Baby Death: ಆಟವಾಡುತ್ತ ವಿಕ್ಸ್‌ ಮುಚ್ಚಳ ನುಂಗಿದ 14 ತಿಂಗಳ ಮಗು; 18 ವರ್ಷದ ನಂತರ ಹುಟ್ಟಿದ ಮಗು ಚಿಕಿತ್ಸೆ ಸಿಗದೆ ಸಾವು

Baby Death: ವಿಕ್‌ ಡಬ್ಬಿ ನುಂಗಿದ ಮಗುವೊಂದು ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರಕದೆ ತಂದೆ-ತಾಯಿಯ ಕೈಯಲ್ಲಿಯೇ ಸಾವಿಗೀಡಾಗಿದೆ.

ಮದುವೆಯಾಗಿ 18 ವರ್ಷಗಳು ಕಳೆದರೂ ಮಗುವಾಗಿರಲಿಲ್ಲ. ದೇವರಿಕೆ ಹರಕೆ, ಪೂಜೆ, ಎಲ್ಲಾ ರೀತಿಯ ಚಿಕಿತ್ಸೆ ಮಾಡಿದ್ದಾರೆ. ಅನಂತರ 18 ವರ್ಷದ ನಂತರ ಇವರಿಗೆ ಗಂಡು ಮಗು ಜನಿಸಿದೆ. ಕೈ ಗೆ ಬಂದ ಮಗು 14 ತಿಂಗಳು ಕೂಡಾ ಉಸಿರಾಡಲಿಲ್ಲ. ವಿಕ್‌ ಡಬ್ಬಿಯ ಮುಚ್ಚಳ ನುಂಗಿ ಮಗು ಸಾವಿಗೀಡಾಗಿದೆ.

ಈ ಘಟನೆ ರಾಜಸ್ಥಾನದ ಬಾಂಸ್ವಾಡದ ಲೋಹಾರಿ ಠಾಣಾ ಪ್ರದೇಶದ ಸರೆಡಿ ಪಟ್ಟಣದಲ್ಲಿ ನಡೆದಿದೆ. ಪುಟ್ಟ ಮಗುವಿನ ಸಾವು ಇಡೀ ಗ್ರಾಮವನ್ನೇ ಶೋಕದಲ್ಲಿ ಮುಳುಗಿಸಿದೆ.

ಸರೆಡಿ ಗ್ರಾಮದ ನಿವಾಸಿ ಹೀರೆನ್‌ ಜೋಶಿ ಅವರ ಮಗು ಆಟವಾಡುವ ಸಂದರ್ಭದಲ್ಲಿ ವಿಕ್ಸ್‌ ಮುಚ್ಚಳವನ್ನು ನುಂಗಿದೆ. ಆದರೆ ಮಗುವಿನ ಬಾಯಿಯಿಂದ ಮುಚ್ಚಳ ತೆಗೆಯಲು ಸಾಧ್ಯವಾಗಲಿಲ್ಲ. ಕೂಡಲೇ ಪೋಷಕರು ಸಮುದಾಯ ಆರೋಗ್ಯ ಕೇಂದ್ರ ಮಗುವನ್ನು ಕರೆದುಕೊಂಡು ಹೋಗಿದ್ದು, ಅಲ್ಲಿ ವೈದ್ಯರು ಸಿಗದ ಕಾರಣ ಪೋಷಕರು ಬಾಂಸ್ವಾಡ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದಿದ್ದಾರೆ. ಆದರೆ ಮಗು ದಾರಿ ಮಧ್ಯೆ ಸಾವಿಗೀಡಾಗಿದೆ. ಪೋಷಕರು ನೋವಿನಿಂದ ಮಗುವನ್ನು ಮನೆಗೆ ಕರೆದೊಯ್ದಿದ್ದಾರೆ.

ಮೃತ ಮಗುವಿನ ತಂದೆ ಹೀರೆನ್‌ ಜೋಶಿ ಸರಕಾರಿ ಶಿಕ್ಷಕರಾಗಿದ್ದು, ವೈದ್ಯರು ಲಭ್ಯವಿಲ್ಲದೇ ನನ್ನ ಮಗು ಸಾವಿಗೀಡಾಯಿತು ಎಂದು ಆಕ್ರೋಶ ವ್ಯಕ್ತ ಪಡಿಸಿ ಗಲಾಟೆ ಮಾಡಿದರು. ಹಿರೇನ್‌ ಜೋಶಿಗೆ ಎರಡು ಹೆಣ್ಣು ಮಕ್ಕಳಿದ್ದು,3 ನೇ ಮಗುವಿಗಾಗಿ 18 ವರ್ಷಗಳಿಂದ ಕಾಯುತ್ತಿದ್ದ ಇವರಿಗೆ ಗಂಡು ಮಗು ಜನನವಾಗಿದೆ. ಆದರೆ ವಿಧಿ ಮಗುವನ್ನು ಕಸಿದುಕೊಂಡಿದೆ.

Leave A Reply

Your email address will not be published.