New Airstrip: ಧರ್ಮಸ್ಥಳ ಮಿನಿ ವಿಮಾನ ನಿಲ್ದಾಣಕ್ಕೆ ಆರಂಭಿಕ ಹಿನ್ನೆಡೆ

Share the Article

New Airstrip: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಮಿನಿ ವಿಮಾನ ನಿಲ್ದಾನಕ್ಕೆ ಜಮೀನು ಸಮಸ್ಯೆ ಉಂಟಾಗಿದೆ. ಮಿನಿ ವಿಮಾನ ನಿಲ್ದಾಣಕ್ಕೆ ಕನಿಷ್ಠ 140 ಎಕ್ರೆ ಜಮೀನಿನ ಅಗತ್ಯವಿದೆ. ಆದರೆ ಜಿಲ್ಲಾಡಳಿತ ಗುರುತು ಮಾಡಿದ್ದ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಹಾಗೂ ಲಾಯಿಲ ಗ್ರಾಮಗಳ ಜಮೀನನ್ನು ಪರಿಶೀಲನೆ ಮಾಡಿದ ಮೂಲಸೌಕರ್ಯ ಅಭಿವೃದ್ಧಿ ನಿಗಮದ ತಾಂತ್ರಿಕ ತಂಡ, ಈ ಜಾಗ ಸೂಕ್ತವಾಗಿಲ್ಲ ಎಂದು ಹೇಳಿದೆ. ಈಗ ಲಭ್ಯವಿರುವ ಜಮೀನು ಮಿನಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಾಲುತ್ತಿಲ್ಲ ಎಂದಿದೆ.

ಈ ಜಾಗ ಏರು ತಗ್ಗುಗಳಿಂದ ಕೂಡಿರುವುದು ಪ್ರಾಥಮಿಕ ವರದಿಯಲ್ಲಿ ಕಂಡು ಬಂದಿದೆ. ಇಷ್ಟು ಮಾತ್ರವಲ್ಲದೇ ಅರಣ್ಯ ಇಲಾಖೆಯ ವಶಕ್ಕೆ ಸೇರಿರುವ ಅಕೇಶಿಯಾ, ನೆಡುತೋಪುಗಳು ಇಲ್ಲಿದೆ.

ಜಿಲ್ಲಾಡಳಿತಕ್ಕೆ ಪರ್ಯಾಯ ಸ್ಥಳ ಗುರುತು ಮಾಡಲು ಸೂಚನೆ ನೀಡಲಾಗಿದ್ದು, ಜಾಗಕ್ಕೆ ಹುಡುಕಾಟ ನಡೆಯುತ್ತಿದೆ ಎಂದು ವರದಿಯಾಗಿದೆ.

2023-24ನೇ ಸಾಲಿನ ರಾಜ್ಯ ಆಯವ್ಯಯದಲ್ಲಿ ಧರ್ಮಸ್ಥಳ, ಕೊಡಗು, ಚಿಕ್ಕಮಗಳೂರಿನಲ್ಲಿ ಏರ್‌ಸ್ಟ್ರಿಪ್‌ಗ್ಳನ್ನು ಅಭಿವೃದ್ಧಿ ಮಾಡುವ ಯೋಜನೆಯನ್ನು ಪ್ರಕಟ ಮಾಡಿತ್ತು. ಇದರಲ್ಲಿ ಚಿಕ್ಕಮಗಳೂರಿನಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು, ಆರಂಭಿಕ ಹಂತದಲ್ಲಿದೆ. ಕೊಡಗು ಏರ್‌ ಸ್ಟ್ರಿಪ್‌ಗೆ ಕುಶಾಲನಗರ ಸಮೀಪದಲ್ಲಿ ಜಮೀನು ಗುರುತಿಸಲಾಗಿದೆ. ತಾಂತ್ರಿಕ ತಂಡದ ಪರಿಶೀಲನೆ ನಡೆಯುತ್ತಿದೆ.

Leave A Reply