Uppinangady : ಕಾರ್ಮಿಕ ದೀಪಕ್ ಕೊಲೆ ಕೇಸ್ – ಪ್ರಕರಣ ಭೇದಿಸಿ ಆರೋಪಿ ಬಂಧಿಸಿದ ಪೊಲೀಸರು!!

Uppinangady: ದಕ್ಷಿಣ ಕನ್ನಡ ಉಪ್ಪಿನಂಗಡಿಯ(Uppinangady ) ಬಸ್ ನಿಲ್ದಾಣದ ಬಳಿ ನಿರ್ಮಾಣ ಹಂತದಲ್ಲಿರುವ ಗ್ರಾ.ಪಂ.ನ ಗ್ರಂಥಾಲಯ ಕಟ್ಟಡದ ಮೇಲೆ ಯುವಕನೋರ್ವನ ಮೃತದೇಹವು ಡಿ. 9ರ ಬೆಳಗ್ಗೆ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿತ್ತು. ಕೊಲೆ ಯಾರು ಮಾಡಿದ್ದು ಎಂದು ತಿಳಿದಿರಲಿಲ್ಲ. ಅದರೀಗ ಕೊಲೆ ಪ್ರಕರಣವನ್ನು ಭೇದಿಸಿರುವ ಉಪ್ಪಿನಂಗಡಿ ಪೊಲೀಸರು, ಆರೋಪಿ ಬೆಳ್ತಂಗಡಿ ತಾಲ್ಲೂಕು ಕಲ್ಮಂಜ ಗ್ರಾಮದ ಕುಂಬ್ರಂಗೆ ನಿವಾಸಿ ಬಾಬು ಯಾನೆ ರುದ್ರ(68) ಎಂಬಾತನನ್ನು ಬಂಧಿಸಿದ್ದಾರೆ.

 

ಹೌದು, ಅಸ್ಸಾಂ ರಾಜ್ಯದ ಕರ್ಬಿ ಅಂಗ್ಲಾಂಗ್‌ ಜಿಲ್ಲೆಯ ಕ್ರಿಶ್ಚಿಯನ್‌ ಗ್ರಾಮದ ದೀಪಕ್‌ ಬೆಂಗರ (34) ಎಂಬಾತ ಕೊಲೆಗೀಡಾದವ. ಈತ ಕೆಲವು ಸಮಯಗಳ ಹಿಂದೆ ಸ್ಥಳೀಯ ಬಾರ್‌ ಆಯಂಡ್‌ ರೆಸ್ಟೋರೆಂಟಿನಲ್ಲಿ ಕೆಲಸ ಮಾಡಿಕೊಂಡಿದ್ದ. ಹಾಗೂ ಇತ್ತೀಚೆಗೆ ಕಟ್ಟಡ ನಿರ್ಮಾಣ ಕಾರ್ಯ ದಲ್ಲಿ ಕಾರ್ಮಿಕನಾಗಿ ತೊಡಗಿಕೊಂಡಿದ್ದ. ಆದರೆ ಶವವಾಗಿ ಪತ್ತೆಯಾಗಿದ್ದ. ಇದೀಗ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಆರೋಪಿಯನ್ನು ಉಳ್ಳಾಲ ತಾಲ್ಲೂಕಿನ ದೇರಳಕಟ್ಟೆ ಎಂಬಲ್ಲಿ ವಶಕ್ಕೆ ಪಡೆಯಲಾಗಿದೆ. ಆರೋಪಿ ಬಾಬು 12 ವರ್ಷಗಳಲ್ಲಿ 5 ದೇವಸ್ಥಾನ ಸೇರಿದಂತೆ 7 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಕಟ್ಟಡ ಕಾರ್ಮಿಕನಾಗಿರುವ ಈತ ಕುಡಿತದ ಚಟಕ್ಕೆ ಬಿದ್ದು, ಕುಟುಂಬ ಸದಸ್ಯರನ್ನು ತೊರೆದು ಎಲ್ಲೆಂದರಲ್ಲಿ ತಿರುಗುತ್ತಿದ್ದ. ರಾತ್ರಿ ಹೊತ್ತಿನಲ್ಲಿ ಉಪ್ಪಿನಂಗಡಿ ಪೇಟೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಆರೋಪಿ ಹೇಳಿದ್ದೇನು?
‘ಡಿ. 8ರಂದು ರಾತ್ರಿ ನಿರ್ಮಾಣ ಹಂತದಲ್ಲಿರುವ ಕಟ್ಟದಲ್ಲಿ ಮಲಗಲು ಹೋಗಿದ್ದೆ. ಅಲ್ಲಿ ಬೇರೊಬ್ಬರು ಮಲಗಿದ್ದರು. ಎಚ್ಚರಗೊಂಡ ಅವರು ಇಲ್ಲಿ ನಿನಗೆ ಮಲಗಲು ಅವಕಾಶ ಇಲ್ಲ ಎಂದು ನನ್ನನ್ನು ಬೆದರಿಸಿ ಕಳುಹಿಸಿದ್ದರು. ನಾನು ಕಟ್ಟಡದ ಕಾವಲುಗಾರ ಇರಬಹುದು ಎಂದು ಬಾವಿ ವಾಪಸ್‌ ಬಂದಿದ್ದೆ. ಆದರೆ, ಬಸ್ ನಿಲ್ದಾಣಕ್ಕೆ ಬಂದು ನೋಡಿದಾಗ ನನ್ನ ಪ್ಯಾಂಟಿನ ಜೇಬಿನಲ್ಲಿದ್ದ ಹಣ ಮತ್ತು ಮೊಬೈಲ್ ಕಾಣೆಯಾಗಿತ್ತು. ಇದನ್ನು ಆತ ಕದ್ದಿರಬಹುದು ಎಂದು ಭಾವಿಸಿ, ಮರಳಿ ಆ ಕಟ್ಟಡಕ್ಕೆ ಹೋಗಿ ದೊಣ್ಣೆಯಿಂದ ತಲೆಗೆ ಹೊಡೆದು ಆತನನ್ನು ಕೊಂದೆ’ ಎಂದು ಆರೋಪಿ ಬಾಬು ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.