Belthangady : 14 ವರ್ಷಗಳ ಹಿಂದಿನ ಅಪಘಾತದಿಂದಾಗಿ ಜೀವನ್ಮರಣ ಸ್ಥಿತಿಯಲ್ಲಿದ್ದ ಶಿಕ್ಷಕಿ ಸಾವು !!

Belthangady : 2010ರ ಜುಲೈ ಅಂದರೆ ಸುಮಾರು 14 ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ(Belthangady) ತಾಲೂಕಿನ ಸಂತೆಕಟ್ಟೆ ಅಯ್ಯಪ್ಪ ಮಂದಿರದ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ತೀವ್ರ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿದ್ದ ಕಳಿಯ ಗ್ರಾಮದ ಉಬರಡ್ಕ ನಿವಾಸಿ ದಿ. ಕುಂರ್ಬಿಲ ಹಾಗೂ ಲಕ್ಷ್ಮೀ ದಂಪತಿ ಪುತ್ರಿ ಭಾರತಿ (41) ಮಂಗಳವಾರ ರಾತ್ರಿ ಅಸು ನೀಗಿದ್ದಾರೆ.

14 ವರ್ಷಗಳ ಹಿಂದೆ ಏನಾಗಿತ್ತು?
2010ರ ಜುಲೈ 30ರಂದು ಭಾರೀ ಮಳೆ ಸುರಿಯುತ್ತಿದ್ದ ವೇಳೆ ಮೇಲಂತಬೆಟ್ಟು ಪದವಿಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕಿಯರಾದ ಭಾರತಿ ಹಾಗೂ ಜಯಮಾಲಾ ಕಾಲೇಜು ಬಿಟ್ಟು ಆಟೋದಲ್ಲಿ ಬರುತ್ತಿದ್ದ ಸಂದರ್ಭ ಮೂಡಿಗೆರೆ ಕಡೆಯಿಂದ ಬರುತ್ತಿದ್ದ ಪಿಕಪ್‌ ಸಂತೆಕಟ್ಟೆ ಅಯ್ಯಪ್ಪ ಮಂದಿರದ ಬಳಿ ಢಿಕ್ಕಿಯಾಗಿತ್ತು. ಈ ವೇಳೆ ಶಿಕ್ಷಕಿ ಜಯಮಾಲಾ ಸ್ಥಳದಲ್ಲೇ ಮೃತಪಟ್ಟಿದ್ದು ಭಾರತಿ ಗಂಭೀರವಾಗಿ ಗಾಯಗೊಂಡಿದ್ದರು.

ಜಯಮಾಲಾ ಅವರು ಕೆ.ಎ.ಎಸ್‌. ಪರೀಕ್ಷೆ ಬರೆದಿದ್ದು ಮರಣೋತ್ತರವಾಗಿ ಬಂದ ಫಲಿತಾಂಶದಲ್ಲಿ ಉತ್ತೀರ್ಣರಾಗಿದ್ದರು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕೆಲವು ಸಮಯ ಆಸ್ಪತ್ರೆಯಲ್ಲೆ ಚಿಕಿತ್ಸೆ ಪಡೆದು ಬಳಿಕ ಮನೆಗೆ ಬಂದಿದ್ದ ಶಿಕ್ಷಕಿ ಭಾರತಿ ಅವರು ಸೊಂಟದ ಸ್ವಾಧೀನ ಕಳೆದುಕೊಂಡ ಪರಿಣಾಮ ಮಲಗಿದ್ದಲ್ಲೆ ಇದ್ದರು. 14 ವರ್ಷ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಂದ ಎಲ್ಲ ನೋವು, ಸವಾಲುಗಳನ್ನು ಎದುರಿಸಿದ್ದರು. ಆದ್ರೆ ಕಳೆದ ಕೆಲವು ದಿನಗಳಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಇದೀಗ ಅವರು ನಿಧನರಾಗಿದ್ದಾರೆ.

Leave A Reply

Your email address will not be published.