Pavitra Gowda: ಪವಿತ್ರ ಗೌಡ ಕೈಯಲ್ಲಿ ‘777’ ಟ್ಯಾಟೂ- ಕೊನೆಗೂ ಆ ಟ್ಯಾಟೂ ಸೀಕ್ರೆಟ್ ರಿವಿಲ್ ಮಾಡಿದ ಮಾಜಿ ಪತಿ !!
Pavitra Gowda: ರೇಣುಕಾ ಸ್ವಾಮಿ ಕೊಲೆ ಪ್ರಕರಣದಡಿ ಆರೋಪಿಗಳಾಗಿ ಜೈಲು ಸೇರಿದ್ದ ಡಿ ಗ್ಯಾಂಗ್ ಗೆ ಜಾಮೀನು ಸಿಕ್ಕಿದೆ. ಇದರಲ್ಲಿ ಪವಿತ್ರ ಗೌಡ ಕೂಡ ಒಬ್ಬರಾಗಿದ್ದು ಅವರು ಕೂಡ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ಬೆನ್ನಲ್ಲೇ ಪವಿತ್ರ ಗೌಡರ ಮಾಜಿ ಪತಿ ಸಂಜಯ್ ಸಿಂಗ್ ಪ್ರತ್ಯಕ್ಷ ಆಗಿದ್ದು ಕೆಲ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈ ನಡುವೆ ಪವಿತ್ರ ಗೌಡ(Pavitra Gouda ) ಕೈಯಲ್ಲಿರುವ 777 ಟ್ಯಾಟೂ ಸೀಕ್ರೆಟ್ ಅನ್ನು ಅವರು ರಿವಿಲ್ ಮಾಡಿದ್ದಾರೆ.
ಹೌದು, ಪವಿತ್ರಾ ಗೌಡ ರೆಡ್ ಕಾರ್ಪೆಟ್ ಸ್ಟುಡಿಯೋ 777 ಹೆಸರಿನ ಫ್ಯಾಷನ್ ಬುಟಿಕ್ ಹೊಂದಿದ್ದಾರೆ. ಕೆಲ ದಿನಗಳ ಹಿಂದೆ ಕೈ ಮೇಲೆ ‘777’ ಟ್ಯಾಟೂ ಹಾಕಿಸಿಕೊಂಡಿದ್ದು ವೈರಲ್ ಆಗಿತ್ತು. ‘777’ ಸೀಕ್ರೆಟ್ ಏನು ಎಂದು ಮಾಜಿ ಪತಿ ಸಂಜಯ್ ಸಿಂಗ್ ಹೇಳಿದ್ದಾರೆ. ನಾನು ಹುಟ್ಟಿದ ದಿನ, ಪವಿತ್ರಾ ಹುಟ್ಟಿದ ದಿನ ಹಾಗೂ ಮಗಳು ಹುಟ್ಟಿದ ದಿನಕ್ಕೆ ನಂಬರ್ 7ಕ್ಕೂ ಲಿಂಕ್ ಇದೆ ಎಂದಿದ್ದಾರೆ.
“ನನ್ನ ಪ್ರಕಾರ ಪವಿತ್ರಾ ಗೌಡ ಟ್ಯಾಟೂ ಬಗ್ಗೆ ಹೇಳುವುದಾದರೆ, ನಾನು ಹುಟ್ಟಿದ್ದು ಜುಲೈ 16. ಅದರಲ್ಲಿ 7 ಇದೆ. ಪವಿತ್ರಾ ಗೌಡ ಹುಟ್ಟಿರುವುದು ಜನವರಿ 7ರಂದು. ಇನ್ನು ನಮ್ಮ ಮಗಳು ಹುಟ್ಟಿರುವುದು ನವೆಂಬರ್ 7ರಂದು. ಹಾಗಾಗಿ ಇದೆಲ್ಲಾ ಸೇರಿದರೆ ‘777’ ಆಗುತ್ತದೆ. ನನ್ನ ಪ್ರಕಾರ ಇದೇ ಕಾರಣ ಇರಬಹುದು ಎಂದಿದ್ದಾರೆ. ನಮ್ಮ ಮದುವೆ ಸಹ 7ನೇ ತಿಂಗಳಲ್ಲಿ ಆಗಿತ್ತು. ಹಾಗಾಗಿ ನಾವಿಬ್ಬರು ನಂಬರ್ 7 ಅನ್ನು ಅದೃಷ್ಟ ಎಂದು ಭಾವಿಸಿದ್ದೆವು” ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.