S M Krishna: ಗಂಡು ಮಕ್ಕಳಿಲ್ಲದ ಎಸ್ ಎಂ ಕೃಷ್ಣ ಚಿತೆಗೆ ಅಗ್ನಿಸ್ಪರ್ಶ ಮಾಡುವವರು ಯಾರು ಗೊತ್ತಾ ? ಇವರೇ ಅಂತೆ ನೋಡಿ

S M Krishna : ಕರ್ನಾಟಕದ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಸ್.​ ಎಂ. ಕೃಷ್ಣ (SM Krishna) ಅವರು ನಿಧನರಾಗಿದ್ದಾರೆ. ಮಂಗಳವಾರ ನಸುಕಿನ ಜಾವ 2:30ರ ಸುಮಾರಿಗೆ ಬೆಂಗಳೂರಿನ ಸದಾಶಿವನಗರ ಮನೆಯಲ್ಲಿ ಕೊನೆಯುಸಿರು ಎಳೆದರು. ಎಸ್​ಎಂ ಕೃಷ್ಣ ಅವರ ಸಾವಿನ ಸುದ್ದಿ ಕೇಳಿ ರಾಜ್ಯ ಮತ್ತು ದೇಶದ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಎಸ್​ಎಂ ಕೃಷ್ಣ ಅಂತ್ಯಕ್ರಿಯೆ ಅವರ ತವರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಇಂದು ಸಂಜೆ ನಡೆಯಲಿದೆ. ಈ ನಡುವೆ ಎಸ್ಎಮ್ ಕೃಷ್ಣ ಅವರ ಪಾರ್ಥಿವ ಅಗ್ನಿಸ್ಪರ್ಶ ಮಾಡುವವರು ಯಾರು ಎಂಬುದು ನಿರ್ಧಾರವಾಗಿದೆ.

 

 ಚಿತೆಗೆ ಅಗ್ನಿಸ್ಪರ್ಶ ಮಾಡುವವರು ಗಂಡು ಮಕ್ಕಳು. ಆದರೆ ಎಸ್ಎಮ್ ಕೃಷ್ಣ ಅವರಿಗೆ ಗಂಡು ಮಕ್ಕಳಿಲ್ಲ. ಹೀಗಾಗಿ ಅಗ್ನಿಸ್ಪರ್ಶ ಮಾಡುವವರು ಯಾರು ಎಂಬುದು ಹಲವರ ಪ್ರಶ್ನೆಯಾಗಿತ್ತು. ಅದರೀಗ ಅವರ ಚಿತೆಗೆ ಬೆಂಕಿ ಇಟ್ಟು ಅಂತಿಮ ವಿಧಿ ವಿಧಾನ ಮಾಡುವವರು ಯಾರು ಎಂದು ಈಗಾಗಲೇ ನಿರ್ಧಾರವಾಗಿದೆ.

 

 ಕೃಷ್ಣ ಅವರಿಗೆ ಮಾಳವಿಕಾ ಮತ್ತು ಶಾಂಭವಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಪುತ್ರಿ ಮಾಳವಿಕಾ ಪುತ್ರ ಅಮರ್ಥ್ಯ ಹೆಗ್ಡೆ. ಹಾಲಿ ಡಿಸಿಎಂ ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾ ಪತಿಯೇ ಅಮರ್ಥ್ಯ ಹೆಗ್ಡೆ. ಈಗ ಎಸ್‌ಎಂ ಕೃಷ್ಣ ಅಂತಿಮ ವಿಧಿ ವಿಧಾನವನ್ನು ಮೊಮ್ಮಗ ಅಮರ್ಥ್ಯನೇ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಗಂಡು ಮಗನ ಸ್ಥಾನದಲ್ಲಿ ನಿಂತು ಅಮರ್ಥ್ಯನೇ ತಾತನ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರಂತೆ ಎಂದು ಮೂಲಗಳು ತಿಳಿಸಿವೆ.

Leave A Reply

Your email address will not be published.