Pushpa 2 Stampede Case: ಪುಷ್ಪ ನಟ ಅಲ್ಲು ಅರ್ಜುನ್‌ಗೆ 14 ದಿನಗಳ ನ್ಯಾಯಾಂಗ ಬಂಧನ

Pushpa 2 Stampede Case: ಡಿಸೆಂಬರ್ 4 ರಂದು ಪುಷ್ಪ 2 ರ ಪ್ರಥಮ ಪ್ರದರ್ಶನದ ವೇಳೆ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ಅವರನ್ನು ಇಂದು ಬಂಧಿಸಲಾಯಿತು. ಹೈದರಾಬಾದ್‌ನ ನಾಂಪಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಯ ನಂತರ, ನಟ ಅಲ್ಲು ಅರ್ಜುನ್‌ಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.

ಆದರೆ ಇದೀಗ, ಕಾಲ್ತುಳಿತದಿಂದ ಮಹಿಳೆ ಸಾವು ಪ್ರಕರಣದಲ್ಲಿ 14 ದಿನಗಳ ನ್ಯಾಯಾಂಗ ಬಂಧನವನ್ನು ನಾಂಪಲ್ಲಿ ನ್ಯಾಯಾಲಯವು ನೀಡಿತ್ತು. ಇದೀಗ ಹೈಕೋರ್ಟ್‌ ಮಧ್ಯಂತರ ಜಾಮೀನನ್ನು ನೀಡಿದೆ. ಆದರೆ ಇಲ್ಲೊಂದು ಟ್ವಿಸ್ಟ್‌ ಇದೆ. ಅದೇನೆಂದರೆ ಅಲ್ಲು ಅರ್ಜುನ್‌ ಅವರು 14 ದಿನಗಳ ಜೈಲು ವಾಸ ತಪ್ಪಿಸಿಕೊಂಡರೂ, ಒಂದು ದಿನ ಅಥವಾ ಸೋಮವಾರದವರೆಗೂ ಜೈಲು ವಾಸ ಅನುಭವಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಲ್ಲು ಅರ್ಜುನ್‌ ರೇವತಿ ಸಾವಿಗೆ ನೇರ ಕಾರಣವಲ್ಲ. ಇದು ಅಚಾನಾಕ್ಕಾಗಿ ನಡೆದಿರುವ ಘಟನೆ. ಇಂತಹಾ ಅಪಘಾತಗಳು ನಡೆಯುತ್ತಲೇ ಇರುತ್ತದೆ. ಈ ರೀತಿಯ ಘಟನೆಗಳಿಗೆ ನಟರನ್ನು, ರಾಜಕಾರಣಿಗಳನ್ನು ಕೊಲೆಗಾರರು ಎನ್ನಲಾಗದು. ವಾದ ಆಲಿಸಿದಿ ನ್ಯಾಯಮೂರ್ತಿಗಳು ಅಲ್ಲು ಅರ್ಜುನ್‌ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಸದ್ಯಕ್ಕೆ ಅಲ್ಲು ಅರ್ಜುನ್‌ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ. ನಟ ಅಲ್ಲು ಅರ್ಜುನ್‌ ಬೆಳಗ್ಗೆ ಅರೆಸ್ಟ್‌ ಆಗಿದ್ದು, ಮಧ್ಯಾನ 14 ದಿನಗಳ ನ್ಯಾಯಾಂಗ ಬಂಧನ ನೀಡಲಾಗಿತ್ತು. ಆದರೆ ಸಂಜೆ ಹೈಕೋರ್ಟ್‌ ಮಧ್ಯಂತರ ಜಾಮೀನು ನೀಡಿದೆ. ಬಿಡುಗಡೆ ಆದೇಶದ ಪ್ರತಿ ಇಂದೇ ಜೈಲು ಅಧಿಕಾರಿಗಳಿಗೆ ನೀಡಿದಲ್ಲಿ ಅಲ್ಲು ಅರ್ಜುನ್‌ ಇಂದೇ ಬಿಡುಗಡೆ ಆಗುತ್ತಾರೆ. ಇಲ್ಲವಾದಲ್ಲಿ ಸೋಮವಾರ ಬಿಡುಗಡೆ ಭಾಗ್ಯವಿರಲಿದೆ.

ಹೈದರಾಬಾದ್‌ನ ಥಿಯೇಟರ್‌ನಲ್ಲಿ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಬಗ್ಗೆ ತನ್ನ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ನಟ ಅಲ್ಲು ಅರ್ಜುನ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇನ್ನೊಂದು ಕಡೆ, ನನ್ನ ಪತ್ನಿ ಸಾವನ್ನಪ್ಪಿದ ಕಾಲ್ತುಳಿತಕ್ಕೂ ಅಲ್ಲೂ ಅರ್ಜುನ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಮೃತ ರೇವತಿ ಪತಿ ಭಾಸ್ಕರ್‌ ಹೇಳಿದ್ದಾರೆ.

1 Comment
  1. Beylikdüzü su kaçağı tespiti Beşiktaş su kaçağı tespiti: Beşiktaş’ta su kaçağına çözüm arayanlara profesyonel destek. http://www.hoektronics.com/author/kacak/

Leave A Reply

Your email address will not be published.