Bank Holiday : ಎಸ್ ಎಂ ಕೃಷ್ಣ ನಿಧನ ಹಿನ್ನೆಲೆ – ಇಂದು ಬ್ಯಾಂಕ್ ಗಳಿಗೆ ರಜೆ ಇದೆಯೋ? ಇಲ್ವೋ ?
Bank Holiday : ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಸಚಿವ, ರಾಜಕೀಯ ಧುರೀಣ ಎಸ್ ಎಂ ಕೃಷ್ಣ(S M Krishna)ಅವರ ಅಗಲಿಕೆಗೆ ಇಡೀ ರಾಜ್ಯ ಶೋಕ ಸಾಗರದಲ್ಲಿ ಮುಳುಗಿದೆ. ಈ ಹಿನ್ನೆಲೆಯಲ್ಲಿ ಇಂದು ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ಶಾಲಾ- ಕಾಲೇಜುಗಳಿಗೆ, ಕಚೇರಿಗಳಿಗೆ ಸರ್ಕಾರಿ ರಜೆಯನ್ನು ಘೋಷಣೆ ಮಾಡಿದೆ. ಆದರೆ ಈ ಬೆನ್ನಲ್ಲೇ ಇಂದು ಬ್ಯಾಂಕುಗಳಿಗೆ ರಜೆ(Bank Holiday) ಇದೆಯೋ ಇಲ್ಲವೋ ಎಂಬುದು ಹಲವರ ಪ್ರಶ್ನೆಯಾಗಿದೆ. ಅದಕ್ಕೆ ಇಲ್ಲಿದೆ ನೋಡಿ ಉತ್ತರ.
ಹೌದು, ಬುಧವಾರ ಒಂದು ದಿನ ಸರ್ಕಾರಿ ರಜೆ ಘೋಷಿಸಲಾಗಿದೆ. ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಿಗೆ ಡಿ. 11ರಂದು ರಜೆ ನೀಡಲಾಗಿದೆ. ಖಾಸಗಿ ಶಾಲೆಗಳೂ ನಾಳೆ ಬಂದ್ ಆಗಿರುತ್ತವೆ. ಇದೇ ವೇಳೆ ಬ್ಯಾಂಕುಗಳಿಗೂ ರಜೆ ಇರುತ್ತದಾ? ಇಂದು ಹಲವರು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಅಧಿಕೃತ ಘೋಷಣೆಗಳು ಆಗಿಲ್ಲ. ಯಾಕೆಂದರೆ ಬ್ಯಾಂಕುಗಳು ಆರ್ ಬಿ ಐ ನಿಯಂತ್ರಣದಲ್ಲಿ ಇರುತ್ತವೆ. ಹೀಗಾಗಿ ಇದುವರೆಗೂ ಆರ್ ಬಿ ಐನಿಂದ ಯಾವುದೇ ಆದೇಶ ಬಂದಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾಂಕುಗಳಿಗೆ ರಜೆ ಇರುವ ಸಾಧ್ಯತೆ ಇಲ್ಲ. ಬುಧವಾರ ರಾಷ್ಟ್ರವ್ಯಾಪಿ ಬ್ಯಾಂಕುಗಳು ಕಾರ್ಯನಿರ್ವಹಿಸುವಂತೆ ಕರ್ನಾಟಕದಲ್ಲೂ ಬ್ಯಾಂಕ್ ಕಚೇರಿಗಳು ಬಾಗಿಲು ತೆರೆದಿರುತ್ತವೆ.