Ujire: ಬೈಕ್ ಕಾರು ನಡುವೆ ಅಪಘಾತ; ದ್ವಿಚಕ್ರ ಸವಾರನಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು
Ujire: ನಿನ್ನಿಕಲ್ಲು ಸಮೀಪ ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿದೆ. ಈ ಘಟನೆ ಡಿ.14 ರಂದು ಸಂಜೆ ನಡೆದಿದೆ.
ಉಜಿರೆಯಿಂದ ನಿನ್ನಿಕಲ್ಲಿನ ತಮ್ಮನ ಮನೆಗೆಂದು ಪ್ರಯಾಣ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರ ಲಾಯಿಲ ಗ್ರಾಮದ ಉಗ್ರಾಣಿ ಬೆಟ್ಟು ನಿವಾಸಿ ಸುಂದರ ಆಚಾರ್ಯ ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಾರು ಚಲಾಯಿಸುತ್ತಿದ್ದ ಚಾಲಕ ಗುಣಪಾಲ್ ಅವರು ಬೆಳಾಲಿನಿಂದ ಉಜಿರೆ ಕಡೆಗೆ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ದ್ವಿಚಕ್ರ ವಾಹನವು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ.