S M Krishna : ಎಸ್‌.ಎಂ.ಕೃಷ್ಣ ಅಂತ್ಯಸಂಸ್ಕಾರಕ್ಕೆ 1,000 ಕೆ.ಜಿ ಗಂಧದ ಕಟ್ಟಿಗೆ ಬಳಕೆ..!! ಇದರ ಹಿಂದಿದೆ ಆ ಒಂದು ಪ್ರಬಲ ಕಾರಣ

S M Krishna : ನಮ್ಮೆಲ್ಲರನ್ನು ಅಗಲಿದ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಅವರಿಗೆ ಇಂದು ಮದ್ದೂರಿನ ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಅವರ ಚಿತೆಗೆ ಶ್ರೀಗಂಧದ ಕಟ್ಟಿಗೆಗಳನ್ನೇ ಬಳಸಲಾಗುತ್ತಿದೆ. ಇದಕ್ಕೆ ಕಾರಣವೂ ಇದೆ. ಹಾಗಿದ್ರೆ ಏನದು?

 

 

ಹೌದು, ಸೋಮನಹಳ್ಳಿಯಲ್ಲಿ(Somanahalli) ಅಂತ್ಯಕ್ರಿಯೆಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಹುಟ್ಟೂರಿನಲ್ಲೇ ಸಕಲ ಸರ್ಕಾರೀ ಗೌರವಗಳೊಂದಿಗೆ ಎಸ್‌ಎಂ ಕೃಷ್ಣಗೆ ಅಂತಿಮ ಕ್ರಿಯೆ ನೆರವೇರಿಸಲಾಗುತ್ತದೆ. ಈ ವೇಳೆ ಅವರ ಚಿತೆಗೆ 1000 ಕೆ.ಜಿ.ಗಳಷ್ಟು ಶ್ರೀಗಂಧದ ತುಂಡುಗಳನ್ನು ಬಳಕೆ ಮಾಡಲಾಗುತ್ತದೆ ಎಂದು ಶಾಸಕ ರವಿ ಗಣಿಗ ಹೇಳಿದ್ದಾರೆ. ಇದಕ್ಕೆ ಕಾರಣವೂ ಇದೆ.

 

ಅದೇನೆಂದರೆ ಎಸ್‌.ಎಂ.ಕೃಷ್ಣ(S M Krishna)ಅವರು ಸಿಎಂ ಆಗಿದ್ದ ಅವಧಿಯಲ್ಲಿ ರೈತರಿಗೆ ಗಂಧದ ಮರಗಳನ್ನು ಬೆಳೆಯಲು ಅನುವು ಮಾಡಿಕೊಟ್ಟಿದ್ದರು. ಇದರ ನೆನಪಾರ್ಥ ಬರೋಬ್ಬರಿ 1,000 ಕೆ.ಜಿ ಗಂಧದ ಕಟ್ಟಿಗೆ ಬಳಸಿ ಎಸ್.ಎಂ.ಕೃಷ್ಣ ಅವರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಮೂಲಕ ಗೌರವ ಸಮರ್ಪಿಸಲಾಗುತ್ತದೆ ಎಂದು ತಿಳಿದುಬಂದಿದೆ.

 

ಅಂದಹಾಗೆ ಇಂದು ಸಂಜೆ 3 ಗಂಟೆ ನಂತರ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯ ಕ್ರಿಯೆ ನಡೆಯಲಿದೆ. ರಾಜಕೀಯ ಗಣ್ಯರು, ಅಭಿಮಾನಿಗಳು, ಸ್ವಾಮೀಜಿಗಳು ಈ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.

Leave A Reply

Your email address will not be published.