Marriage: ತೀವ್ರ ಚಳಿಗೆ ಮದುವೆ ಮಂಟಪದಲ್ಲೇ ಮೂರ್ಛೆ ಹೋದ ವರ; ಮದುವೆ ರದ್ದು
Marriage: ಇದು ಚಳಿಗಾಲ. ಅದರಲ್ಲೂ ಉತ್ತರಭಾರತದಲ್ಲಿ ಚಳಿ ತೀವ್ರತೆ ಹೆಚ್ಚಿದೆ. ಈ ಚಳಿಯಿಂದಾಗಿಯೇ ಮದುವೆಯೊಂದು ರದ್ದಾಗಿದೆ. ವಿಪರೀತ ಚಳಿಯನ್ನು ತಡೆದುಕೊಳ್ಳಲು ಸಾಧ್ಯವಾಗದೇ ವರ ಮದುವೆ ಮಂಟಪದಲ್ಲಿ ಮೂರ್ಛೆ ಹೋಗಿದ್ದು, ಇದೇ ಕಾರಣ ಮುಂದಿಟ್ಟುಕೊಂಡು ಮದುವೆಯನ್ನು ವಧು ರದ್ದು ಮಾಡಿರುವ ಘಟನೆಯೊಂದು ಜಾರ್ಖಂಡ್ನ ದಿಯೋಗಢದಲ್ಲಿ ನಡೆದಿದೆ.
ಡಿ.15 ರಂದು ದಿಯೊಗಢದ ವರ ಅರ್ನವ್, ಬಿಹಾರದ ಅಂಕಿತ ಅವರನ್ನು ಮದುವೆಯಾಗಬೇಕಿತ್ತು. ಆದರೆ ಚಳಿ ಹೆಚ್ಚಾಗಿದ್ದರಿಂದ ವರ ಮೂರ್ಛೆ ಹೋಗಿದ್ದ. ಇದೇ ಕಾರಣಕ್ಕೆ ವಧು ಇದೀಗ ಮದುವೆಯನ್ನು ರದ್ದು ಮಾಡಿದ್ದಾಳೆ.
ಮದುವೆಯು ವರನಿದ್ದ ಸ್ಥಳದಲ್ಲಿರುವ ಸ್ಥಳೀಯ ಮಂಟಪವೊಂದರಲ್ಲಿ ನಡೆಯುತ್ತಿತ್ತು. ವಿಧಿವಿಧಾನಗಳು, ವರಮಾಲಾ ಸಮಾರಂಭ ಎಲ್ಲವೂ ನಡೆದಿದೆ. ಸಪ್ತಪದಿ ತುಳಿಯಲು ಸಿದ್ಧತೆ ಮಾಡುತ್ತಿದ್ದ ಸಂದರ್ಭದಲ್ಲಿ ಪುರೋಹಿತರು ಮಂತ್ರ ಪಠಿಸುತ್ತಿದ್ದಂತೆ ವರ ಜೋರಾಗಿ ನಡುಗಲು ಪ್ರಾರಂಭ ಮಾಡಿ, ಕೆಳಗೆ ಬಿದ್ದು, ಪ್ರಜ್ಞೆ ತಪ್ಪಿದ.
ಕೂಡಲೇ ಮದುಮಗನ ಮನೆಯವರು ಸಮೀಪದ ಕೋಣೆಗೆ ಆತನನ್ನು ಕರೆದುಕೊಂಡು ಹೋಗಿ, ಅಂಗೈ ಮತ್ತು ಕಾಲಿನ ಅಡಿಭಾಗವನ್ನು ಉಜ್ಜಿ ಪ್ರಜ್ಞೆ ಬರಲು ಪ್ರಯತ್ನ ಮಾಡಿದ್ದಾರೆ. ನಂತರ ವೈದ್ಯರನ್ನು ಕರೆಸಿದ್ದಾರೆ. ವರನಿಗೆ ಪ್ರಜ್ಞೆ ಮರಳಿ ಬರುವಾಗ ಒಂದೂವರೆ ಗಂಟೆ ಆಗಿದೆ. ಆದರೆ ವಧು ಅನಂತರ ಈ ಮದುವೆಯನ್ನು ನಿರಾಕರಣೆ ಮಾಡದ್ದಾಳೆ. ಆರ್ನವ್ ಯಾವುದೋ ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ಆತ ಚಳಿಯಲ್ಲಿ ಮೂರ್ಛೆ ಹೋಗಿದ್ದಾನೆ ಎಂದು ವಧು ಅಂಕಿತಾ ಹೇಳಿದ್ದಾಳೆ.
ಆ ಸಂದರ್ಭದಲ್ಲಿ ಎರಡೂ ಮನೆಯವರ ಮಧ್ಯೆ ಕಲಹ ಉಂಟಾಯಿತು. ನಂತರ ಪೊಲೀಸರ ಮಧ್ಯಪ್ರವೇಶವಾಗಿದೆ. ಪೊಲೀಸರು ಎರಡೂ ಕಡೆಯವರ ಮನವೊಲಿಸಲು ಪ್ರಯತ್ನ ಪಟ್ಟರೂ ಸರಿಯಾಗಿಲ್ಲ. ನಂತರ ಎರಡು ಕಡೆಯವರ ಒಪ್ಪಿಗೆಯೊಂದಿಗೆ ಮದುವೆಯನ್ನು ರದ್ದು ಮಾಡಲಾಯಿತು.
Here is my blog https://chemezova.ru/