Arecanut Report: ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ; ಅಡಿಕೆ ಕ್ಯಾನ್ಸರ್ ಕಾರಕವಲ್ಲ, ಪ್ರತಿಬಂಧಕ- ಪ್ರತಿಷ್ಠಿತ ವಿವಿ ಅಧ್ಯಯನ ವರದಿ
Arecanut Report: ಕರ್ನಾಟಕ ಕರಾವಳಿ ಮತ್ತು ಮಲೆನಾಡು ಭಾಗದ ಅಡಿಕೆ ಬೆಳೆಗಾರರಲ್ಲಿ ಅಡಿಕೆ ಕ್ಯಾನ್ಸರ್ ಕಾರಕ ಎಂಬ ವರದಿಯು ಆತಂಕ ಉಂಟು ಮಾಡಿತ್ತು. ಈ ಕುರಿತು ಇಂಟರ್ನ್ಯಾಷನಲ್ ಏಜೆನ್ಸಿಫಾರ್ ರಿಸರ್ಚ್ ಆನ್ ಕ್ಯಾನ್ಸರ್(ಐಎಆರ್ಸಿ) ಮಾಹಿತಿ ಈ ಕುರಿತು ವರದಿ ನೀಡಿತ್ತು. ಆದರೆ ನಿಟ್ಟೆ ವಿವಿಯ ವಿಜ್ಞಾನಿ ಪ್ರ. ಇಡ್ಯಾ ಕರುಣಾಸಾಗರ್ ಮತ್ತು ಅವರ ತಂಡವು ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಅದೇ ನೆಂದರೆ ಇವರ ತಂಡವು ಮಹತ್ವದ ಸಂಶೋದನೆಯನ್ನು ಮಾಡಿದ್ದು, ಅಡಿಕೆ ಕ್ಯಾನ್ಸರ್ ಕಾರಕವಲ್ಲ, ಇದರ ಬದಲಿಗೆ ಪ್ರತಿಬಂಧಕ ಅಂಶ ಅಡಿಕೆಯಲ್ಲಿದೆ ಎಂದು ಹೇಳಿದೆ.
ಅಡಿಕೆ ರಸ ಕ್ಯಾನ್ಸರ್ ಕಣಗಳ ಬೆಳವಣಿಗೆಯನ್ನು ಪ್ರತಿಬಂಧಿಸುತ್ತದೆ ಎಂದು ಪತ್ತೆ ಮಾಡಿರುವ ನಿಟ್ಟೆ ವಿವಿಯ ವಿಜ್ಞಾನಿಗಳ ತಂಡ ಪ್ರತಿಪಾದಿಸಿದೆ. ಹೀಗಾಗಿ ಅಡಿಕೆಯ ಬಳಕೆ ಆರೋಗ್ಯಕ್ಕೆ ಯಾವುದೇ ಹಾನಿ ಉಂಟು ಮಾಡುವುದಿಲ್ಲ ಎಂದು ಹೇಳಿದೆ.
ಇದೀಗ ಈ ಸಂಶೋಧನೆಯನ್ನು ಪರಿಗಣನೆ ಮಾಡಿದ ಅಡಿಗೆ ಬಗ್ಗೆ ಸಮಗ್ರ ಅಧ್ಯಯನವಾಗಬೇಕು ಎಂದು ಕ್ಯಾಂಪ್ಕೋ ಕೇಂದ್ರ ಸರಕಾರಕ್ಕೆ ಒತ್ತಾಯ ಮಾಡಿದೆ.
ಐಎಆರ್ಸಿ ಅಧ್ಯಯನದ ವರದಿಯು ಅಡಿಕೆಯನ್ನು ಕ್ಯಾನ್ಸರ್ ಕಾರಕ ಎಂದು ವರದಿಯನ್ನು ಹೇಳಿತ್ತು. ಪಾನ್, ಪಾನ್ ಮಸಾಲ, ಗುಟ್ಕಾ ಇತ್ಯಾದಿ ಸೇವಿಸುವುದರಿಂದ ಉಂಟಾಗುವ ವರದಿಯನ್ನು ಅಧ್ಯಯನ ಮಾಡಿ ವರದಿ ನೀಡಲಾಗಿತ್ತು. ಇದು ಪರಿಪೂರ್ಣ ಅಧ್ಯಯನ ಅಲ್ಲ ಎಂದು ಕ್ಯಾಂಪ್ಕೋ ವಾದ ಮಾಡಿತ್ತು. ಇದಕ್ಕೆ ಇದೀಗ ಸತ್ಯಾಸತ್ಯತೆಯ ಪರಾಮರ್ಶೆಗೆ ಕೇಂದ್ರ ಸರಕಾರ ಕೂಡಾ ಒಪ್ಪಿಗೆ ನೀಡಿದೆ.
ಕಾಸರಗೋಡಿನಲ್ಲಿರುವ ಐಸಿಎಆರ್ನ ಕೇಂದ್ರೀಯ ತೋಟಗಾರಿಕಾ ಬೆಳಗಳ ಸಂಶೋಧನ ಸಂಸ್ಥೆ ಕೂಡಾ ಅಡಿಕೆ ಕುರಿತು ಹೆಚ್ಚಿನ ಸಂಶೋಧನೆಗೆ ಪ್ರಸ್ತಾವನ್ನು ಈ ಸಂದರ್ಭದಲ್ಲಿ ಸಲ್ಲಿಸಿತ್ತು ಕೂಡಾ. ಇದೆಲ್ಲವನ್ನು ಪರಿಗಣನೆಗೆ ತೆಗದುಕೊಂಡು ಕೇಂದ್ರ ಕೃಷಿ ಸಚಿವಾಲಯವು ತಾತ್ವಿಕ ಒಪ್ಪಿಗೆ ನೀಡಿದೆ. ಮೂರು ವರ್ಷಗಳ ಕಾಲ ಈ ಅಧ್ಯಯನ ನಡೆಯಲಿದ್ದು, ಇದಕ್ಕೆ 9.90 ಕೋಟಿ ರೂ. ವೆಚ್ಚವಾಗಲಿದೆ. ಈ ಅಧ್ಯಯನಕ್ಕೆ ಹಣ ಇನ್ನು ಬಿಡುಗಡೆಯಾಗಬೇಕಷ್ಟೇ.
ಐಸಿಎಎಆರ್ ವರದಿ ಸತ್ಯಕ್ಕೆ ದೂರವಾದ ವಿಚಾರ. ಹೀಗಾಗಿ ಈ ಬಗ್ಗೆ ಅಡಿಕೆ ಬೆಳೆಗಾರರಿಗೆ ಆತಂಕ ಬೇಡ ಎಂದು ಕ್ಯಾಂಪ್ಕೋ ಅಭಯ ನೀಡಿದೆ. ನಾವು ನಿಟ್ಟೆ ವಿವಿ ಜೊತೆ ನಡೆಸಿದ ಸಂಶೋಧನೆಯಲ್ಲಿ ಅಡಿಕೆ ಕ್ಯಾನ್ಸರ್ ಕಾರಕವಲ್ಲ ಎಂಬ ವರದಿ ಬಂದಿದೆ. ಕ್ಯಾನ್ಸರ್ ಗುಣ ಮಾಡುವ ಶಕ್ತಿ ಅಡಿಕೆಯಲ್ಲಿದೆ ಎಂದು ಮಂಗಳೂರಿನಲ್ಲಿ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದ್ದಾರೆ.