Lahore: ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಕೆ; ಮೊದಲನೇ ಮಹಡಿಯಿಂದ ಜಿಗಿದ ವಿದ್ಯಾರ್ಥಿನಿಯರು, ಗಂಭೀರ ಗಾಯ
Lahore: ರೋಡ್ ರೋಲರ್ ಶಬ್ದವನ್ನು ಭೂಕಂಪನ ಎಂದು ಭಾವಿಸಿ ಆತಂಕಗೊಂಡ ಎಂಟು ಮಂದಿ ವಿದ್ಯಾರ್ಥಿನಿಯರು ಮೊದಲನೇ ಮಹಡಿಯಿಂದ ಜಿಗಿದಿರುವ ಘಟನೆಯೊಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ. ವಿದ್ಯಾರ್ಥಿನಿಯರು ಜಿಗಿದ ಪರಿಣಾಮ ಗಂಭೀರ ಗಾಯಗೊಂಡಿದ್ದಾರೆ.
ಸರಕಾರಿ ಪ್ರೌಢಶಾಲೆಯೊಂದರಲ್ಲಿ ಶಾಲೆ ಪಕ್ಕದ ರಸ್ತೆಯಲ್ಲಿ ಶಬ್ದ ಹಾಗೂ ಕಂಪನವನ್ನು ಕೇಳಿಸಿಕೊಂಡು ಇದು ಭೂಕಂಪನ ಎಂದು ಭಾವಿಸಿದ್ದಾರೆ. ಇದರಿಂದ ಭಯಗೊಂಡ ತರಗತಿಯಲ್ಲಿದ್ದವರು ಒಂದನೇ ಮಹಡಿಯಿಂದ ನೆಲಮಹಡಿಗೆ ಓಡಿಕೊಂಡು ಬಂದಿದ್ದಾರೆ. ಅದರಲ್ಲಿ 8 ಮಂದಿ ವಿದ್ಯಾರ್ಥಿನಿಯರು ಕಿಟಕಿಯಿಂದ ಹಾರಿದ್ದು, ಗಂಭೀರ ಗಾಯಕ್ಕೊಳಗಾಗಿದ್ದಾರೆ.