Mangaluru : ರೈಲಿಗೆ ಸಿಲುಕಿ ವ್ಯಕ್ತಿ ಸಾವು!!

Mangaluru : ಪಡೀಲ್‌-ಜೋಕಟ್ಟೆ ರೈಲ್ವೇ ನಿಲ್ದಾಣಗಳ ನಡುವೆ ರೈಲಿನಡಿಗೆ ಬಿದ್ದು ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ರೈಲಿಗೆ ಸಿಲುಕಿ ಮುಖ ಸಂಪೂರ್ಣವಾಗಿ ಜಜ್ಜಿ ಹೋಗಿದೆ. ಮೃತ ವ್ಯಕ್ತಿಯನ್ನು ಸುಮಾರು 40-45 ವರ್ಷ ಪ್ರಾಯದವರೆಂದು ಗುರುತಿಸಲಾಗಿದೆ.

5.1 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈ ಬಣ್ಣ, ತಲೆಯಲ್ಲಿ ಕಪ್ಪು ಕೂದಲು, ಬಲಗೈಯಲ್ಲಿ ಆರ್‌ಇಕೆಎ ಮತ್ತು ಎಡಗೈನಲ್ಲಿ ಎಂಆರ್‌ಎಸ್‌ಐ ಎಂದು ಹಚ್ಚೆ ಹಾಕಲಾಗಿದ್ದು, ಎದೆಯ ಮೇಲೆ ಕಪ್ಪು ಮಚ್ಚೆ ಇದೆ. ಸಿಮೆಂಟ್‌ ಬಣ್ಣದ ಟಿ-ಶರ್ಟ್‌, ನೀಲಿ ಬಣ್ಣದ ಚಡ್ಡಿ ಇದೆ.

ಈ ಚಹರೆಯ ವ್ಯಕ್ತಿಯ ಕುರಿತಂತೆ ಮಾಹಿತಿ ಇದ್ದಲ್ಲಿ ರೈಲ್ವೇ ಪೊಲೀಸ್‌ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.