Karnataka Government : ಮೈಸೂರು ರಾಜ ಮನೆತನಕ್ಕೆ ಬರೋಬ್ಬರಿ 3 ಸಾವಿರ ಕೋಟಿ ಪರಿಹಾರ ನೀಡಲು ಮುಂದಾದ ರಾಜ್ಯ ಸರ್ಕಾರ? ಯಾಕಾಗಿ ಗೊತ್ತಾ?

Karnataka Government : ಮೈಸೂರು ರಾಜ ಮನೆತನದೊಂದಿಗೆ ರಾಜ್ಯ ಸರ್ಕಾರ(ಕರ್ನಾಟಕ Government ) ಇತ್ತೀಚಿಗೆ ಕೆಲವೊಂದು ವಿಚಾರಗಳಲ್ಲಿ ವಿರೋಧವನ್ನು ಕಟ್ಟಿಕೊಂಡಿತ್ತು. ಆದರೆ ಈಗ ಅಚ್ಚರಿ ಎಂಬಂತೆ ಮೈಸೂರು ರಾಜ ಮನೆತನಕ್ಕೆ ರಾಜ್ಯ ಸರ್ಕಾರವು ಬರೋಬ್ಬರಿ 3000 ಕೋಟಿ ಪರಿಹಾರವನ್ನು ನೀಡಲು ಮುಂದಾಗಿದೆ ಎಂಬ ಸುದ್ದಿಯೊಂದು ಸದ್ದು ಮಾಡುತ್ತಿದೆ. ಹಾಗಿದ್ರೆ ಏನು ಈ ಹೊಸ? ಸರ್ಕಾರ ಯಾಕೆ ಈ ನಡೆಯನ್ನು ಅನುಸರಿಸಲಿದೆ? ಎಲ್ಲದಕ್ಕೂ ಉತ್ತರ ಇಲ್ಲಿದೆ ನೋಡಿ.

 

ಬೆಂಗಳೂರಿನಲ್ಲಿರುವ ಅರಮನೆ ಸುತ್ತಮುತ್ತಲು ಸದಾ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಇದು ಸರ್ಕಾರಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಹೀಗಾಗಿ ಅರಮನೆಯ ಸುತ್ತ ಟ್ರಾಫಿಕ್​ ಜಾಮ್​​​ ತಪ್ಪಿಸುವ ನಿಟ್ಟಿನಲ್ಲಿ ಬಳ್ಳಾರಿ ರಸ್ತೆ ಅಗಲೀಕರಣಕ್ಕಾಗಿ ಅರಮನೆಯ 15 ಎಕರೆ 39 ಗುಂಟೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಮೈಸೂರು ರಾಜಮನೆತನದ ವಾರಸುದಾರರಿಗೆ ಬರೋಬ್ಬರಿ 3 ಸಾವಿರ ಕೋಟಿ ರೂಪಾಯಿಗಳನ್ನು ಪರಿಹಾರದ ರೂಪದಲ್ಲಿ ನೀಡಲು ಮುಂದಾಗಿದೆ.

