Viral Video: ರೀಲ್ಸ್‌ಗಾಗಿ ನಾಯಿ ಮೊಲೆ ಚೀಪಿ ಹಾಲು ಹೀರಿದ ಯುವತಿ; ವೀಡಿಯೋ ವೈರಲ್‌

Share the Article

Viral Video: ಈಗ ಎಲ್ಲರೂ ರೀಲ್ಸ್‌ ಮಾಡೋ ಕ್ರೇಜ್‌ ಬೆಳೆಸಿಬಿಟ್ಟಿದ್ದಾರೆ. ಸ್ವಲ್ಪ ಸಮಯದಲ್ಲಿಯೇ ಬೇಗ ಫೇಮಸ್‌ ಆಗಬೇಕು ಎನ್ನುವ ಹಪಾಹಪಿ ಈಗಿನ ಯುವಜನತೆಗೆ ಹೆಚ್ಚಿದೆ. ಅದರಲ್ಲೂ ಜೀವಕ್ಕೆ ಆಪತ್ತು ತರುವಂತಹ ರೀಲ್ಸ್‌, ಅಸಹ್ಯಕರ ವೀಡಿಯೋ ಮಾಡಿ ಸುದ್ದಿ ಆದವರು ಕೂಡಾ ಇದಾರೆ. ಅಂತಹುದೇ ಒಂದು ಕ್ರೇಜ್‌ಗೆ, ಫೇಮಸ್‌ಗೋಸ್ಕರ ಇಲ್ಲೊಬ್ಬ ಯುವತಿ ನಾಯಿ ಮೊಲೆ ಹಾಲನ್ನು ಕುಡಿದು, ಈ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾಳೆ.

ಅವಳ ಆಸೆಯಂತೆ ಈ ವೀಡಿಯೋ ಸಖತ್‌ ವೈರಲ್‌ ಆಗಿದೆ. ಆದರೆ ಜನ ಮಾತ್ರ ಇದಕ್ಕೆ ತರಹೇವಾರಿ ಕಮೆಂಟ್‌ ಹಾಕಿದ್ದಾರೆ. ನಾಯಿ ಹಾಲು ಕುಡಿಯಲು ಯಾರೂ ಇಲ್ಲಿಯವರೆಗೆ ಸಾಹಸ ಮಾಡಿಲ್ಲ. ಆದರೆ ನಾಯಿ ಮೊಲೆ ಚೀಪಿ ಹಾಲು ಕುಡಿಯುವ ಸಾಹಸಕ್ಕೆ ಈಕೆ ಮಾಡಿದ್ದಾಳೆ.


ಮಮತಾ ರಾಜ್‌ಗರ್‌ ಎಂಬುವವರು ತಮ್ಮ ಎಕ್ಸ್‌ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ರೀಲ್ಸ್‌ ಮಾಡಲು ನಾಯಿ ಬಳಿ ಹೋಗಿ ಮಲಗಿದ್ದ ನಾಯಿಯ ಮೊಲೆಯ ಹಾಲನ್ನು ಹೀರಿದ್ದಾಳೆ.

ಫೇಮಸ್‌ ಆಗೋಕೆ ಈ ರೀತಿಯ ಚೀಪ್‌ ಟ್ರಿಕ್ಸ್‌ ಬೇಕಾ?, ಎತ್ತ ಸಾಗುತ್ತಿದೆ ಸಮಾಜ ಎಂಬ ಪ್ರಶ್ನೆಯನ್ನು ಕೇಳುತ್ತಾ ಹಲವು ಕಮೆಂಟ್ಸ್‌ ಈ ವೀಡಿಯೋಗೆ ಬಂದಿದ್ದು, ಅಂದ ಹಾಗೆ ಈ ವೀಡಿಯೋ ಡಿ.15 ರಂದು ಅಪ್ಲೋಡ್‌ ಮಾಡಲಾಗಿದ್ದು, 36 ಸಾವಿರಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ.

Leave A Reply