Parliament : ಸಾಲ ತೀರಿಸದೆ ಓಡಿಹೋದ ವಿಜಯ ಮಲ್ಯ ಆಸ್ತಿ ಮಾರಾಟ- ಮಾರಾಟದಿಂದ ಬಂದ ಹಣ ಎಷ್ಟು? ಡೀಟೇಲ್ಸ್ ನೀಡಿದ ನಿರ್ಮಲಾ ಸೀತಾರಾಮನ್
Parliament : ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿ ಅದನ್ನು ಪಾವತಿಸಲಾಗದೆ ವಿದೇಶಗಳಿಗೆ ಹೋಗಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ ಅವರ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಮಾರಾಟ ಮಾಡಿದೆ. ಇದರಿಂದ ಬಂದ ಹಣದಲ್ಲಿ ಅವರ ಸಾಲವನ್ನು ತೀರಿಸಲಾಗಿದೆ. ಈ ಬಗ್ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್(Nirmala Seetaranaman) ಅವರು ಲೋಕಸಭೆಯಲ್ಲಿ(Parliament) ಮಾಹಿತಿ ನೀಡಿದ್ದಾರೆ. ಹಾಗಿದ್ದರೆ ವಿಜಯಮಲ್ಯ ಆಸ್ತಿಯ ಮಾರಾಟದ ಬಳಿಕ ಸಿಕ್ಕ ಹಣವೆಷ್ಟು?
ಹೌದು, ಭಾರತದಿಂದ ಪರಾರಿಯಾಗಿರುವ ಉದ್ಯಮಿಯ ಗಣನೀಯ ಸಾಲದ ಒಂದು ಭಾಗವನ್ನು ಪಾವತಿಸಲು ವಿಜಯ್ ಮಲ್ಯಗೆ ಸೇರಿದ್ದ 14,131 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡು ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳಿಗೆ ಹಸ್ತಾಂತರಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭಾ ಸದನದಲ್ಲಿ ತಿಳಿಸಿದ್ದಾರೆ.
ಇಷ್ಟೇ ಅಲ್ಲದೆ ಭಾರತದಲ್ಲಿ ವಿವಿಧ ಬ್ಯಾಂಕುಗಳಿಂದ ಸಾಲ ಪಡೆದು ಹಿಂದಿರುಗಿಸದೇ ತಲೆಮರೆಸಿಕೊಂಡವರ ಆಸ್ತಿ ಮುಟ್ಟುಗೋಲು ಹಾಕಿಕೊಂಡ ಜಾರಿ ನಿರ್ದೇಶನಾಲಯ (ಇಡಿ) 22,280 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಸಂತ್ರಸ್ತರಿಗೆ ಅಥವಾ ಹಕ್ಕುದಾರರಿಗೆ ಹಿಂದಿರುಗಿಸಿದೆ ಎಂದು ನಿರ್ಮಲ ಹೇಳಿದ್ದಾರೆ.