Bantwala : ಪುರಸಭೆ ಸದಸ್ಯನ ಗ್ಯಾಂಗ್ ನಿಂದ ಗರ್ಭಿಣಿ ಮಹಿಳೆ ಇರೋ ಮನೆಗೆ ನುಗ್ಗಿ ಹಲ್ಲೆ – ಪ್ರಕರಣ ದಾಖಲು!!
Bantwala : ಬಂಟ್ವಾಳದ ಬಿ.ಮೂಡ ಗ್ರಾಮದಲ್ಲಿ ಕಾಂಗ್ರೆಸ್ ಪುರಸಭೆ ಸದಸ್ಯನ ಪಟಾಲಂ ಗರ್ಭಿಣಿ ಮಹಿಳೆ ಇರುವ ಮನೆಗೆ ನುಗ್ಗಿ ಗೂಂಡಗಿರಿ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.
ಹೌದು, ಬಂಟ್ವಾಳ(Bantwala ) ಪುರಸಭೆ ಸದಸ್ಯ, ರೌಡಿಶೀಟರ್ ಆಗಿರೊ ಅಸೈನರ್ ತಂಡದಿಂದ ಈ ದಾಂಧಲೆ ನಡೆದಿದ್ದು ಮನೆ ಬಾಡಿಗೆ ವ್ಯಾಜ್ಯ ಸಂಬಂಧ ಮಧ್ಯರಾತ್ರಿ ಗರ್ಭಿಣಿ ಮಹಿಳೆ ಇದ್ದ ಮನೆಗೆ ನುಗ್ಗಿ ಪುರುಷರ ಮೇಲೆ ಹಲ್ಲೆ ಮಾಡಲಾಗಿದೆ. ಸಾಹುಲ್ ಹಮೀದ್ ಎಂಬುವವರ ಮನೆಗೆ ಮಧ್ಯರಾತ್ರಿ ನುಗ್ಗಿ ಅಸೈನರ್ ಹಲ್ಲೆಮಾಡಿದ್ದಾನೆ ಎಂದು ಗಂಭೀರ ಆರೋಪ ಕೇಳಿಬಂದಿದೆ.
ಇನ್ನು ಈ ವೇಳೆ 112ಗೆ ಕರೆ ಮಾಡಿದ್ದು, ಇದರಿಂದ ಪೊಲೀಸರು ಬಂದಿದ್ದರಿಂದ ಅನಾಹುತ ತಪ್ಪಿದೆ. ಹಲ್ಲೆಯಿಂದ ಕೆಲವರಿಗೆ ಗಾಯಗಳಾಗಿದ್ದು, ಬಂಟ್ವಾಳ ಟೌನ್ ಠಾಣೆಯಲ್ಲಿ ಎರಡು ಕಡೆಯಿಂದ ದೂರು-ಪ್ರತಿದೂರು ದಾಖಲಾಗಿದೆ. ಪೊಲೀಸರು ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್.ಐ.ಆರ್. ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರೋ ಆರೋಪಿಗಳಿಗಾಗಿ ತನಿಖೆ ನಡೆಸಿದ್ದಾರೆ.