Gold Suresh: ತಾನು ಧರಿಸುವ ಚಿನ್ನಭಾರಣ ಕುರಿತು ಮಹತ್ವದ ನಿರ್ಧಾರ ಕೈಗೊಂಡ ಗೋಲ್ಡ್ ಸುರೇಶ್ !!
Gold Suresh: ಉತ್ತಮ ಪಟ್ಟ ಪಡೆದು ಕ್ಯಾಪ್ಟನ್ ಆಗಿ ತನ್ನ ಪೌರುಷವನ್ನು ತೋರಲು ರೆಡಿಯಾಗಿದ್ದಂತಹ ಬಿಗ್ ಬಾಸ್ ಕಂಟೆಸ್ಟೆಂಟ್ ಗೋಲ್ಡ್ ಸುರೇಶ್ ಅವರು ತಮ್ಮ ಉದ್ಯಮದ ವ್ಯವಹಾರದ ಕಾರಣದಿಂದಾಗಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಹೊರಬಂದ ಬೆನ್ನಲ್ಲೇ ಅವರು ತಾನೇಕೆ ಮನೆಯಿಂದ ಇದ್ದಕ್ಕಿದ್ದಂತೆ ಹೊರ ನಡೆದೆ ಎಂಬುದರ ಕುರಿತು ಸ್ಪಷ್ಟೀಕರಣ ನೀಡಿದ್ದರು. ಈ ಬೆನ್ನಲ್ಲೇ ಅವರು ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.
‘ಗೋಲ್ಡ್ ಸುರೇಶ್’ ಹೆಸರೇ ಸೂಚಿಸುವಂತೆ ಅವರು ಚಿನ್ನದ ವ್ಯಕ್ತಿ. ಅಂದರೆ ಮೈತುಂಬ ಚಿನ್ನವನ್ನು ಧರಿಸುವಂತಹ ಮನುಷ್ಯ. ತಾವು ಸ್ವಂತ ದುಡಿಮೆ ಮೂಲಕ ಸಂಪಾದಿಸಿದ ಪ್ರತಿಫಲವೇ ಇದು ಎಂದು ಯಾವಾಗಲೂ ಸುರೇಶ್ ಹೇಳಿಕೊಳ್ಳುತ್ತಾರೆ. ಆದರೆ ಈಗ ಸುರೇಶ್ ಅವರು ತಾವದರಿಸುವ ಈ ಚಿನ್ನದ ವಿಚಾರವಾಗಿ ಒಂದು ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ.
ಹೌದು, ಗೋಲ್ಡ್ ಸುರೇಶ್ ಅವರು ಬಿಗ್ಬಾಸ್ ಮನೆಯಿಂದ ಹೊರಕ್ಕೆ ಬಂದ ಮೇಲೆ ಬಹುದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಮೈತುಂಬಾ ಚಿನ್ನಾಭರಣ ಹಾಕಿಕೊಂಡಿರೋ ಗೋಲ್ಡ್ ಸುರೇಶ್, ಹೊರಕ್ಕೆ ಬಂದ ಮೇಲೆ ಬಹುತೇಕ ಎಲ್ಲಾ ಆಭರಣಗಳನ್ನೂ ತೆಗೆದಿಟ್ಟಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿರುವ ಸುರೇಶ್ ಅವರು, ಯಾರೂ ಊಹಿಸದ ರೀತಿಯಲ್ಲಿ ತಾವೊಂದು ದೊಡ್ಡ ನಿರ್ಧಾರ ತೆಗೆದುಕೊಂಡಿರುವ ಮಾಹಿತಿಯನ್ನು ತೆರೆದಿಟ್ಟಿದ್ದಾರೆ.
ಅದೇನೆಂದರೆ, ಇನ್ನು ಮುಂದೆ ತಾವು ಬಾರಿ ಗೋಲ್ಡ್ ಧರಿಸಲ್ಲ. ಇದು ಬಿಗ್ಬಾಸ್ ತಮಗೆ ಕಲಿಸಿರುವ ಪಾಠ. ಕಿಚ್ಚ ಸುದೀಪ್ ಅವರೂ ಇದೇ ಮಾತನ್ನು ಪದೇ ಪದೇ ಹೇಳುತ್ತಿದ್ದರು. ಮನೆಯಲ್ಲಿ ಕೂಡ ಗೋಲ್ಡ್ ಇಲ್ಲದೆನೇ ನೀನು ಚೆನ್ನಾಗಿ ಕಾಣಿಸ್ತಿಯಾ ಎಂದರು. ಸುದೀಪ್ ಅವರೂ ನಿಮ್ಮನ್ನು ಚಿನ್ನ ಇಲ್ಲದೆನೇ ನೋಡೋಕೆ ಚೆನ್ನ ಅಂತಿದ್ದರು. ಆದ್ದರಿಂದ ಇನ್ನು ಮುಂದೆ ಸಿಂಪಲ್ ಆಗಿ ಇರೋ ನಿರ್ಧಾರ ಮಾಡಿದ್ದೇನೆ ಎಂದಿದ್ದಾರೆ.
ಕೆ.ಜಿ. ಇದ್ದೆ. ಈಗ 60 ಕೆ.ಜಿ. ಆಗಿದ್ದೇನೆ. ಇಷ್ಟೆಲ್ಲಾ ಆಭರಣ ಹೇರಿಕೊಳ್ಳುವ ಶಕ್ತಿ ಇಲ್ಲ. ಅದಕ್ಕೂ ಈ ನಿರ್ಧಾರ ಎಂದಿದ್ದಾರೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ನಾನು ಬಿಗ್ಬಾಸ್ ಒಳಗೆ ಇದ್ದಾಗ, ಸುದೀಪ್ ಅವರು, ಸೂರಿ ನೀವೆಷ್ಟು ಮುದ್ದಾಗಿ ಕಾಣಿಸ್ತೀರಿ ಗೋಲ್ಡ್ ಇಲ್ಲದೇ ಎಂದಿದ್ದೇ ನನ್ನ ಮೇಲೆ ತುಂಬಾ ಪ್ರಭಾವ ಬೀರಿದೆ. ಗೋಲ್ಡ್ ಹಾಕಿದಾಗ ಹಾರ್ಡ್ ಆಗಿ, ಹಾಕದೇ ಇದ್ದಾಗ ಸಾಫ್ಟ್ ಆಗಿ ಕಾಣಿಸ್ತೇನೆ ಎಂದು ತುಂಬಾ ಮಂದಿ ಹೇಳಿದ್ದಾರೆ. ಅದಕ್ಕೇ ಈ ನಿರ್ಧಾರ ಎಂದು ಖಾಸಗಿ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಗೋಲ್ಡ್ ಸುರೇಶ್ ಹೇಳಿದ್ದಾರೆ.