲೇಬೇಕು ಅನಿಸಿದರೆ, ಯೋಚನೆ ಮಾಡುತ್ತೇನೆ. ಆದರೆ, ಟ್ವೀಟ್ ಮಾಡಿದ್ದೇನೆ. ಅದಕ್ಕೆ ಮಾಡುವುದಿಲ್ಲ ಎಂದು ದೃಢ ನಿರ್ಧಾರ ಮಾಡುವುದಿಲ್ಲ. ಆ ಸಮಯಕ್ಕೆ ಏನು ಅನಿಸುತ್ತದೆಯೋ ಅದನ್ನೇ ಮಾಡುತ್ತೇನೆ ಎಂದು ಸುದೀಪ್ ಅವರು ಹೇಳಿಕೊಂಡಿದ್ದಾರೆ ಅಂತಾ ನ್ಯೂಸ್ 18 ಕನ್ನಡ ವರದಿ ಮಾಡಿದೆ.
ಬಿಗ್ ಬಾಸ್ ಮಾಡಲೇಬಾರದು ಎಂದೆನಿಸಿದು. ಆಯೋಚನೆ ಬಂದಾಗ ಸುಮ್ಮಬೆ ಇರಲಿಲ್ಲ. ಬದಲಾಗಿ ಬೆಳಗ್ಗೆವರೆಗೂ ಕಾದು ನೋಡೋಣ ಅಂತಾ ಯೋಚನೆ ಕೂಡ ಮಾಡಲಿಲ್ಲ. ಬೆಳಗ್ಗೆ ಮನಸು ಬದಲಾಗಬಹುದು ಎಂದು ರಾತ್ರಿನೇ ಟ್ವೀಟ್ ಮಾಡಿದ್ದೇನೆ. ಅಷ್ಟು ಬಿಟ್ಟರೆ ಬೇರೇನೂ ಇಲ್ಲ. ಸದ್ಯಕ್ಕೆ ಬಿಗ್ ಬಾಸ್ ಸಾಕು ಅನಿಸಿದೆ. ಸೀಸನ್ 12 ಅಂತಾ ಬಂದಾಗ ನೋಡುತ್ತೇನೆ ಎಂದು ಹೇಳಿದ್ದಾರೆ.