Vitla: ಪತಿ-ಪತ್ನಿ ಜಗಳ; ಪತ್ನಿ ಸಾವು

Share the Article

Vitla: ಪತಿ ಪತ್ನಿ ನಡುವೆ ಜಗಳ ನಡೆದಿದ್ದು, ಪತಿ ಪತ್ನಿಯನ್ನು ದೂಡಿದ ಪರಿಣಾಮ ಗಂಭೀರ ಗಾಯಗೊಂಡು ಮಹಿಳೆ ಮೃತಹೊಂದಿದ ಘಟನೆಯೊಂದು ಪುಣಚದಲ್ಲಿ ಡಿ.14 ರಂದು (ಇಂದು) ನಡೆದಿದೆ.

ದೇವಿನಗರ ನಿವಾಸಿ ಲೀಲಾ (45) ಎಂಬುವವರೇ ಮೃತ ಮಹಿಳೆ. ದಿನಾ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಸಂಜೀವ, ಮೊನ್ನೆ ಕೂಡಾ ಗಲಾಟೆ ಮಾಡಿದ್ದು, ಹೆಂಡತಿಯನ್ನು ದೂಡಿದ್ದಾನೆ. ಮಾಹಿತಿ ತಿಳಿದ ಸ್ಥಳೀಯರು ಕೂಡಲೇ ಆಕೆಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಡಿ.12 ರಂದು ಲೀಲಾ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಪೊಲೀಸ್‌ ತನಿಖೆಯ ಮೂಲಕ ಇದೊಂದು ಕೊಲೆ ಎಂದು ಹೇಳಲಾಗಿದ್ದು, ಆರೋಪಿ ಸಂಜೀವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave A Reply