Viral Video : ಅಮ್ಮನ ಕುತ್ತಿಗೆ ಹಿಡಿದು ಬೆನ್ನ ಮೇಲೆ ಸವಾರಿ ಮಾಡಿದ ಮರಿ ಜಿರಾಫೆ – ವಿಡಿಯೋ ವೈರಲ್

Viral Video : ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವಂತಹ ಕೆಲವು ವಿಡಿಯೋಗಳು ನಮಗೆ ನಿಜಕ್ಕೂ ಅಚ್ಚರಿಯನ್ನುಂಟುಮಾಡುತ್ತದೆ. ಜೊತೆಗೆ ಮನಸ್ಸಿಗೆ ಮುಧವನ್ನು ಕೂಡ ನೀಡುತ್ತವೆ. ಅಂತೆಯೇ ಇದೀಗ ಅಂತದ್ದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ(Viral Video)ವೈರಲಾಗಿದೆ.

ನಿಜಕ್ಕೂ ಈ ದೃಶ್ಯ ತುಂಬಾ ಮುದ್ದಾದ ಮತ್ತು ಅಪರೂಪವಾಗಿದ್ದು. ಇದು ಜಿರಾಫೆ ಮತ್ತು ಅದರ ಪುಟ್ಟ ಮರಿಯ ವೀಡಿಯೊ. ಜಿರಾಫೆ ಮತ್ತು ಅದರ ಮರಿ ನಡುವಿನ ಬಾಂಧವ್ಯವನ್ನು ನೋಡಿದರೆ ಜನರ ಮುಖದಲ್ಲಿ ಮಂದಹಾಸ ಮೂಡುವುದು ಸಹಜ. ಇದರಲ್ಲಿ ತಾಯಿ ಜಿರಾಫೆಯು ತನ್ನ ಪುಟ್ಟ ಮರಿಯನ್ನು ಬೆನ್ನಿನ ಮೇಲೆ ಕೂರಿಸಿಕೊಂಡು ಸವಾರಿ ಮಾಡುತ್ತಿರುವುದನ್ನು ಕಾಣಬಹುದು.

ಅಂದಹಾಗೆ @Enezator ಹೆಸರಿನ ಖಾತೆಯಿಂದ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಅದರೊಂದಿಗೆ – “ಪ್ರಕೃತಿಯಲ್ಲೂ ತಾಯಿ ತಾಯಿಯೇ” ಎಂದು ಶೀರ್ಷಿಕೆ ಕೊಡಲಾಗಿದೆ. ಹಂಚಿಕೊಂಡ ನಂತರ, ಈ ವೀಡಿಯೊ ಇದುವರೆಗೆ 1.6 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

Leave A Reply

Your email address will not be published.