B Y Vijayendra: ರೆಬೆಲ್ ನಾಯಕ ಯತ್ನಾಳ್ ಹುಟ್ಟುಹಬ್ಬಕ್ಕೆ ಪೋಸ್ಟ್ ಹಾಕಿ ಶುಭಕೋರಿದ ವಿಜಯೇಂದ್ರ !! ಏನಿಲ್ಲ ಹಾರೈಸಿದ್ರು ಗೊತ್ತಾ?

B Y Vijayendra : ರಾಜ್ಯದಲ್ಲಿ ಬಿಜೆಪಿಯ ಒಳ ಜಗಳ ತಾರಕ ಕೇಳುತ್ತಿದೆ. ಅದರಲ್ಲೂ ಕೂಡ ಯತ್ನಾಳ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ನಡುವಿನ ಅಸಮಾಧಾನದ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಷಯ. ಬಿಜೆಪಿ ಇದೇ ಕಾರಣದಿಂದ ಎರಡು ಬಣಗಳಾಗಿ ರೂಪುಗೊಂಡಿದೆ. ಅದರಲ್ಲೂ ಬಿಜೆಪಿ ರೆಬೆಲ್ ನಾಯಕ ಯತ್ನಾಳ್‌ ಯಾವುದೇ ಕಾರ್ಯಕ್ರಮಕ್ಕೆ ಹೋದಾಗಲು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ(B Y Vijayendra) ಅವರಿಗೆ ಟಾಂಗ್‌ ನೀಡುತ್ತಲೇ ಇದ್ದಾರೆ. ಒಟ್ಟಿನಲ್ಲಿ ಯಡಿಯೂರಪ್ಪ ಕುಟುಂಬದ ವಿರುದ್ಧ ಯತ್ನಾಳ್(Yatnal) ಯಾವಾಗಲೂ ತೊಡೆತಟ್ಟುತ್ತಿರುತ್ತಾರೆ.

ಇಷ್ಟೆಲ್ಲಾ ನಡೆದರೂ, ಯತ್ನಾಳ್ ತಮ್ಮ ಕುಟುಂಬದ ವಿರುದ್ಧ ಹಾಗೂ ತಮ್ಮ ವಿರುದ್ಧ ಅಷ್ಟೆಲ್ಲ ಆರೋಪಗಳನ್ನು ಮಾಡುತ್ತ ಹರಿಹಾಯಿದರು ವಿಜೇಂದ್ರ ಮಾತ್ರ ಇದನ್ನೆಲ್ಲ ಮರೆತಂತೆ ಕಾಣುತ್ತಿದೆ. ಯಾಕೆಂದರೆ ಇದೀಗ ವಿಜಯೇಂದ್ರ ಅವರು ತನ್ನ ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ರೆಬೆಲ್‌ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್ ಅವರಿಗೆ ಜನ್ಮದಿನದ ಪ್ರಯುಕ್ತ ಶುಭಾಶಯ ಕೋರಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?
ಬಿಜೆಪಿ ರೆಬೆಲ್ ನಾಯಕ ಯತ್ನಾಳ್‌ ಅವರ ಜನ್ಮದಿನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟ್ವೀಟ್ ಮೂಲಕ ವಿಶ್ ಮಾಡಿದ್ದು, ‘ಮಾಜಿ ಕೇಂದ್ರ ಸಚಿವರು, ವಿಜಯಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಪಕ್ಷದ ಹಿರಿಯ ಶಾಸಕರಾಗಿರುವ ತಮಗೆ ಭಗವಂತನು ಉತ್ತಮ ಆಯುರಾರೋಗ್ಯ ಕರುಣಿಸಿ, ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡಲು ಹೆಚ್ಚಿನ ಶಕ್ತಿಯನ್ನು ದಯಪಾಲಿಸಲೆಂದು ಹಾರೈಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

Leave A Reply

Your email address will not be published.