CNG Truck Accident: ಸಿಎನ್‌ಜಿ ಟ್ರಕ್‌- ಟ್ರಕ್ ಡಿಕ್ಕಿ; 5 ಮಂದಿ ಸಜೀವ ದಹನ

CNG Truck Accident: ಶುಕ್ರವಾರ (ಇಂದು) ಬೆಳಗ್ಗೆ (ಡಿಸೆಂಬರ್ 20) ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ದೊಡ್ಡ ಅಪಘಾತ ಸಂಭವಿಸಿದೆ. ಜೈಪುರದ ಭಂಕ್ರೋಟಾ ಪ್ರದೇಶದಲ್ಲಿ ಏಕಕಾಲಕ್ಕೆ ಹತ್ತಾರು ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಸಿಎನ್‌ಜಿ ಟ್ರಕ್ ಮತ್ತು ಇನ್ನೊಂದು ಟ್ರಕ್ ನಡುವೆ ಡಿಕ್ಕಿ ಸಂಭವಿಸಿದೆ, ಇದರಿಂದಾಗಿ ಭಾರಿ ಸ್ಫೋಟ ಸಂಭವಿಸಿದೆ. ಅನೇಕ ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಹತ್ತಿರದ ವಾಹನಗಳಿಗೂ ಬೆಂಕಿ ಆವರಿಸಿದೆ.

ಪ್ರಯಾಣಿಕರು ಬಸ್‌ನಿಂದ ಇಳಿದು ಪ್ರಾಣ ಉಳಿಸಿಕೊಂಡರೂ, 12ಕ್ಕೂ ಹೆಚ್ಚು ಮಂದಿ ಸುಟ್ಟು ಕರಕಲಾಗಿರುವ ಕುರಿತು ವರದಿಯಾಗಿದೆ.

ಶುಕ್ರವಾರ ಮುಂಜಾನೆ 5.00 ಗಂಟೆ ಸುಮಾರಿಗೆ ಡಿ ಕ್ಲಾಥಾನ್ ಬಳಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ವಾಹನಗಳಲ್ಲಿ ಸಿಲುಕಿರುವ ಜನರನ್ನು ಅಗ್ನಿಶಾಮಕ ದಳದ ಸಹಾಯದಿಂದ ಹೊರ ತೆಗೆಯಲಾಗುತ್ತಿದೆ.

ಸಿವಿಲ್ ಡಿಫೆನ್ಸ್ ಪೊಲೀಸರು ಹಾಗೂ ಸ್ಥಳೀಯರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

Leave A Reply

Your email address will not be published.