ಏನಿದು ಪ್ರಕರಣ?
ಜಯಮಹಲ್ ರಸ್ತೆ ಮತ್ತು ಬಳ್ಳಾರಿ ರಸ್ತೆಗೆ ಹೊಂದಿಕೊಂಡಿರುವ 15 ಎಕರೆ 39 ಗುಂಟಾ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮೈಸೂರು ಮಹಾರಾಜರ ಕಾನೂನು ವಾರಸುದಾರರಿಗೆ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್) ಪ್ರಮಾಣಪತ್ರದ ರೂಪದಲ್ಲಿ ರಾಜ್ಯ ಸರ್ಕಾರ ಆರು ವಾರಗಳಲ್ಲಿ 3,000 ಕೋಟಿ ರೂಪಾಯಿ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಮಂಗಳವಾರದ ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಈ ಹೊಸ ಬೆಳವಣಿಗೆ ಇದು ಸರ್ಕಾರದ ಇತ್ತೀಚಿನ ನಿಲುವಿಗೆ ವಿರುದ್ಧವಾಗಿದೆ. ತೀರ್ಪಿನ ಪ್ರಕಾರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬಳ್ಳಾರಿ ರಸ್ತೆಗೆ ಹೊಂದಿಕೊಂಡಿರುವ ಬೆಂಗಳೂರು ಅರಮನೆ ಭೂಮಿಗೆ ಪ್ರತಿ ಚದರ ಮೀಟರ್‌ಗೆ ರೂ 2,83,500 ಮತ್ತು ಜಯಮಹಲ್ ರಸ್ತೆಗೆ ಚದರ ಮೀಟರ್‌ಗೆ ರೂ 2,04,000 ಮಾರ್ಗಸೂಚಿ ಮೌಲ್ಯವನ್ನು ನಿಗದಿಪಡಿಸಬೇಕಾಗಿದೆ. ಇದು ಸರಿಸುಮಾರು ರೂ 3,000 ಕೋಟಿ ಅಥವಾ ಪ್ರತಿ ಎಕರೆಗೆ ರೂ 194 ಕೋಟಿಗಳ TDR ಪರಿಹಾರಕ್ಕೆ ಕಾರಣವಾಗಲಿದೆ. ಸುಮಾರು 3 ಲಕ್ಷ ಚದರ ಮೀಟರ್‌ನ ಹೆಚ್ಚುವರಿ ನಿರ್ಮಾಣ ಪ್ರದೇಶವನ್ನು ನಿರ್ಮಿಸಲು 3,000 ಕೋಟಿ ರೂಪಾಯಿ ಮೌಲ್ಯದ TDR ಪ್ರಮಾಣಪತ್ರಗಳನ್ನು ಬಿಲ್ಡರ್‌ಗಳು ಲೋಡ್ ಮಾಡಬಹುದಾದ್ದರಿಂದ ಈ ಪ್ರದೇಶವು ಬಹುಮಹಡಿ ಕಟ್ಟಡಗಳಿಂದ ಆವೃತ್ತವಾಗಲಿದೆ ಅನ್ನೋದು ನಿಶ್ಚಯವಾಗಿದೆ.

ಇನ್ನು ಈ ಸಂಗತಿಯು ಇದೀಗ ವಿವಾದಕ್ಕೆ ಕಾರಣವಾಗಿದ್ದು, ಅರಮನೆಗೆ ಸಂಬಂಧಿಸಿದ ಭೂಮಿಯಾದ್ದರಿಂದ ಸರ್ಕಾರ ಭಾರೀ ಮೊತ್ತದ ಹಣ ನೀಡುತ್ತಿದೆ. ಆದ್ರೆ ಈ ಭೂಮಿ ರೈತರಿಗೆ ಸೇರಿದ್ದಾಗಿದ್ದರೆ, ಆಗ ಸರ್ಕಾರ ಈ ಮೊತ್ತದ ಪರಿಹಾರ ಹಣ ಕೊಡುತ್ತಿರಲಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಸರ್ಕಾರದ ಈ ನಿರ್ಧಾರದ ಹಿಂದೆ ರಿಯಲ್​​ ಎಸ್ಟೇಟ್​ ಲಾಬಿ ನಡೆಯುತ್ತಿದೆಯಂತೆ. ಅಂದಾಜುಗಿಂತ ಸರಿಸುಮಾರು 2,00,000 ಪಟ್ಟು ಹೆಚ್ಚು ಭೂಮಿಗೆ ಪರಿಹಾರದ ಮೊತ್ತ ನೀಡಲಾಗುತ್ತಿದೆಯಂತೆ. ಇದರಲ್ಲಿ ರಿಯಲ್ ಎಸ್ಟೇಟ್ ಲಾಬಿ ಇದೆ ಎಂಬ ಆಪಾದನೆಗಳು ಜೋರಾಗಿ ಕೇಳಿಬಂದಿವೆ.

Leave A Reply

Your email address will not be published.